ಕರಿಕೆ, ನ. ೨೪: ಪ್ರಸಿದ್ಧ ಯಾತ್ರಾ ಸ್ಥಳ ಕೇರಳದ ಶಬರಿಮಲೆ ಅಯ್ಯಪ್ಪ ಕ್ಷೇತ್ರಕ್ಕೆ ಮಕರ ಸಂಕ್ರಾAತಿ ಜ್ಯೋತಿ ಉತ್ಸವಕ್ಕೆ ಗ್ರಾಮದಿಂದ ತೆರಳುವ ಭಕ್ತಾದಿಗಳು ಚೆತ್ತುಕಾಯ ಶ್ರೀ ವನಶಾಸ್ತಾವು ದೇವಸ್ಥಾನದ ಆವರಣದಲ್ಲಿರುವ ಅಯ್ಯಪ್ಪ ಭಜನಾ ಮಂದಿರದಲ್ಲಿ ಮಾಲಾಧಾರಣೆ ಮಾಡಿದರು. ಇದಕ್ಕೂ ಮುನ್ನ ದೇವಾಲಯದ ಪ್ರಧಾನ ಅರ್ಚಕರಾದ ಗೌರಿಶಂಕರ ಭಟ್ ಅವರು ಮಂದಿರದಲ್ಲಿ ಶ್ರೀ ಗಣಪತಿ ಹವನ ನಡೆಸಿ ಈ ಬಾರಿಯ ಭಕ್ತಾದಿಗಳ ವ್ರತ ಆಚರಣೆ ಹಾಗೂ ಯಾತ್ರೆ ನಿರ್ವಿಘ್ನವಾಗಿ ನೆರವೇರಲೆಂದು ಪ್ರಾರ್ಥನೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ದೇವಸ್ಥಾನದ ಅಧ್ಯಕ್ಷ ನಾರಾಯಣ. ಕೆ.ಎ, ಉಪಾಧ್ಯಕ್ಷ ಬಾಲಕೃಷ್ಣ ಕೆ.ಡಿ, ಕಾರ್ಯದರ್ಶಿ ತಾರೇಶ್ ಹೊದ್ದೆಟ್ಟಿ ಸೇರಿದಂತೆ ಆಡಳಿತ ಸಮಿತಿ ಸದಸ್ಯರು, ಭಕ್ತಾದಿಗಳು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.