ವೀರಾಜಪೇಟೆ, ಡಿ. ೧: ಅನಾರೋಗ್ಯದಿಂದ ಬಳಲುತ್ತಿದ್ದ ವ್ಯಕ್ತಿ ಮಾನಸಿಕವಾಗಿ ನೊಂದು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಗ್ಯಾಂಗ್ರಿನ್ ಕಾಯಿಲೆಯಿಂದ ಬಳಲುತ್ತಿದ್ದ ಬೇಟೊಳಿ ಗ್ರಾಮದ ಎಚ್.ಎಸ್. ನಂಜಪ್ಪ (೫೭) ನೇಣಿಗೆ ಶರಣಾದ ವ್ಯಕ್ತಿ.
ಹಲವಾರು ವರ್ಷಗಳಿಂದ ವೀರಾಜಪೇಟೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯಲ್ಲಿ ಗುಮಾಸ್ತರಾಗಿ ಕರ್ತವ್ಯ ನಿರ್ವಹಿಸುತಿದ್ದ ನಂಜಪ್ಪ, ನಂತರದಲ್ಲಿ ಮಡಿಕೇರಿ ಶಾಖೆಗೆ ವರ್ಗಾವಣೆಗೊಂಡಿದ್ದರು. ಅನಾರೋಗ್ಯದಿಂದ ಗ್ಯಾಂಗ್ರಿನ್‌ಗೆ ತುತ್ತಾಗಿ ಮಾನಸಿಕವಾಗಿ ಕುಗ್ಗಿದ್ದರು. ಇಂದು ಬೆಳಿಗ್ಗೆ ಸುಮಾರು ೮ ರ ವೇಳೆಯಲ್ಲಿ ಮನೆಯ ಸನಿಹದ ಕಾಫಿ ತೋಟದಲ್ಲಿದ್ದ ಮರದ ಕೊಂಬೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರ ಮಗ ಹೆಚ್.ಎನ್. ಶಿವು ನೀಡಿದ ದೂರಿನ ಹಿನ್ನೆಲೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. -ಕಿಶೋರ್ ಕುಮಾರ್‌ಶೆಟ್ಟಿ