ಸಿದ್ದಾಪುರ, ಡಿ. ೨: ಕೇರಳ ರಾಜ್ಯದಲ್ಲಿ ವಿವಿಧ ಪ್ರಕರಣಗಳಲ್ಲಿ ಆರೋಪಿಯಾಗಿದ್ದ ವ್ಯಕ್ತಿ ಯೋರ್ವ ಲಾಡ್ಜ್ ವೊಂದರ ವ್ಯವಸ್ಥಾಪಕ ಹಾಗೂ ಸಹಾಯಕನ ಮೇಲೆ ಹಲ್ಲೆ ನಡೆಸಿರುವ ಘಟನೆ ಸಿದ್ದಾಪುರದಲ್ಲಿ ನಡೆದಿದೆ.

ಸಿದ್ದಾಪುರದ ಕರಡಿಗೋಡು ರಸ್ತೆಯಲ್ಲಿರುವ ಕರಾವಳಿ ಲಾಡ್ಜ್ಗೆ ನ.೨೯ರಂದು ಕೇರಳ ರಾಜ್ಯದ ಕಣ್ಣೂರು ಜಿಲ್ಲೆಯ ನಿವಾಸಿಯಾಗಿರುವ ರಿಯಾಜ್ ಎಂಬಾತನು ಸಿದ್ದಾಪುರದದ ಕರಡಿಗೋಡು ರಸ್ತೆಯಲ್ಲಿರುವ ಕರಾವಳಿ ಲಾಡ್ಜ್ಗೆ ಆಗಮಿಸಿದ್ದನು ಎನ್ನಲಾಗಿದೆ. ಈತ ರಾತ್ರಿ ತಂಗಿ ಮರುದಿನ ಅಪರಾಹ್ನ ಕೊಠಡಿ ಖಾಲಿ ಮಾಡಿ ನಂತರ ತಾ.೩೦ರಂದು ಮತ್ತೆ ಸಂಜೆ ಹಿಂತಿರುಗಿ ಬಂದ ರಿಯಾಜ್‌ನು ಲಾಡ್ಜ್ನಲ್ಲಿ ಕೆಲಸ ಮಾಡುತ್ತಿರುವ ಬಾಲನ್ ಎಂಬವರೊAದಿಗೆ ವಿನಾಕಾರಣ ಕಲಹ ನಡೆಸಿ ಹಲ್ಲೆ ನಡೆಸಿದ್ದಾನೆ. ಈ ಸಂದರ್ಭದಲ್ಲಿ ತಡೆಯಲು ಬಂದ ಲಾಡ್ಜ್ನ ವ್ಯವಸ್ಥಾಪಕರ ಮೇಲೂ ಹಲ್ಲೆ ನಡೆಸಿರುತ್ತಾನೆ. ಕೂಡಲೇ ವ್ಯವಸ್ಥಾಪಕ ಸುರೇಶ್ ಪೊಲೀಸ್ ಠಾಣೆಗೆ ದೂರವಾಣಿ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ರಿಯಾಜ್‌ನನ್ನು ಠಾಣೆಗೆ ಕರೆದೊಯ್ದಿದ್ದಾರೆ. ಅಲ್ಲಿ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ. ನಂತರ ಅದೇ ದಿನ ರಾತ್ರಿ ಮತ್ತೆ ಲಾಡ್ಜ್ಗೆ ಮದ್ಯ ಸೇವಿಸಿ ಬಂದು ಲಾಡ್ಜ್ನ ಸಿಬ್ಬಂದಿ ಬಾಲನ್ ಅವರ ಬಳಿ ಮುಂಗಡ ಹಣ ಕೊಡುವಂತೆ ವಿನಾ ಕಾರಣ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದು, ವ್ಯವಸ್ಥಾಪಕರನ್ನು ದೂಡಿ ಹಲ್ಲೆ ಮಾಡಿದ್ದಾನೆ. ಈ ಬಗ್ಗೆ ವ್ಯವಸ್ಥಾಪಕ ಪೊಲೀಸ್ ದೂರು ನೀಡಿದ್ದು, ಪೊಲೀಸರು ಸ್ಥಳಕ್ಕೆ ಆಗಮಿಸುವಷ್ಟರಲ್ಲಿ ಆತ ಅಲ್ಲಿಂದ ತೆರಳಿದ್ದಾನೆ. ರಿಯಾಜ್ ಲಾಡ್ಜ್ನಲ್ಲಿ ಕೊಠಡಿ ಪಡೆಯುವ ಮುಂಚಿತ ಈತ ತಾನು ಹುಣಸೂರುವಿನಲ್ಲಿ ಕೆಲಸ ಮಾಡುತ್ತಿದ್ದು, ನೆಲ್ಯಹುದಿಕೇರಿಯಲ್ಲಿ ವ್ಯಕ್ತಿಯೋರ್ವನನ್ನು ನೋಡಲು ಬಂದಿರುವುದಾಗಿ ತಿಳಿಸಿದ್ದಾನೆ. ಪೊಲೀಸರು ರಿಯಾಜ್ ಕುರಿತು ಮಾಹಿತಿ ಕಲೆ ಹಾಕಿದಾಗ, ಈತನ ವಿರುದ್ಧ ಕೇರಳ ರಾಜ್ಯದಲ್ಲಿ ಕೆಲವು ಪ್ರಕರಣಗಳು ದಾಖಲಾಗಿವೆ ಎಂದು ತಿಳಿದು ಬಂದಿದೆ. ಆದರೆ, ಈತ ಸಿದ್ದಾಪುರದಿಂದ ತೆರಳಿದ ನಂತರವಷ್ಟೇ ಈ ವಿಚಾರ ತಿಳಿದು ಬಂದಿದ್ದು, ಇದೀಗ ಪೊಲೀಸರು ತಲೆಕೆಡಿಸಿಕೊಂಡಿದ್ದಾರೆ. ಆದರೆ, ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ರಿಯಾಜ್ ವಿರುದ್ಧ ಯಾವುದೇ ಪ್ರಕರಣಗಳು ದಾಖಲಾಗಿರುವುದಿಲ್ಲ.

-ವಾಸು.