ಮಡಿಕೇರಿ, ನ. ೧೭: ಹಾಕಿ ಇಂಡಿಯಾ ವತಿಯಿಂದ ತಮಿಳುನಾಡಿನ ಚೆನ್ನೆöÊಯಲ್ಲಿ ೧೩ನೇ ಸೀನಿಯರ್ ನ್ಯಾಷನಲ್ ಹಾಕಿ ಚಾಂಪಿಯನ್‌ಶಿಪ್ ತಾ. ೨೮ರವರೆಗೆ ಜರುಗಲಿದೆ. ಈ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲಿರುವ ಹಾಕಿ ಕರ್ನಾಟಕ ತಂಡದಲ್ಲಿ ಕೊಡಗಿನ ೧೧ ಆಟಗಾರರು, ಇಬ್ಬರು ಕೋಚ್ ಸೇರಿದಂತೆ ಜಿಲ್ಲೆಯ ಒಟ್ಟು ೧೩ ಮಂದಿ ಸ್ಥಾನ ಪಡೆದಿದ್ದಾರೆ. ಒಟ್ಟು ೧೮ ಆಟಗಾರರ ಪೈಕಿ ತಂಡದಲ್ಲಿ ಕೊಡಗಿನವರಾದ ಆಭರಣ್ ಸುದೇವ್, ದೀಕ್ಷಿತ್ ಎ.ಎಚ್. ಸೂರ್ಯ ಎನ್.ಎಮ್., ಶಾನ್ ಮೊಣ್ಣಪ್ಪ ಎಂ.ಎ., ನಾಚಪ್ಪ ಐ.ಆರ್. ಅದ್ವೆöÊತ್ ನಾಚಪ್ಪ ಕೆ.ಎಂ., ಲಿಖಿತ್ ಬಿ.ಎಂ., ಸೋಮಯ್ಯ ಎಂ.ಜಿ., ಚೆಲ್ಸ ಮೇದಪ್ಪ ಬಿ.ಎನ್., ಯತೀಶ್ ಕುಮಾರ್ ಬಿ. ಹಾಗೂ ಸಾತ್ವಿಕ್ ಹೆಚ್.ಆರ್. ಅವರುಗಳಿದ್ದಾರೆ.

ತಂಡದ ಕೋಚ್ ಆಗಿ ಜಿಲ್ಲೆಯವರಾದ ಕೂತಂಡ ಪೂಣಚ್ಚ ಹಾಗೂ ಕರ್ತಮಾಡ ರಿಕ್ಕಿ ಗಣಪತಿ ನೇಮಕಗೊಂಡಿದ್ದಾರೆ. ಬಿ.ಎಂ. ಶೇಷೇಗೌಡ ತಂಡದ ನಾಯಕರಾಗಿದ್ದಾರೆ.