ಮಡಿಕೇರಿ, ನ. ೨೧ : ನಗರದ ನೂತನ ಖಾಸಗಿ ಬಸ್ ನಿಲ್ದಾಣ ಮತ್ತು ಸಾಯಿ ಮೈದಾನದ ನಡುವೆ ಇರುವ ತೋಟಗಾರಿಕಾ ಸಂಶೋಧನಾ ಕೇಂದ್ರದ ಗದ್ದೆಯಲ್ಲಿ ಭತ್ತ ಬೀಜಗಳ ಸಂಶೋಧನೆ ನಡೆಸುವ ಬದಲು ಬಾಳೆ ತಳಿಗಳ ಸಂಶೋಧನೆ ನಡೆಸಿ ಉತ್ತಮ ತಳಿಯ ಬೀಜೋತ್ಪಾದನೆಯನ್ನು ಮಾಡುವಂತೆ ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯ ಸೂಚಿಸಿದೆ.
ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯದ ಮಡಿಕೇರಿ ವಿಭಾಗದ ಮುಖ್ಯಸ್ಥರಾದ ಡಾ. ಚಂದ್ರಶೇಖರ್ ಎಸ್.ವೈ. ಅವರು ಮಾಹಿತಿ ನೀಡುತ್ತ, ಮಡಿಕೇರಿ ಮತ್ತು ಚಿಕ್ಕಮಗಳೂರು ಜಿಲ್ಲೆಯಲ್ಲಿ ರೋಗ ರಹಿತ ನಾನಾ ತಳಿಗಳ ಭತ್ತದ ಬೀಜಗಳ ಸಂಶೋಧನೆ ನಡೆಸುವ ಬದಲು ವಿವಿಧ ತಳಿಗಳ ಬಾಳೆ ಗಿಡಗಳ ಸಂಶೋಧನೆ ನಡೆಸುವ ಮೂಲಕ ಉತ್ತಮ ತಳಿಗಳ ಬೀಜೋತ್ಪಾದನೆ ಯನ್ನು ಸಂಶೋಧನಾ ಕೇಂದ್ರದಲ್ಲಿ ನಡೆಸುವಂತೆ ವಿಶ್ವವಿದ್ಯಾಲಯ ಸೂಚಿಸಿದೆ. ಆದ್ದರಿಂದ ಅತೀ ಶೀಘ್ರದಲ್ಲೇ ವಿವಿಧ ಬಾಳೆ ಗಿಡಗಳನ್ನು ನೆಟ್ಟು ಸಂಶೋಧನಾ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಪ್ರಸ್ತುತ ಮಡಿಕೇರಿಯ ಸಂಶೋಧನಾ ಕೇಂದ್ರದ ಒಟ್ಟು ಪ್ರದೇಶದ ವ್ಯಾಪ್ತಿಯಲ್ಲಿ ಸುಮಾರು ೪ ಎಕರೆ ಪ್ರದೇಶದಲ್ಲಿ ಸುಮಾರು ೪೦ ವಿವಿಧ ತಳಿಗಳ ನಾಟಿ ಮಾಡಿ ಸಂಶೋಧನೆ ನಡೆಸಲು ವಿಶ್ವ ವಿದ್ಯಾಲಯ ಸೂಚಿಸಿದೆ ಎಂದು
ಡಾ. ಚಂದ್ರಶೇಖರ್ ತಿಳಿಸಿದರು.
ಈಗಾಗಲೇ ಬಾಳೆ ಗಿಡಗಳನ್ನು ನೆಡುವ ಕೆಲಸವನ್ನು ಆರಂಭಿಸಬೇಕಿತ್ತು. ಆದರೆ, ಇತ್ತೀಚೆಗೆ ಸುರಿದ ಮಳೆಯ ಅಡಚಣೆೆಯಿಂದಾಗಿ ಬಾಳೆ ಗಿಡಗಳನ್ನು ನೆಡುವ ಕಾರ್ಯವನ್ನು ಆರಂಭಿಸ ಲಾಗಲಿಲ್ಲ. ಈಗ ಬಿಸಿಲು ಬರುತ್ತಿದ್ದು, ಇನ್ನಷ್ಟೇ ಬಾಳೆ ಗಿಡಗಳನ್ನು ನೆಡುವ ಕೆಲಸ ಕಾರ್ಯವನ್ನು ಪ್ರಾರಂಭಿಸ ಲಾಗುವುದು ಎಂದು ತಿಳಿಸಿದರು.
ಒಟ್ಟು ೧೦.೫೦ ಎಕರೆಗಳಷ್ಟು ಪ್ರದೇಶ ವಿಶ್ವ ವಿದ್ಯಾಲಯಕ್ಕೊಳ ಪಟ್ಟಿದ್ದು, ಇದರಲ್ಲಿ ನಾನಾ ರೀತಿಯ ಕಟ್ಟಡಗಳು, ಸಂಶೋಧನಾ ಕೇಂದ್ರಗಳು, ಪಾಲಿ ಹೌಸ್ಗಳು ಇವೆ. ಇದರಲ್ಲಿ ಸುಮಾರು ಅರ್ಧ ಎಕರೆ ಜಾಗವನ್ನು ಈಗಾಗಲೇ ಕೃಷಿ ಇಲಾಖೆಗೆ ನೀಡಲಾಗಿದ್ದು, ಅದರಲ್ಲಿ ಕೃಷಿ ಇಲಾಖೆಯ ಜಂಟಿ ನಿರ್ದೇಶಕರ ಕಚೇರಿಯನ್ನು ನಿರ್ಮಿಸಲಾಗುತ್ತದೆ ಎಂದು ಹೇಳಿದರು.
ಇನ್ನಷ್ಟು ಪ್ರದೇಶದಲ್ಲಿ ಬೀನ್ಸ್, ಅಲಸಂಡೆ, ನವಿಲುಕೋಸು, ಮತ್ತಿತರ ತರಕಾರಿಗಳನ್ನು
(ಮೊದಲ ಪುಟದಿಂದ) ಬೆಳೆದು ಸಾರ್ವಜನಿಕರಿಗೆ ಮಾರಾಟ ಮಾಡಲಾಗುತ್ತಿತ್ತು. ಮುಂದೆ ಬೀನ್ಸ್, ಸ್ವೀಟ್ ಕಾರ್ನ್, ಆ್ಯಂಥೋರಿಯA ಹೂಗಳ, ಬೆಣ್ಣೆಮರ (ಅವಕೆಡ್) ಇನ್ನಿತರ ತಳಿಗಳ ಸಂಶೋಧನೆಯನ್ನು ನಡೆಸಲಾಗುತ್ತದೆ ಎಂದರು.
ಇದುವರೆಗೆ ಮಡಿಕೇರಿಯ ತೋಟಗಾರಿಕಾ ಸಂಶೋಧನಾ ಕೇಂದ್ರದ ಗದ್ದೆಯಲ್ಲಿ ಯಾವುದೇ ಮಾರಕ ರೋಗ ರಹಿತ ಭತ್ತ ಬೀಜಗಳನ್ನು ಸಂಶೋಧನೆ ನಡೆಸಿ ಅತ್ಯುತ್ತಮ ತಳಿಯ ಬೀಜೋತ್ಪಾದನೆಯನ್ನು ಮಾಡಲಾಗುತ್ತಿತ್ತು. ಈ ಭತ್ತದ ಗದ್ದೆಯಲ್ಲಿ ಯಾವುದೇ ರೀತಿಯ ರೋಗ ರುಜಿನಗಳಿಲ್ಲದ ಭತ್ತದ ವಿವಿಧ ಉತ್ತಮ ತಳಿಗಳು ಸಂಶೋಧನೆಯಿAದ ಸಿಗುತ್ತಿತ್ತು. ಈಗ ರೋಗ ರಹಿತ ನಾನಾ ತಳಿಗಳ ಭತ್ತದ ಬೀಜಗಳ ಸಂಶೋಧನೆ ನಡೆಸಿ ನಡೆಸುವ ಬದಲು ಬಾಳೆ ಗಿಡಗಳ ಸಂಶೋಧನೆ ನಡೆಸಲು ವಿಶ್ವ ವಿದ್ಯಾಲಯ ಸೂಚಿಸಿರುವುದು ಹೊಸ ಬೆಳವಣಿಗೆಯಾಗಿದೆ.
ಪೊನ್ನಂಪೇಟೆಯಲ್ಲಿ ಭತ್ತದ ಸಂಶೋಧನೆÉ
ಕೊಡಗು ಜಿಲ್ಲೆಯ ಮಡಿಕೇರಿ ಮತ್ತು ಪೊನ್ನಂಪೇಟೆ ಈ ಎರಡು ಕಡೆಗಳಲ್ಲಿರುವ ಸಂಶೋಧನಾ ಕೇಂದ್ರದ ಗದ್ದೆಯಲ್ಲಿ ಭತ್ತ ಬೀಜಗಳ ಸಂಶೋಧನೆ ನಡೆಸುವ ಅಗತ್ಯವಿಲ್ಲ, ಆದುದರಿಂದ ಮಡಿಕೇರಿಯ ತೋಟಗಾರಿಕಾ ಸಂಶೋಧನಾ ಕೇಂದ್ರದ ಗದ್ದೆಯಲ್ಲಿ ಕೇವಲ ಭತ್ತದ ಬೀಜಗಳ ಸಂಶೋಧನೆ ನಡೆಸುವುದನ್ನು ಕೈಬಿಟ್ಟು ಇನ್ನು ಮುಂದೆ ಪೊನ್ನಂಪೇಟೆಯಲ್ಲಿರುವ ಅರಣ್ಯ ಕಾಲೇಜ್ ವ್ಯಾಪ್ತಿಯಲ್ಲಿ ಬರುವ ಸಂಶೋಧನಾ ಕೇಂದ್ರದಲ್ಲಿ ಇದನ್ನು ಕೈಗೆತ್ತಿಕೊಳ್ಳಲು ವಿಶ್ವವಿದ್ಯಾಲಯ ಸೂಚಿಸಿದೆ ಎಂದು ಅವರು ಮಾಹಿತಿಯಿತ್ತರು.
ಮಡಿಕೇರಿಯ ತೋಟಗಾರಿಕಾ ಸಂಶೋಧನಾ ಕೇಂದ್ರದ ಗದ್ದೆಯಲ್ಲಿ ಸಿಗುವ ಉತ್ತಮ ಪರಿಸರ, ಗಾಳಿ ಮಳೆ, ವಾತಾವರಣ ಮತ್ತು ಅತ್ಯುತ್ತಮ ಮಣ್ಣಿನ ಗುಣ ಪೊನ್ನಂಪೇಟೆಯಲ್ಲೂ ಲಭ್ಯ ಇರುವುದರಿಂದ ಅಲ್ಲಿರುವ ಅರಣ್ಯ ಕಾಲೇಜ್ ಕ್ಯಾಂಪಸ್ ಪ್ರದೇಶಕ್ಕೆ ಭತ್ತ ಬೀಜಗಳ ಸಂಶೋಧನೆಯನ್ನು (ಮೊದಲ ಪುಟದಿಂದ) ಬೆಳೆದು ಸಾರ್ವಜನಿಕರಿಗೆ ಮಾರಾಟ ಮಾಡಲಾಗುತ್ತಿತ್ತು. ಮುಂದೆ ಬೀನ್ಸ್, ಸ್ವೀಟ್ ಕಾರ್ನ್, ಆ್ಯಂಥೋರಿಯA ಹೂಗಳ, ಬೆಣ್ಣೆಮರ (ಅವಕೆಡ್) ಇನ್ನಿತರ ತಳಿಗಳ ಸಂಶೋಧನೆಯನ್ನು ನಡೆಸಲಾಗುತ್ತದೆ ಎಂದರು.
ಇದುವರೆಗೆ ಮಡಿಕೇರಿಯ ತೋಟಗಾರಿಕಾ ಸಂಶೋಧನಾ ಕೇಂದ್ರದ ಗದ್ದೆಯಲ್ಲಿ ಯಾವುದೇ ಮಾರಕ ರೋಗ ರಹಿತ ಭತ್ತ ಬೀಜಗಳನ್ನು ಸಂಶೋಧನೆ ನಡೆಸಿ ಅತ್ಯುತ್ತಮ ತಳಿಯ ಬೀಜೋತ್ಪಾದನೆಯನ್ನು ಮಾಡಲಾಗುತ್ತಿತ್ತು. ಈ ಭತ್ತದ ಗದ್ದೆಯಲ್ಲಿ ಯಾವುದೇ ರೀತಿಯ ರೋಗ ರುಜಿನಗಳಿಲ್ಲದ ಭತ್ತದ ವಿವಿಧ ಉತ್ತಮ ತಳಿಗಳು ಸಂಶೋಧನೆಯಿAದ ಸಿಗುತ್ತಿತ್ತು. ಈಗ ರೋಗ ರಹಿತ ನಾನಾ ತಳಿಗಳ ಭತ್ತದ ಬೀಜಗಳ ಸಂಶೋಧನೆ ನಡೆಸಿ ನಡೆಸುವ ಬದಲು ಬಾಳೆ ಗಿಡಗಳ ಸಂಶೋಧನೆ ನಡೆಸಲು ವಿಶ್ವ ವಿದ್ಯಾಲಯ ಸೂಚಿಸಿರುವುದು ಹೊಸ ಬೆಳವಣಿಗೆಯಾಗಿದೆ.
ಪೊನ್ನಂಪೇಟೆಯಲ್ಲಿ ಭತ್ತದ ಸಂಶೋಧನೆÉ
ಕೊಡಗು ಜಿಲ್ಲೆಯ ಮಡಿಕೇರಿ ಮತ್ತು ಪೊನ್ನಂಪೇಟೆ ಈ ಎರಡು ಕಡೆಗಳಲ್ಲಿರುವ ಸಂಶೋಧನಾ ಕೇಂದ್ರದ ಗದ್ದೆಯಲ್ಲಿ ಭತ್ತ ಬೀಜಗಳ ಸಂಶೋಧನೆ ನಡೆಸುವ ಅಗತ್ಯವಿಲ್ಲ, ಆದುದರಿಂದ ಮಡಿಕೇರಿಯ ತೋಟಗಾರಿಕಾ ಸಂಶೋಧನಾ ಕೇಂದ್ರದ ಗದ್ದೆಯಲ್ಲಿ ಕೇವಲ ಭತ್ತದ ಬೀಜಗಳ ಸಂಶೋಧನೆ ನಡೆಸುವುದನ್ನು ಕೈಬಿಟ್ಟು ಇನ್ನು ಮುಂದೆ ಪೊನ್ನಂಪೇಟೆಯಲ್ಲಿರುವ ಅರಣ್ಯ ಕಾಲೇಜ್ ವ್ಯಾಪ್ತಿಯಲ್ಲಿ ಬರುವ ಸಂಶೋಧನಾ ಕೇಂದ್ರದಲ್ಲಿ ಇದನ್ನು ಕೈಗೆತ್ತಿಕೊಳ್ಳಲು ವಿಶ್ವವಿದ್ಯಾಲಯ ಸೂಚಿಸಿದೆ ಎಂದು ಅವರು ಮಾಹಿತಿಯಿತ್ತರು.
ಮಡಿಕೇರಿಯ ತೋಟಗಾರಿಕಾ ಸಂಶೋಧನಾ ಕೇಂದ್ರದ ಗದ್ದೆಯಲ್ಲಿ ಸಿಗುವ ಉತ್ತಮ ಪರಿಸರ, ಗಾಳಿ ಮಳೆ, ವಾತಾವರಣ ಮತ್ತು ಅತ್ಯುತ್ತಮ ಮಣ್ಣಿನ ಗುಣ ಪೊನ್ನಂಪೇಟೆಯಲ್ಲೂ ಲಭ್ಯ ಇರುವುದರಿಂದ ಅಲ್ಲಿರುವ ಅರಣ್ಯ ಕಾಲೇಜ್ ಕ್ಯಾಂಪಸ್ ಪ್ರದೇಶಕ್ಕೆ ಭತ್ತ ಬೀಜಗಳ ಸಂಶೋಧನೆಯನ್ನು