ಕೂಡಿಗೆ, ನ. ೧೭: ಕಳೆದ ಭಾನುವಾರ ರಾತ್ರಿ ಕುಶಾಲನಗರ ಬಳಿಯ ಗುಡ್ಡೆಹೊಸೂರು ಬಳಿ ನಡೆದ ದರೋಡೆ ಪ್ರಕರಣಕ್ಕೆ ಸಂಬAಧಿಸಿದAತೆ ತಲೆಮರೆಸಿಕೊಂಡಿದ್ದ ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಬೈಚನಹಳ್ಳಿಯ ಪ್ರದೀಪ್, ಕುಶಾಲನಗರದ ಸುಜನ್, ಕೆದಕಲ್ ಸಮೀಪದ ೭ನೇ ಮೈಲಿನ ಶಶಿ, ಸುಂಟಿಕೊಪ್ಪದ ಹ್ಯಾರಿಸ್ ಬಂಧಿತ ಆರೋಪಿಗಳು. ಈ ಹಿಂದೆ ಕುಶಾಲನಗರ ಸಮೀಪದ ಬೊಳ್ಳೂರು ನಿವಾಸಿ ವಿನಯ್ ಹಾಗೂ ಮಾದಪಟ್ಟಣದ ದಿನು ಎಂಬವರನ್ನು ಬಂಧಿಸಲಾಗಿತ್ತು.
ಬೆಂಗಳೂರಿನಿAದ ಕಾಸರಗೋಡಿಗೆ ತೆರಳುತ್ತಿದ್ದ ಕಾರುಗಳನ್ನು ಅಡ್ಡಗಟ್ಟಿ ಕಾರಿನಲ್ಲಿದ್ದವರ ಮೇಲೆ ಹಲ್ಲೆ ನಡೆಸಿ ಮೊಬೈಲ್ಗಳನ್ನು ದೋಚಿ, ಮತ್ತಷ್ಟು ಹಣ ದೋಚುವ ಉದ್ದೇಶದಿಂದ ಪ್ರವಾಸಿಗರ ಕಾರಿನಲ್ಲಿಯೇ ತೆರಳಿ ಅಪಘಾತ ಸಂಭವಿಸಿ ಇಬ್ಬರು ಆರೋಪಿಗಳು ಬಂಧನವಾಗಿದ್ದರು. ಉಳಿದ ನಾಲ್ವರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದರು.
ಆರೋಪಿಗಳ ಮಾಹಿತಿ ಕಲೆ ಹಾಕಿ ಬೆಂಗಳೂರಿಗೆ ತೆರಳಿದ ತಂಡ ಅಲ್ಲಿಂದ ಅವರುಗಳನ್ನು ಬಂಧಿಸಿ ಕುಶಾಲನಗರಕ್ಕೆ ಕರೆತಂದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಮಾರ್ಗದರ್ಶನ, ಡಿವೈಎಸ್ಪಿ ಗಂಗಾಧರಪ್ಪ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಕುಶಾಲನಗರ ಠಾಣಾಧಿಕಾರಿ ಮೋಹನ್ ರಾಜ್ ಸೇರಿದಂತೆ ಸಿಬ್ಬಂದಿಗಳು ಭಾಗವಹಿಸಿದ್ದರು.