ಮಡಿಕೇರಿ, ನ. ೨೧ : ಸುಂದರ ಪ್ರಕೃತಿ-ಪರಿಸರದಿಂದಾಗಿ ವಿಶ್ವ ವಿಖ್ಯಾತಿ ಹೊಂದಿರುವ ಪುಟ್ಟ ಕೊಡಗು ಜಿಲ್ಲೆ ಸಂಸ್ಕೃತಿಯ ತವರೂರು ಕೂಡ ಹೌದು., ವೀರತನಕ್ಕೆ ಹೆಸರುವಾಸಿಯಾಗಿರುವ ಈ ಜಿಲ್ಲೆ ಆತಿಥ್ಯಕ್ಕೂ ಹೆಸರುವಾಸಿ., ಅಷ್ಟೇ ಅಲ್ಲ ಕ್ರೀಡೆಯಲ್ಲೂ ಎತ್ತಿದ ಕೈ., ಇದರೊಂದಿಗೆ ಇಲ್ಲಿಯ ಜನರು ಭಕ್ತಿ- ಭಾವಕ್ಕೂ ಮಾದರಿಯಾದವರು. ದೇವರ ನಾಡು ಎಂದೇ ಖ್ಯಾತಿವೆತ್ತಿರುವ ಕೇರಳ ರಾಜ್ಯಕ್ಕೆ ಹೊಂದಿಕೊAಡಿರುವ ಈ ಕೊಡಗು ಕೂಡ ಕರ್ನಾಟಕ ರಾಜ್ಯದ ದೇವರ ನಾಡು ಎಂದೇ ಹೇಳಬಹುದು. ಕನ್ನಡ ನಾಡು ಸೇರಿದಂತೆ ತಮಿಳುನಾಡಿನ ಭಾಗ್ಯದಾತೆಯಾಗಿರುವ ಕಾವೇರಿ ಜನ್ಮ ತಳೆದಿರುವ ತಲಕಾವೇರಿ ಕ್ಷೇತ್ರ ಸೇರಿದಂತೆ, ರೈತರ ಪಾಲಿನ ಭಾಗ್ಯದ, ಮಳೆ ದೇವರೆಂದೇ ಹೇಳಲಾಗುವ ಇಗ್ಗುತ್ತಪ್ಪ ಈಶ್ವರನ ನೆಲೆಯಾಗಿರುವ ಈ ಜಿಲ್ಲೆಯಲ್ಲಿ ಎಲ್ಲ ದೇವಾನು ದೇವತೆಗಳ ದೇವಾಲಯಗಳಿವೆ. ದಕ್ಷಿಣ ಭಾಗದಲ್ಲೇ ಏಕೈಕ ಮೃತ್ಯುಂಜಯ ದೇವಾಲಯ ಇರುವದು ಕೂಡ ದಕ್ಷಿಣ ಕೊಡಗಿನಲ್ಲಿ ಎಂಬದು ಇಲ್ಲಿನ ಮಣ್ಣಿನ ಗುಣವನ್ನು ಸಾರುತ್ತದೆ. ಇದರೊಂದಿಗೆ ಮತ್ತೊಂದು ಮಹಾ ಮೃತ್ಯುಂಜಯ ದೇವಾಲಯ ಈ ಪವಿತ್ರ ಮಣ್ಣಿನಲ್ಲಿ ಗೋಚರಿಸಿದ್ದು, ಜೀರ್ಣೋದ್ಧಾರ ಕಾರ್ಯದೊಂದಿಗೆ ಲೋಕಾರ್ಪಣೆಗೆ ಸಿದ್ಧಗೊಂಡಿರುವದು ಈ ನಾಡಿನ ಭಕ್ತಗಣಗಳ ಸಂತಸಕ್ಕೆ ಕಾರಣವಾಗಿದೆ.
ಶ್ರೀ ಮಹಾಮೃತ್ಯುಂಜಯ ಮಹದೇಶ್ವರ ದೇವಾಲಯವೆಂದು ಕರೆಯಲ್ಪಡುವ ಈ ಶಿವ ದೇವಾಲಯದ ಪುನರುಜ್ಜೀವನಕ್ಕಾಗಿ ಗ್ರಾಮಸ್ಥರು ಸೇರಿ ಇತ್ತೀಚೆಗೆ ಅಷ್ಟಮಂಗಲ ಪ್ರಶ್ನೆ ನೋಡಿಸಿದಾಗ ತಿಳಿದ ವಿಚಾರಗಳು ವಿಸ್ಮಯ ತರಿಸುವಂತಿವೆ. ಅಗಸ್ತö್ಯ ಮಾಮುನಿ ಇಲ್ಲಿನ ಶಿವಲಿಂಗವನ್ನು ಪ್ರತಿಷ್ಠಾಪನೆ ಮಾಡಿದ್ದರು ಎನ್ನಲಾಗುತ್ತಿದೆ. ಪತ್ನಿ ಕಾವೇರಿಯು ಲೋಕೋದ್ಧಾರಕ್ಕಾಗಿ ಅಗಸ್ತö್ಯರನ್ನು ಬಿಟ್ಟಗಲಿದಾಗ ಸಾಂಸಾರಿಕ ಬಂಧನದಿAದ ನೊಂದ ಅಗಸ್ತö್ಯರು ಕಾವೇರಿ ನದಿತಟದ ಹಲವಾರು ಕಡೆ ಈಶ್ವರನನ್ನು ಒಲಿಸಿಕೊಂಡು ಲಿಂಗ ಪ್ರತಿಷ್ಠಾಪನೆ ಮಾಡುತ್ತಾ ಮುಂದುವರಿಯುತ್ತಾರೆ. ಒಂದು ಸುಂದರ ಪ್ರಾತಃಕಾಲದಲ್ಲಿ ಈಗಿನ ಮಹಾಮೃತ್ಯುಂಜಯ ಮಹದೇಶ್ವರ ದೇವಾಲಯವಿರುವ ಸ್ಥಳದಲ್ಲಿ ಅಗಸ್ತö್ಯರು ಶಿವಧ್ಯಾನ ಮಾಡುತ್ತಿರು ವಾಗ ಧ್ಯಾನನಿರತ ಸಾಕ್ಷಾತ್ ಶಿವನೇ ಅಗಸ್ತö್ಯರಿಗೆ ಪ್ರತ್ಯಕ್ಷನಾಗುತ್ತಾನೆ. ಅಗಸ್ತö್ಯರು ಕೃತಾರ್ಥ ಭಾವದಿಂದ ಅದೇ ಸ್ಥಳದಲ್ಲಿ ಲಿಂಗ ಪ್ರತಿಷ್ಠಾಪನೆ ಮಾಡುತ್ತಾರೆ. ನಿಬಿಡಾರಣ್ಯ ದೊಳಗಿದ್ದ ಶಿವನು ತನ್ನ ಅವತಾರಕ್ಕಾಗಿ ಎದುರು ನೋಡುತ್ತಿದ್ದನೋ
(ಮೊದಲ ಪುಟದಿಂದ) ಮಡಿಕೇರಿ ತಾಲೂಕಿನ ಕಟ್ಟೆಮಾಡು ಗ್ರಾಮದಲ್ಲಿ ಪುರಾತನವಾದ ಶ್ರೀ ಮಹಾಮೃತ್ಯುಂಜಯ ಮಹದೇಶ್ವರ ದೇವಾಲಯ ಇದೆ. ಕಾಡು ಪಾಲಾಗಿ, ಅವಶೇಷಗಳಂತೆ ಗೋಚರಿಸಿದ ಈ ದೇವಾಲಯವನ್ನು ಗ್ರಾಮಸ್ಥರು ಸೇರಿಕೊಂಡು ಪುನರುಜ್ಜೀವನ ಗೊಳಿಸಿದ್ದು, ಇದೀಗ ಲೋಕಾ ರ್ಪಣೆಗೆ ಸಜ್ಜಾಗುತ್ತಿದೆ. ಭಕ್ತರು, ದಾನಿಗಳ ನೆರವಿನೊಂದಿಗೆ ಸುಮಾರು ರೂ. ೨ ಕೋಟಿ ವೆಚ್ಚದಲ್ಲಿ ಈ ಐತಿಹಾಸಿಕ ಹಿನ್ನೆಲೆ ಇರುವ ದೇವಾಲಯದ ಜೀರ್ಣೋದ್ಧಾರ ಆಗುತ್ತಿದ್ದು, ಮುಂದಿನ ಡಿಸೆಂಬರ್ ತಿಂಗಳಲ್ಲಿ ಪುನರ್ ಪ್ರತಿಷ್ಠಾಪನಾ ಕಾರ್ಯ ನಡೆಯಲಿದೆ.
೨೦೧೫ ರಿಂದ ಕೆಲಸ
ಸರಿ ಸುಮಾರು ೧೪೦೦ ವರ್ಷಗಳಿಗೂ ಹಿಂದೆಯದ್ದು ಎನ್ನಲಾದ ಈ ದೇವಾಲಯ ಕಾರಣಾಂತರಗಳಿAದ ಕಾಡುಪಾ ಲಾಗಿತ್ತು. ಅಲ್ಲಿನ ಶ್ರೀ ಭದ್ರಕಾಳಿ ದೇವಾಲಯದಲ್ಲಿ ಅಷ್ಟಮಂಗಲ ಪ್ರಶ್ನೆ ಇರಿಸಿದ್ದ ಸಂದರ್ಭ ಈ ದೇಗುಲದ ಕುರುಹು ಹಾಗೂ ಶಕ್ತಿ ಅರಿವಿಗೆ ಬಂದ ಬಳಿಕ ಗ್ರಾಮಸ್ಥರು ದೇಗುಲದ ಪುರುಜ್ಜೀವನ ಮಾಡಲು ಮುಂದಾದರು. ಜೀರ್ಣೋದ್ಧಾರ ಸಮಿತಿ ರಚನೆ ಮಾಡಿ ಪುಣ್ಯ ಕಾರ್ಯಕ್ಕೆ ಕೈ ಹಾಕಿದರು. ಗಣೇಶ್ ರಾಮಕೃಷ್ಣ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ ಮಾಡಿ ೨೦೧೫ರಲ್ಲಿ ಈ ಕೆಲಸಕ್ಕೆ ಚಾಲನೆ ನೀಡಲಾಯಿತು. ತದನಂತರ ರಾಮಕೃಷ್ಣ ಅವರ ಅಕಾಲಿಕ ಮರಣದ ಬಳಿಕ ಕಟ್ಟೆಮನೆ ಜನಾರ್ಧನ ಅವರ ಅಧ್ಯಕ್ಷತೆಯಲ್ಲಿ ಸಮಿತಿ ಈ ಕಾರ್ಯವನ್ನು ಮುಂದುವರಿಸಿತು. ನಂತರದಲ್ಲಿ ೨೦೧೭ರಿಂದ ಎಲ್ಲ ಕಡೆಗಳಲ್ಲಿ ವಿಚಾರಣೆ ಮಾಡಿ ಜ್ಯೋತಿಷಿ, ತಂತ್ರಿ, ವಾಸ್ತು ಶಿಲ್ಪಿಗಳನ್ನು ಸಂಪರ್ಕ ಮಾಡಿ ಕೆಲಸ ಕಾರ್ಯಗಳಿಗೆ ಚಾಲನೆ ನೀಡಲಾಯಿತು.
ವಿಶೇಷತೆಯಿದೆ
ಈ ದೇಗುಲದಲ್ಲಿ ಸಾಕಷ್ಟು ವಿಶೇಷತೆಯಿದೆ. ಸಾಮಾನ್ಯವಾಗಿ ಬಹುತೇಕ ದೇವಾಲಯಗಳಲ್ಲಿ ಗರ್ಭಗುಡಿಯ ಮೇಲ್ಭಾಗದಲ್ಲಿ ಗೋಪುರದವರೆಗೂ ತೆರೆದ ಸ್ಥಳವಿರುತ್ತದೆ. ಆದರೆ, ಇಲ್ಲಿ ಗರ್ಭಗುಡಿಯ ಮೇಲ್ಭಾಗದಲ್ಲಿ ಮುಚ್ಚಳಿಕೆ ಇದೆ. ಬಸವ ಹಾಗೂ ಶಿವಲಿಂಗವನ್ನು ಆಧರಿಸಿ ಈ ದೇಗುಲವಿದೆ. ಪ್ರಾಂಗಣದಲ್ಲಿ ಗಣಪತಿ ಗುಡಿ, ಮಹಾವಿಷ್ಣು ಗುಡಿ, ನಾಗನಕಟ್ಟೆಗಳಿವೆ. ಇಲ್ಲಿಯ ಇನ್ನೊಂದು ವಿಶೇಷವೆಂದರೆ ಗಣಪತಿ ಪೂಜೆಯೊಂದಿಗೆ ಹೋಮ ಕಾರ್ಯ ಕೂಡ ಮಾಡಿಸಲು ಅವಕಾಶವಿದ್ದು, ಇದರಿಂದಾಗಿ ಮಾಡುವ ದೈವಿಕ ಕಾರ್ಯ ಪರಿಪೂರ್ಣವಾಗಲಿದೆ.
ಎಂಟು ನಾಡಿಗೆ ಸೇರಿದ ದೇಗುಲ
ಕಟ್ಟೆಮಾಡು ಗ್ರಾಮದ ಪಾಪಳಕೇರಿ ಎಂಬಲ್ಲಿ ಸುಮಾರು ೩.೮೦ ಎಕರೆ ವಿಶಾಲ ಪ್ರದೇಶದಲ್ಲಿ ತಲೆ ಎತ್ತುತ್ತಿರುವ ಈ ದೇಗುಲ ಸುತ್ತ ಮುತ್ತಲಿನ ಎಂಟು ನಾಡಿಗೆ ಸೇರಿದ್ದಾಗಿದೆ. ದೇವಾಲಯಕ್ಕೆ ಸೇರಿದ ೧.೯೨ ಎಕರೆ ಪ್ರದೇಶದಲ್ಲಿ ಪಾಪಳ ಮಹದೇಶ್ವರ ಕೆರೆಯಿದೆ. ಈ ಕೆರೆ ಒತ್ತುವರಿಯಾಗಿತ್ತಾದರೂ ಗ್ರಾಮ ಪಂಚಾಯಿತಿಯ ಗಮನಕ್ಕೆ ಸಮಿತಿ ಸದಸ್ಯರು ತಂದ ಹಿನ್ನೆಲೆಯಲ್ಲಿ ಇದೀಗ ಒತ್ತುವರಿ ತೆರವುಗೊಳಿಸಿ ಪಂಚಾಯಿತಿ ಸುಪರ್ದಿಗೆ ಪಡೆದುಕೊಳ್ಳಲಾಗಿದೆ.
ರಸ್ತೆ ಸಮಸ್ಯೆ : ಮರಗೋಡು ಗ್ರಾಮ ಪಂಚಾಯಿತಿಗೆ ಸೇರಿದ ಈ ದೇವಾಲಯ ಕಟ್ಟೆಮಾಡು ಗ್ರಾಮದಲ್ಲಿದೆ. ಮರಗೋಡು ಮೂಲಕ ತೆರಳಲು ರಸ್ತೆ ಇದೆಯಾದರೂ ತೀರಾ ಇಕ್ಕಟ್ಟಾಗಿದ್ದು, ಕೇವಲ ಒಂದು ವಾಹನ ಸಂಚರಿಸಲು ಮಾತ್ರ ಸಾಧ್ಯ. ಕೊಂಡAಗೇರಿ ಬಳಿಯ ಕಾವೇರಿ ನದಿ ತೀರದಲ್ಲಿ ಇರುವ ಈ ದೇವಾಲಯಕ್ಕೆ ಕೊಂಡAಗೇರಿಯಿAದ ತೀರಾ ಹತ್ತಿರವಿದ್ದರೂ ಸಂಪರ್ಕ ರಸ್ತೆಯಿಲ್ಲ. ಇದುವರೆಗೆ ಇಲ್ಲಿ ಇಂತಹದ್ದೊAದು ದೇವಾಲಯ ಇದೆಯೆಂಬದು ತಿಳಿಯದ ಹಿನ್ನೆಲೆಯಲ್ಲಿ ರಸ್ತೆ ಬಗ್ಗೆ ಯಾರೂ ಅಷ್ಟೊಂದು ಗಮನ ಹರಿಸಿರಲಿಲ್ಲ. ಇದೀಗ ಭವ್ಯವಾದ ದೇವಾಲಯ ನಿರ್ಮಾಣವಾಗಿರುವ ದರಿಂದ ರಸ್ತೆ ಅತ್ಯಗತ್ಯವಾಗಿದ್ದು, ಜನಪ್ರತಿನಿಧಿಗಳು, ಅಧಿಕಾರಿಗಳು ಆಸಕ್ತಿ ವಹಿಸಬೇಕಾಗಿದೆ ಎಂದು ಸಮಿತಿ ಪದಾಧಿಕಾರಿಗಳ ಕೋರಿಕೆಯಾಗಿದೆ.
ಶಾಸ್ತೊçÃಕ್ತವಾಗಿ ಕೆಲಸ
ಪುರಾತನವಾದ ಈ ದೇವಾಲಯದ ಜೀರ್ಣೋದ್ಧಾರ ಕಾರ್ಯವನ್ನು ತಂತ್ರಿಗಳು, ಜ್ಯೋತಿಷಿಗಳ ಮಾರ್ಗದರ್ಶನದಂತೆ ಕೈಗೊಳ್ಳಲಾಗುತ್ತಿದೆ ಎಂದು ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕಟ್ಟೆಮನೆ ಜನಾರ್ದನ, ಕಾರ್ಯದರ್ಶಿ ಕಳ್ಳೀರ ಗಣಪತಿ ಹಾಗೂ ಪದಾಧಿಕಾರಿ ಗಳು ಮಾಹಿತಿ ನೀಡಿದರು. ಜ್ಯೋತಿಷಿ ಕಾಸರಗೋಡಿನ ಕಲ್ಲಾರ್ ಬಾಲಕೃಷ್ಣ, ವಾಸ್ತು ಶಿಲ್ಪಿಯಾಗಿ ಮಂಗಳೂರಿನ ಹರೀಶ್ ರೈ, ಪ್ರಸಾದ್ ಮುನಿಯಂಗಳ, ತಂತ್ರಿಗಳಾದ ಕೆಮ್ಮಿಂಜೆ ಲಕ್ಷಿö್ಮÃಶ್ ಭಟ್ ಅವರುಗಳ ಮಾರ್ಗದರ್ಶನದಲ್ಲಿ ದೇಗುಲದ ಕೆಲಸ ಕಾರ್ಯಗಳು ನಡೆಯುತ್ತಿವೆ ಎಂದು ತಿಳಿಸಿದರು.
ಡಿ. ೨೩ ರಿಂದ ಪುನರ್ ಪ್ರತಿಷ್ಠೆ
ದೇವಾಲಯದ ಕೆಲಸ ಕಾರ್ಯಗಳು ಬಹುತೇಕ ಪೂರ್ಣ ಹಂತದಲ್ಲಿದ್ದು, ಮುಂದಿನ ಡಿಸೆಂಬರ್ ೨೩ ರಿಂದ ೨೯ ರವರೆಗೆ ಪುನರ್ ಪ್ರತಿಷ್ಠಾಪನಾ ಕಾರ್ಯಗಳು ನಡೆಯಲಿವೆ. ಪ್ರತಿದಿನ ವಿವಿಧ ಪೂಜಾದಿ ಕಾರ್ಯಗಳು ನಡೆಯಲಿವೆ. ಜನವರಿ ತಿಂಗಳ ನಂತರ ನಿತ್ಯ ಪೂಜೆ ನಡೆಯಲಿದೆ. ೪೮ ದಿನಗಳು ಕಳೆದ ಬಳಿಕ ಹೋಮ, ಹವನ ಕಾರ್ಯಗಳು ನೆರವೇರಲಿವೆ. ಪ್ರತಿಷ್ಠಾ ಕಾರ್ಯಕ್ಕೆ ಸುಮಾರು ರೂ. ೪೫ ಲಕ್ಷದಷ್ಟು ವೆಚ್ಚವಾಗಲಿದೆ. ಈಗಾಗಲೇ ದಾನಿಗಳ ನೆರವಿನಿಂದ ೨ ಕೋಟಿ ವೆಚ್ಚದಲ್ಲಿ ದೇವಾಲಯ ನಿರ್ಮಾಣ ಮಾಡಲಾಗಿದೆ. ಇದೀಗ ಪ್ರತಿಷ್ಠಾ ಕಾರ್ಯಕ್ಕೆ ಹಣದ ಕೊರತೆ ಕಾಡುತ್ತಿದ್ದು, ಭಕ್ತರು ಹಾಗೂ ದಾನಿಗಳ ಸಹಕಾರ ನಿರೀಕ್ಷಿಸುತ್ತಿರುವದಾಗಿ ಸಮಿತಿ ಪದಾಧಿಕಾರಿಗಳು ಹೇಳುತ್ತಾರೆ. ಪದಾಧಿಕಾರಿಗಳಾದ ತೋರೇರ
ಕಾಶಿ ಕಾರ್ಯಪ್ಪ, ಚೊಕ್ಕಂಡ ಕಟ್ಟಿ ಪಳಂಗಪ್ಪ, ಪಾರೆ ಬೋಪಯ್ಯ,
ಬಿ.ಕೆ. ನಾರಾಯಣ, ಕೇಶವ, ಬಿ.ಎಂ.ಗೋಪಾಲ ಮುಂತಾದವರು ದೇವಾಲಯದ ಇತಿಹಾಸ ಹಾಗೂ ಕೆಲಸ ಕಾರ್ಯಗಳ ಬಗ್ಗೆ ಮಾಹಿತಿ ನೀಡಿದರು.
ಸುಂದರ ಪರಿಸರದಲ್ಲಿ., ಕಾವೇರಿ ನದಿ ತೀರದಲ್ಲಿ ತಲೆ ಎತ್ತಿರುವ ಈ ದೇಗುಲ ಮತ್ತೊಂದು ಪುಣ್ಯ ಕ್ಷೇತ್ರವಾಗುವದರಲ್ಲಿ ಯಾವದೇ ಸಂದೇಹವಿಲ್ಲ. ಆಸ್ತಿಕರ ಬಾಳಿಗೆ ದೇಗುಲ ವರಪ್ರ ದಾಯಕವಾಗಲಿ ಎಂದು ಆಶಿಸೋಣ.
? ಕುಡೆಕಲ್ ಸಂತೋಷ್