ವೀರಾಜಪೇಟೆ, ಡಿ. ೨: ಸಂತ ಅನ್ನಮ್ಮ ಕ್ರೆöÊಸ್ತ ಸ್ನೇಹಿತರ ಸಂಘದ ವಾರ್ಷಿಕೋತ್ಸವ ಅಂಗವಾಗಿ ಪುರುಷರ ಮುಕ್ತ ಸೂಪರ್ ೭+೨ ಕಾಲ್ಚೆಂಡು ಪಂದ್ಯಾಟವು ತಾ. ೧೬ ರಿಂದ ಆಅರಂಭವಾಗಲಿದೆ ಎಂದು ಸಂತ ಅನ್ನಮ್ಮ ಕ್ರೆöÊಸ್ತ ಸ್ನೇಹಿತರ ಸಂಘದ ಪದಾಧಿಕಾರಿಗಳು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಸಂತ ಅನ್ನಮ್ಮ ಕ್ರೆöÊಸ್ತ ಸ್ನೇಹಿತರ ಸಂಘ ಸಂತ ಅನ್ನಮ್ಮ ದೇವಾಲಯ ವೀರಾಜಪೇಟೆ ವತಿಯಿಂದ ದ್ವಿಶತಮಾನ ಸಭಾಂಗಣದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಜ್ಯೂಡಿ ವಾಜ್ ಅವರು ಸಂಘವು ೧೨ ನೇ ವಾರ್ಷಿಕೊತ್ಸವ ಆಚರಣೆ ಮಾಡುತ್ತಿದೆ. ಹತ್ತು ಹಲವು ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರಲಾಗುತ್ತಿದೆ. ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ಮತ್ತು ಗ್ರಾಮೀಣ ಪ್ರತಿಭೆಗಳನ್ನು ಅನ್ವೇಷÀಣೆ ಮಾಡುವ ಸಲುವಾಗಿ ವಾರ್ಷಿಕೋತ್ಸವದ ಅಂಗವಾಗಿ ಜಿಲ್ಲಾ ಮಟ್ಟದ ಮುಕ್ತ ಪುರುಷರ ಸೂಪರ್ ೭+೨ ಕಾಲ್ಚೆಂಡು ಪಂದ್ಯಾಟವನ್ನು ಸಂತ ಅನ್ನಮ್ಮ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿದೆ. ಪಂದ್ಯಾಟವು ತಾ. ೧೬ ಮತ್ತು ೧೭ ರಂದು ಎರಡು ದಿನಗಳ ಕಾಲ ನಡೆಯಲಿದೆ. ಪಂದ್ಯಾಟದ ಉದ್ಘಾಟನೆ ಮತ್ತು ಸಮರೋಪ ಸಮಾರಂಭ ದಿನದಂದು ಮಡಿಕೇರಿ ಮತ್ತು ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರು ಭಾಗವಹಿಸಲಿದ್ದಾರೆ. ವಿಜೇತ ತಂಡಗಳಿಗೆ ಆಕರ್ಷಕ ಟ್ರೋಫಿ ಮತ್ತು ನಗದು ಪುರಸ್ಕಾರ ನೀಡಿ ಗೌರವಿಸಲಾಗುತ್ತದೆ ಎಂದರು.
ಸAತ ಅನ್ನಮ್ಮ ಕ್ರೆöÊಸ್ತ ಸ್ನೇಹಿತರ ಸಂಘದ ಕ್ರೀಡಾ ಕಾರ್ಯದರ್ಶಿ ರೀಯನ್ ಲೋಬೊ ಅವರು ಮಾತನಾಡಿ ಕಾಲ್ಚೆಂಡು ಪಂದ್ಯಾಟವು ಜಿಲ್ಲಾ ಮಟ್ಟದಾಗಿದ್ದು. ಪಂದ್ಯಾಟದಲ್ಲಿ ಪ್ರಥಮ ಸ್ಥಾನ ಪಡೆದ ತಂಡಕ್ಕೆ ರೂ. ೫೫,೫೫೫ ನಗದು ಮತ್ತು ಟ್ರೋಫಿ, ದ್ವಿತೀಯ ಸ್ಥಾನ ಪಡೆದ ತಂಡಕ್ಕೆ ರೂ. ೩೩,೩೩೩ ನಗದು ಮತ್ತು ಟ್ರೋಫಿ ನೀಡಲಾಗುತ್ತದೆ. ಪಂದ್ಯಾಟದಲ್ಲಿ ನೋಂದಾವಣಿ ಮಾಡಿಸಿಕೊಳ್ಳಲು ತಾ. ೧೦ ಕೊನೆಯ ದಿನಾಂಕವಾಗಿದೆ. ತಂಡಗಳ ನೋಂದಾವಣಿಗಾಗಿ ೯೮೪೪೫೫೮೫೩೫, ೮೬೧೮೦೮೯೩೪೮, ೯೪೮೩೯೧೦೪೬೪, ೮೮೮೪೭೨೨೪೨೮ ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸುವAತೆ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಸಂತ ಅನ್ನಮ್ಮ ಕ್ರೆöÊಸ್ತ ಸ್ನೇಹಿತರ ಸಂಘದ ಅಧ್ಯಕ್ಷ ಫ್ರಾನ್ಸಿಸ್ ಲೋಬೊ, ಉಪ ಅಧ್ಯಕ್ಷ ನಿಕ್ಸನ್ ಡಿಸೋಜಾ, ಖಜಾಂಚಿ ಬ್ಲೇಜಿû ಸಿಕ್ವೇರ, ಸಾಂಸ್ಕೃತಿಕ ಕಾರ್ಯದರ್ಶಿ ಡೇನಿಯಲ್ ಸಾಲ್ಡಾನ, ನಿರ್ದೇಶಕ ಜೋಸೆಫ್ ಡಿಸೋಜಾ (ಬಾಬುಟ್ಟಿ) ಉಪಸ್ಥಿತರಿದ್ದರು.