ಕುಶಾಲನಗರ, ಡಿ. ೨: ಕುಶಾಲನಗರ ಗಣಪತಿ ದೇವರ ರಥೋತ್ಸವ ಸಂದರ್ಭ ದೇವರ ರಥಕ್ಕೆ ಭಕ್ತಾದಿಗಳು ಪೂಜೆ ಸಲ್ಲಿಸಿ ತಮ್ಮ ಒಳಿತಿಗಾಗಿ ಹಲವು ರೀತಿಯಲ್ಲಿ ಪ್ರಾರ್ಥನೆ ಸಲ್ಲಿಸಿದರೆ, ಈ ನಡುವೆ ಭಕ್ತನೊಬ್ಬ ದೇವರ ರಥಕ್ಕೆ ಬಾಳೆಹಣ್ಣನ್ನು ಎಸೆದು ದೇವರಲ್ಲಿ ವಿಶೇಷವಾಗಿ ತನ್ನ ಪ್ರೇಮದ ಬಗ್ಗೆ ನಿವೇದಿಸಿಕೊಂಡಿರುವ ವಿಶಿಷ್ಟ ಮನವಿಯೊಂದು ಕಂಡು ಬಂದಿದೆ!
ಕೆಲವು ಭಕ್ತರು ಈಡುಗಾಯಿ ಒಡೆಯುವುದರ ಮೂಲಕ ತಮ್ಮ ಹರಕೆ ತೀರಿಸಿಕೊಂಡರೆ, ಈ ಅನಾಮಿಕ ಭಕ್ತ ಮಾತ್ರ ಬಾಳೆಹಣ್ಣಿನ ಸಿಪ್ಪೆ ಮೇಲೆ ತನ್ನ ಪ್ರೀತಿ-ಪ್ರೇಮದ ಬಗ್ಗೆ ನಿವೇದಿಸಿಕೊಂಡಿದ್ದು ತನ್ನ ಪ್ರೀತಿಯನ್ನು ಗಟ್ಟಿ ಮಾಡುವಂತೆ ದೇವರಲ್ಲಿ ಕೋರಿಕೊಂಡಿರುವ ಪರಿ ಗೋಚರಿಸಿದೆ. ಬಾಳೆಹಣ್ಣಿನ ಸಿಪ್ಪೆ ಮೇಲೆ ಬರೆದ ಭಕ್ತನ ಮನವಿಯ ಸಂದೇಶ ಹೊತ್ತಿದ್ದ ಬಾಳೆಹಣ್ಣು ದೊರೆತ ವ್ಯಕ್ತಿಯೊಬ್ಬರು ಇದನ್ನು ‘ಶಕ್ತಿ’ಗೆ ನೀಡಿದ್ದಾರೆ. ಈತನ ಈ ಪರಿಯ ಭಕ್ತಿಗೆ ಭಗವಂತ ಒಲಿಯುವನೇ..? -ಸಿಂಚು