ಕಣಿವೆ, ನ. ೧೭: ಅಂತರರಾಷ್ಟಿçÃಯ ಸೆಸ್ಟೋಬಾಲ್ ಚಾಂಪಿಯನ್ ಗಳಾದ ಶಾಹಿಲ್ ಉಸ್ಮಾನ್ ಹಾಗೂ ಇರ್ಷಾದ್ ಮುಸ್ತಾಫ ಅವರುಗಳನ್ನು ಮಡಿಕೇರಿ ಶಾಸಕ ಡಾ.ಮಂಥರ್ ಗೌಡ ಸನ್ಮಾನಿಸಿದರು. ಸಾಧಕರಾದ ಕ್ರೀಡಾಪಟುಗಳನ್ನು ಸನ್ಮಾನಿಸಿ ಅಭಿನಂದಿಸಿದ ಶಾಸಕರು ಮುಂದಿನ ದಿನಗಳಲ್ಲಿ ಅವಶ್ಯವಿದ್ದಲ್ಲಿ ಎಲ್ಲಾ ರೀತಿಯ ನೆರವು ನೀಡುವುದಾಗಿ ಭರವಸೆಯಿತ್ತರು.
ಈ ಸಂದರ್ಭ ಕಾಂಗ್ರೆಸ್ ಮುಖಂಡರಾದ ಕೆ.ಪಿ.ಚಂದ್ರಕಲಾ, ಸುಂಟಿಕೊಪ್ಪದ ಉಸ್ಮಾನ್ ಇದ್ದರು.