ವೀರಾಜಪೇಟೆ, ಡಿ. ೨: ಅರಾಯಿರ ನಾಡ್‌ರ ವಾರ್ಷಿಕ ಪುತ್ತರಿ ಕೋಲಾಟ್ ವಿವಿಧ ಜನಪದ ಪ್ರಕಾರಗಳನ್ನು ಒಳಗೊಂಡು ಸಂಪನ್ನಗೊAಡಿತು.
ವೀರಾಜಪೇಟೆಯ ಆರಾಯಿರ ನಾಡ್ ಬೈರನಾಡ್, ಎಡೆನಾಡ್, ಬೇಟೋಳಿನಾಡ್ ಮತ್ತು ಪೆರುವನಾಡ್ ಎಂಬ ನಾಲ್ಕು ನಾಡುಗ ಳಾಗಿ ವಿಂಗಡಣೆಗೊAಡು ೧೭ ಗ್ರಾಮ ಗಳ ಒಕ್ಕೂಟದ ನಾಡಿನ ಗ್ರಾಮಸ್ಥರ ಪುತ್ತರಿ ಕೋಲಾಟವು ವೀರಾಜಪೇಟೆ ಕೊಡವ ಸಮಾಜದ ಬಳಿಯ ಪೂಮಾಲೆ ಮಂದ್‌ನಲ್ಲಿ ಪ್ರದರ್ಶನಗೊಂಡಿತು.
ಕೊಡಗಿನ ಸಾಂಪ್ರದಾಯಿಕ ಉಡುಗೆಗಳನ್ನು ತೊಟ್ಟು ಕೈಯಲ್ಲಿ ಕೋಲು ಹಿಡಿದ ವಿವಿಧ ಗ್ರಾಮಗ ಳಿಂದ ಆಗಮಿಸಿದ ಗ್ರಾಮಸ್ಥರಿಗೆ ಸಾಂಪ್ರದಾಯಕ ವಾಲಗದ ಮೂಲಕ ವೀರಾಜಪೇಟೆ, ಡಿ. ೨: ಅರಾಯಿರ ನಾಡ್‌ರ ವಾರ್ಷಿಕ ಪುತ್ತರಿ ಕೋಲಾಟ್ ವಿವಿಧ ಜನಪದ ಪ್ರಕಾರಗಳನ್ನು ಒಳಗೊಂಡು ಸಂಪನ್ನಗೊAಡಿತು.
ವೀರಾಜಪೇಟೆಯ ಆರಾಯಿರ ನಾಡ್ ಬೈರನಾಡ್, ಎಡೆನಾಡ್, ಬೇಟೋಳಿನಾಡ್ ಮತ್ತು ಪೆರುವನಾಡ್ ಎಂಬ ನಾಲ್ಕು ನಾಡುಗ ಳಾಗಿ ವಿಂಗಡಣೆಗೊAಡು ೧೭ ಗ್ರಾಮ ಗಳ ಒಕ್ಕೂಟದ ನಾಡಿನ ಗ್ರಾಮಸ್ಥರ ಪುತ್ತರಿ ಕೋಲಾಟವು ವೀರಾಜಪೇಟೆ ಕೊಡವ ಸಮಾಜದ ಬಳಿಯ ಪೂಮಾಲೆ ಮಂದ್‌ನಲ್ಲಿ ಪ್ರದರ್ಶನಗೊಂಡಿತು.
ಕೊಡಗಿನ ಸಾಂಪ್ರದಾಯಿಕ ಉಡುಗೆಗಳನ್ನು ತೊಟ್ಟು ಕೈಯಲ್ಲಿ ಕೋಲು ಹಿಡಿದ ವಿವಿಧ ಗ್ರಾಮಗ ಳಿಂದ ಆಗಮಿಸಿದ ಗ್ರಾಮಸ್ಥರಿಗೆ ಸಾಂಪ್ರದಾಯಕ ವಾಲಗದ ಮೂಲಕ ಸುತ್ತಿನ ಕೋಲಾಟ, ೦೯ ಜೋಡಿಯ ಪರಿಯಕಳಿ, ವಾಲಗತ್ತಾಟ್ ನಡೆ ಯಿತು. ಕೋಲಾಟದ ಪ್ರಕಾರಗಳನ್ನು ಪ್ರದರ್ಶನ ಮಾಡುವವರು ವಾಲಗ ನುಡಿಸುವವರ ವಾದ್ಯಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತಿದ್ದರು, ಈ ಭಾರಿ ಪರಿಯ ಕಳಿ, ಕೋಲಾಟ್ ಮತ್ತು ವಾಲಾಗ ತ್ತಾಟ್ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದವರಿಗೆ ಆಯೋಜಕರ ಸಮಿತಿಯಿಂದ ನಗದು ಬಹುಮಾನ ನೀಡಿ ಗೌರವಿಸಲಾಯಿತು. ಕೊಡಗಿನ ಸಾಂಪ್ರದಾಯಕ ಉಡುಗೆ ತೊಟ್ಟು ಆಗಮಿಸಿದ ಮಹಿಳೆಯರಿಗೆ ವಿಶೇಷ ಬಹುಮಾನ ನೀಡಿ ಗೌರವಿಸಲಾಯಿತು.
ಆರಾಯಿರ ನಾಡ್ ಪೂಮಾಲೆ ಮಂದ್ ಸಮಿತಿಯ ಅಧ್ಯಕ್ಷರಾದ, ಅಜ್ಜಿನಿಕಂಡ ಸುಧೀರ್ ಉಪಾಧ್ಯಕ್ಷರಾದ ವಾಟೇರಿರ ಶಂಕರಿ ಪೂವಯ್ಯ, ಕಾರ್ಯದರ್ಶಿ ಮಾಚೆಟ್ಟೀರ ತಮ್ಮಯ್ಯ, ಮರಣ ಫಂಡ್ ಅಧ್ಯಕ್ಷರಾದ ಚೇಂದAಡ ಜಿ. ಪೊನ್ನಪ್ಪ ಮತ್ತು ಸಮಿತಿಯ ಸದಸ್ಯರು ಸೇರಿದಂತೆ ತಕ್ಕ ಮುಖ್ಯಸ್ಥರಾದ ಕೊಳುವಂಡ ಕಾರ್ಯಪ್ಪ, ಮುಕ್ಕಾಟೀರ ಮುತ್ತುಕುಞ ಅಮ್ಮಣಕುಟ್ಟಂಡ ವಸಂತ್ ಕಟ್ಟಿ, ಪೊನ್ನಕಚ್ಚಿರ ಸೋಮಯ್ಯ ಹಾಗೂ ಬೈರನಾಡ್ ಭಾಗದ ಹಾಲುಗುಂದ, ಒಂಟಿಅAಗಡಿ, ದೇವಣಗೇರಿ, ತಲಗಟ್ಟಕೇರಿ ಮತ್ತು ಹಚ್ಚಿನಾಡು ಗ್ರಾಮಗಳು, ಕೊಡವ ಧಿರಿಸಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಂದ್‌ಗೆ ಆಗಮಿಸಿದ್ದುದು ವಿಶೇಷವಾಗಿತ್ತು. ಎಡೆನಾಡು ಭಾಗದ ಕುಕ್ಲೂರು, ಚೆಂಬೆಬೆಳ್ಳೂರು, ಐಮಂಗಲ, ಮಗ್ಗುಲ ಮತ್ತು ವೈಪಡ ಗ್ರಾಮಗಳು ಬೇಟೊಳಿನಾಡ್ ಭಾಗದ ಆರ್ಜಿ, ಬೇಟೋಳಿ ಗ್ರಾಮಗಳು ಪೆರುವನಾಡ್ ಭಾಗದ ಬಿಟ್ಟಂಗಾಲ ನಾಂಗಾಲ, ಮತ್ತು ಬಾಳುಗೋಡು ಗ್ರಾಮಗಳ ಗ್ರಾಮಸ್ಥರು ಅಲ್ಲದೆ ಸಾರ್ವಜನಿಕರು ಪಾಲ್ಗೊಂಡಿದ್ದರು.
-ಕಿಶೋರ್ ಕುಮಾರ್ ಶೆಟ್ಟಿ