ಕಣಿವೆ, ನ. ೧೭: ಮೂರ್ಛೆ ಬಿದ್ದು ತುಂಬು ಗರ್ಭಿಣಿ ಇಹಲೋಕ ತ್ಯಜಿಸಿದ್ದು, ಮನನೊಂದು ಆಕೆಯ ಪತಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಕುಶಾಲನಗರ ಸಮೀಪದ ಸುಂಕದಹಳ್ಳಿಯಲ್ಲಿ ತಾ. ೧೨ ರಂದು ನಡೆದಿದೆ.

೯ ತಿಂಗಳ ಗರ್ಭಿಣಿ ಹೇಮಲತ (೨೩) ಸಾವನ್ನಪ್ಪಿದ ದುರ್ದೈವಿ. ಪತಿ ಹರ್ಷ (೨೩) ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಇದೀಗ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆೆ.

೩ ವರ್ಷಗಳ ಹಿಂದೆ ಪ್ರೇಮ ವಿವಾಹವಾಗಿ ಕುಟುಂಬಗಳಿAದ ದೂರವಾಗಿದ್ದ ದಂಪತಿ ಸುಂಕದಹಳ್ಳಿಯಲ್ಲಿ ವಾಸಿಸುತ್ತಿದ್ದರು. ಹೇಮಲತ ಗರ್ಭಿಣಿಯಾದ ಬಳಿಕ ತಾಯಿಯೊಂದಿಗೆ ಮಾತನಾಡಬೇಕೆಂಬ ಆಸೆ ಹೊಂದಿದ್ದರು. ಈ ನಿಟ್ಟಿನಲ್ಲಿ ಕುಟುಂಬದ ಮೂಲಕ ಅವರನ್ನು ಸೇರುವ ಪ್ರಯತ್ನ ಮಾಡಿದ್ದರು. ಆದರೆ, ಆಕೆಯ ತಾಯಿ ಅನ್ಯಜಾತಿ ಯುವಕನನ್ನು ಮದುವೆಯಾದ ಕಾರಣಕ್ಕೆ ಮಗಳನ್ನು ನೋಡಲು ಮುಂದಾಗಿರಲಿಲ್ಲ. ಇದೇ ನೋವಿನಲ್ಲಿದ್ದ ಹೇಮಾ ಗಂಡ ಮನೆಯಲ್ಲಿ ಇಲ್ಲದ ಸಂದರ್ಭ ಮೂರ್ಛೆ ಬಿದ್ದು ಪ್ರಜ್ಞೆ ತಪ್ಪಿದ ಸ್ಥಿತಿಯಲ್ಲಿದ್ದಳು, ಮನೆಗೆ ಬಂದ ಗಂಡ ಮಡದಿಯ ಸ್ಥಿತಿಯನ್ನು ಕಂಡು ಆಘಾತಗೊಂಡು ಆಸ್ಪತ್ರೆಗೆ ಕರೆದೊಯ್ಯುತ್ತಾನಾದರೂ ಚಿಕಿತ್ಸೆ ಫಲಿಸದೆ ಗರ್ಭವತಿ ತನ್ನೊಡಲಲ್ಲಿನ ಗಂಡು ಮಗುವಿನೊಂದಿಗೆ ಕೊನೆಯುಸಿರೆಳೆಯುತ್ತಾಳೆ.

ಜಿಲ್ಲಾಸ್ಪತ್ರೆಯಲ್ಲಿ ಪತ್ನಿಯ ಮರಣೋತ್ತರ ಪರೀಕ್ಷೆ ಸಂದರ್ಭ ಮನನೊಂದ ಪತಿ ಹರ್ಷ ಅಲ್ಲಿಯೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾನೆ.

ಆರೋಗ್ಯ ಶಿಕ್ಷಣಾಧಿಕಾರಿ ಹಾಗೂ ಆಶಾ ಕಾರ್ಯಕರ್ತೆಯರ ಬಳಿ ಈಕೆಯ ಸಾವಿಗೆ ಸಂಬAಧಿಸಿದ ಕಾರಣ ಕೇಳಿದಾಗ, ಯಾವುದೇ ಹೆಣ್ಣು ಮಗಳು ಗರ್ಭವತಿಯಾದ ಸಂದರ್ಭ ಅವಳಿಗೆ ಅನೇಕ ಬಯಕೆಗಳು ಅವ್ಯಕ್ತವಾಗಿ ಕಾಡುತ್ತವೆ. ತುಂಬು ಗರ್ಭಿಣಿಯಾದ ಸಂದರ್ಭವAತೂ ಮನೆಯಲ್ಲಿ ಒಬ್ಬಳೇ ಇರುವುದು ಕ್ಷೇಮವಲ್ಲ. ಜೊತೆಯಲ್ಲಿ ಯಾರನ್ನಾದರೂ ಇರಿಸಿಕೊಳ್ಳಿ ಎಂಬ ಮಾಹಿತಿಯನ್ನು ನೀಡಿದ್ದೆವು. ಆದರೆ, ಆಕೆ ಅಲ್ಲೇ ಅಂಗಡಿಯೊAದರಲ್ಲಿ ಇದ್ದ ಗಂಡನ ಜೊತೆ ಒಬ್ಬಂಟಿಯಾಗಿ ಇದ್ದಳು. ದುರದೃಷ್ಟವಶಾತ್ ಗಂಡ ಮನೆಯಿಂದ ಹೊರತೆರಳಿದ ಸಂದರ್ಭ ಮೂಛೆÉðಗೊಂಡು ಬಿದ್ದು ನೋವುಂಡು ಸಾವನ್ನಪ್ಪಿರುತ್ತಾಳೆ ಎಂದು ಅಭಿಪ್ರಾಯಪಟ್ಟಿದ್ದಾರೆ. - ಕೆ.ಎಸ್.ಮೂರ್ತಿ