ಕೂಡಿಗೆ, ಡಿ. ೧: ಕಣಿವೆಯ ಶ್ರೀ ರಾಮಲಿಂಗೇಶ್ವರ ದೇವಾಲಯ ಸಮಿತಿಯ ವತಿಯಿಂದ ಕಾರ್ತಿಕ ಮಾಸದ ಪೂಜೆಯ ಸಂದರ್ಭದಲ್ಲಿ ಕೃತಿಕಾ ಅಮವಾಸ್ಯೆಯ ಪ್ರಾರಂಭ ದಿನಗಳಲ್ಲಿ ಬರುವ ಕೃತಿಕಾ ನಕ್ಷತ್ರದಲ್ಲಿ ದೇವಾಲಯ ಆವರಣದಲ್ಲಿ ಕೃತಿಕೋತ್ಸವದ ದೀಪೋತ್ಸವ ಆಚರಣೆ ಮಾಡಲಾಯಿತು.

ಇದರ ಅಂಗವಾಗಿ ವಿವಿಧ ಪೂಜಾ ಕೈಂಕರ್ಯಗಳು ನಡೆದು , ಕಾವೇರಿ ನದಿ ಗಂಗಾ ಪೂಜೆ, ನಂತರ ಗೃತನಂದದ ಮೂಲ ವಸ್ತದ ಬೆಳಕಿನ ಮೂಲಕ ದೇವರಿಗೆ ದೀಪಾರಾಧನೆ ಕಾರ್ಯಕ್ರಮ ನಡೆಯಿತು. ಪೂಜಾ ಕೈಂಕರ್ಯಗಳನ್ನು ದೇವಾಲಯದ ಪ್ರಧಾನ ಅರ್ಚಕ ರಾಘವೇಂದ್ರ ಆಚಾರ್ ನೆರವೇರಿಸಿದರು.

ಈ ಸಂದರ್ಭದಲ್ಲಿ ರಾಮಲಿಂಗೇಶ್ವರ ದೇವಾಲಯ ಸಮಿತಿಯ ಅಧ್ಯಕ್ಷ ಕೆ. ಎನ್. ಸುರೇಶ್, ಉಪಾಧ್ಯಕ್ಷ ಮಂಜುನಾಥ, ಕಾರ್ಯದರ್ಶಿ ಮಾಧವ್, ಸೇರಿದಂತೆ ಸಮಿತಿಯ ಸದಸ್ಯರು ಹಾಗೂ ಸುತ್ತಮುತ್ತಲಿನ ಗ್ರಾಮಗಳ ನೂರಾರು ಭಕ್ತರು ಭಾಗವಹಿಸಿದರು.