ಮಡಿಕೇರಿ, ಡಿ. ೨: ಕುಶಾಲನಗರದ ಜಾತ್ರೋತ್ಸವ ಅಂಗವಾಗಿ ಜಾತ್ರೋತ್ಸವ ಸಾಂಸ್ಕೃತಿಕ ಸಮಿತಿ ಹಾಗೂ ಜಿಲ್ಲಾ ಕನ್ನಡ ಸ್ನೇಹ ಬಳಗದ ವತಿಯಿಂದ ಕರ್ನಾಟಕ ಸುವರ್ಣ ಸಂಭ್ರಮ ಅಂಗವಾಗಿ ತಾ. ೬ ರಂದು ದೇಸೀಯ ಜಾನಪದ ನೃತ್ಯ ಪ್ರಕಾರಗಳ ಪ್ರದರ್ಶನ ಕಾರ್ಯಕ್ರಮ ನಡೆಯಲಿದೆ.
ಅಂದು ಸಂಜೆ ೬.೩೦ಕ್ಕೆ ಗುಂಡೂರಾವ್ ಬಡಾವಣೆಯ ಜಾತ್ರ ಮೈದಾನದ ಸಾಂಸ್ಕೃತಿಕ ವೇದಿಕೆಯಲ್ಲಿ ಕಾರ್ಯಕ್ರಮ ನಡೆಯಲಿದೆ. ಕನ್ನಡ ಹಾಗೂ ಕನ್ನಡದ ಉಪಭಾಷೆಗಳ ಜಾನಪದ ಗುಂಪು ನೃತ್ಯ ಪ್ರದರ್ಶನಕ್ಕೆ ಅವಕಾಶವಿದ್ದು, ಮೊದಲು ನೋಂದಾಯಿಸಿಕೊAಡ ತಂಡಗಳಿಗೆ ಆದ್ಯತೆ ನೀಡಲಾಗುವುದು. ಹೆಚ್ಚಿನ ಮಾಹಿತಿಗೆ ಲೋಕೇಶ್ ಸಾಗರ್ ೯೯೮೦೯೮೮೧೨೩, ನಾಗೇಗೌಡ ೯೪೪೮೦೭೨೬೧೯ ಅವರುಗಳನ್ನು ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.