ಕೂಡಿಗೆ, ನ. ೨೧ : ಹಾರಂಗಿ, ಯಡವನಾಡು, ಕಾಜೂರು ಭಾಗದಲ್ಲಿ ಎರಡೂ ಕಣ್ಣು ದೃಷ್ಟಿ ಕಳೆದುಕೊಂಡ ಕಾಡಾನೆಯೊಂದು ಸಂಚರಿಸುತ್ತಿರುವುದು ಗ್ರಾಮಸ್ಥರ ಮೊಬೈಲ್‌ನಲ್ಲಿ ಸೆರೆಯಾಗಿದೆ.

ಈ ಕಾಡಾನೆಯು ಕಳೆದ ಒಂದು ವಾರದಿಂದಲೂ ಈ ವ್ಯಾಪ್ತಿಯ ರಸ್ತೆಗಳಲ್ಲಿ , ತೋಟದ ಅಂಚಿನಲ್ಲಿ ನಿಲ್ಲುತ್ತದೆ, ಅಲ್ಲದೆ ಯಾರಿಗೂ ತೊಂದರೆ ನೀಡದ ಕಾಡಾನೆ ತನ್ನ ಪಾಡಿಗೆ ಕಾಡಿನಲ್ಲಿ ಆಹಾರ ಅರಸಿ ಸಂಚರಿಸುತ್ತಿದ್ದು ಆನೆಯ ಎರಡೂ ಕಣ್ಣುಗಳು ಸೋರುತ್ತಿರುವುದು ಕಂಡುಬAದಿದೆ. ಮೇಲ್ನೋಟಕ್ಕೆ ದೃಷ್ಟಿ ಕಳೆದುಕೊಂಡಿರುವುದು ಗೋಚರಿಸುತ್ತಿದ್ದು ಅರಣ್ಯ ಇಲಾಖೆ ಈ ಕಾಡಾನೆ ಬಗ್ಗೆ ಗಮನಹರಿಸಿ ತಪಾಸಣೆ ನಡೆಸಿ ಸೂಕ್ತ ಚಿಕಿತ್ಸೆ ಒದಗಿಸುವಂತೆ ಸ್ಥಳೀಯ ಗ್ರಾಮಸ್ಥರು ಆಗ್ರಹಿಸಿದ್ದಾರೆ. -ಕೆ.ಕೆ.ಎನ್.