ಕೂಡಿಗೆ, ಡಿ. ೧: ನಂಜ ರಾಯಪಟ್ಟಣ ಶ್ರೀ ಚಾಮುಂಡೇಶ್ವರಿ ದೇವಸ್ಥಾನ ಸಮಿತಿಯ ವತಿಯಿಂದ ಚಾಮುಂಡೇಶ್ವರಿ ದೇವಿಯ ೧೭ ನೇ ವರ್ಷದ ವಾರ್ಷಿಕೋತ್ಸವವು ಎರಡು ದಿನಗಳ ಕಾಲ ಶ್ರದ್ಧಾಭಕ್ತಿಯಿಂದ ವಿವಿಧ ಹೋಮ ಹವನಗಳೊಂದಿಗೆ ನಡೆಯಿತು.

ಮೊದಲ ದಿನದಲ್ಲಿ ದೇವಿಗೆ ದುಗಾÀðಪೂಜೆ, ಪುಣ್ಯಾಹಶುದ್ಧಿ, ಮರು ದಿನ ಗಣಪತಿ ಹೋಮ, ನವಕ, ಕಲಸಪೂಜೆ, ಕಲಶಾಭಿಷೇಕ, ನಂತರ ಮಹಾಪೂಜೆ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ದೇವಾಲಯದ ಸಭಾಂಗಣದಲ್ಲಿ ನಡೆದವು.

ಎರಡು ದಿನಗಳ ಪೂಜಾ ಕೈಂಕರ್ಯಗಳನ್ನು ವೀರಾಜಪೇಟೆ ಜಿ.ಕೆ. ನಂಬೋಧರಿ ತಂಡದವರು ನೆರವೇರಿಸಿದರು. ಪೂಜಾ ಕಾರ್ಯಕ್ರಮದಲ್ಲಿ ನಂಜರಾಯಪಟ್ಟಣ, ಗುಡ್ಡೆಹೊಸೂರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ನೂರಾರು ಭಕ್ತರು ಹಾಜರಿದ್ದರು. ಅಗಮಿಸಿದ ಭಕ್ತರಿಗೆ ಅನ್ನ ಸಂತರ್ಪಣೆ ಕಾರ್ಯವು ನಡೆಯಿತು.