ಸುಂಟಿಕೊಪ್ಪ, ನ. ೨೪: ಕುಶಾಲನಗರ ತಾಲೂಕು ಮೊಗೇರ ಸೇವಾ ಸಮಾಜದ ಅಧ್ಯಕ್ಷರಾಗಿ ಸುಂಟಿಕೊಪ್ಪದ ಪಿ.ಬಿ. ಮಂಜು ಅವರು ಆಯ್ಕೆಯಾಗಿದ್ದಾರೆ.

ಉಪಾಧ್ಯಕ್ಷರಾಗಿ ಪಿ.ಜಿ. ಮಂಜು ನಂಜರಾಯ ಪಟ್ಟಣ, ಪ್ರಧಾನ ಕಾರ್ಯದರ್ಶಿಯಾಗಿ ವಸಂತ ಮಠದಕಾಡ್, ಸಂಘಟನಾ ಸಂಚಾಲಕರಾಗಿ ತೇಜಸ್ ಗರಗಂದೂರು, ಖಜಾಂಚಿಯಾಗಿ ಪಿ. ಮಂಜು ಗರಗಂದೂರು ಹಾಗೂ ಸಮಿತಿ ಸದಸ್ಯರುಗಳಾಗಿ ೩೬ ಮಂದಿ ಆಯ್ಕೆಯಾಗಿದ್ದಾರೆ. ಸುಂಟಿಕೊಪ್ಪದ ಶ್ರೀ ಮಂಜುನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ನಡೆದ ನೂತನ ಸಮಿತಿ ರಚನಾ ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ನೇಮಕಗೊಳಿಸಲಾಯಿತು.

ಈ ಸಂದರ್ಭ ಜಿಲ್ಲಾ ಮೊಗೇರ ಸೇವಾ ಸಮಾಜದ ಅಧ್ಯಕ್ಷ ಪಿ.ಬಿ. ಜನಾರ್ಧನ್, ಪ್ರಧಾನ ಕಾರ್ಯದರ್ಶಿ ಹರೀಶ್, ಸಲಹೆಗಾರರಾದ ಎಂ.ಪಿ. ದೇವಪ್ಪ, ಗೌತಮ್ ಶಿವಪ್ಪ, ಪಿ.ಎಂ. ರವಿ ಉಪಸ್ಥಿತರಿದ್ದರು.