ನಾಪೋಕ್ಲು, ನ. ೧೭: ತಲಕಾವೇರಿ ತಕ್ಕ ಮುಖ್ಯಸ್ಥ ಕೋಡಿ ಮೋಟಯ್ಯ ಅವರ ರಾಜೀನಾಮೆ ಕೇಳುವುದು ಸಮಂಜಸವಲ್ಲ ಎಂದು ಕೊಡಗು ಗೌಡ ವಿದ್ಯಾಸಂಘದ ನಿರ್ದೇಶಕ ಸೂದನ ಎಸ್. ಈರಪ್ಪ ತಿಳಿಸಿದ್ದಾರೆ.
ತಲಕಾವೇರಿಯಲ್ಲಿ ಈ ಹಿಂದೆ ಬೆಳಗಾವಿ ಹಾಗೂ ಶ್ರೀರಂಗಪಟ್ಟಣದ ಮಠಾಧೀಶರು ಕನ್ನಡ ಧ್ವಜವನ್ನು ಹಾರಿಸಿ ಕನ್ನಡ ಅಭಿಮಾನ ತೋರಿದ್ದಾರೆ. ಈ ಬಗ್ಗೆ ಅನಗತ್ಯ ಹೇಳಿಕೆಗಳು ಸಲ್ಲದು. ಪರಂಪರೆಯAತೆ ತಲಕಾವೇರಿ ಕ್ಷೇತ್ರದಲ್ಲಿ ಕೋಡಿ ಮನೆಯವರು ತಕ್ಕ ಮುಖ್ಯಸ್ಥರಾಗಿರುವುದು ಕೆಲವರಿಗೆ ಇಷ್ಟ ಇಲ್ಲದೆ ಇಲ್ಲ ಸಲ್ಲದ ಆರೋಪಗಳನ್ನು ಹೊರಿಸುತ್ತಿದ್ದಾರೆ. ಕೋಡಿ ಮೋಟಯ್ಯ ತಕ್ಕ ಮುಖ್ಯಸ್ಥರಾಗಿ ಕ್ಷೇತ್ರದಲ್ಲಿ ಅಚ್ಚುಕಟ್ಟಾಗಿ ಕಾವೇರಿ ಮಾತೆಯ ಸೇವೆ ಮಾಡುತ್ತಿದ್ದಾರೆ. ಹಿಂದೆ ತಲಕಾವೇರಿ ಕ್ಷೇತ್ರದಲ್ಲಿ ಜೀವನದಿ ಸಿನಿಮಾದ ಚಿತ್ರೀಕರಣ ನಡೆದಿತ್ತು. ಆಗ ದೇವಾಲಯದ ಮೂಲ ಸ್ವರೂಪಕ್ಕೆ ಧಕ್ಕೆ ಆಗಲಿಲ್ಲವೇ? ಎಂದು ಪ್ರಶ್ನಿಸಿದ್ದಾರೆ.
ಯಾವುದೇ ವಿಚಾರವನ್ನು ನೆಪವಾಗಿಟ್ಟುಕೊಂಡು ತಕ್ಕ ಮುಖ್ಯಸ್ಥರ ಬಗ್ಗೆ ಮಾತನಾಡುವುದು ವೈಯಕ್ತಿಕ ದ್ವೇಷ ಎಂದು ಭಾವಿಸಬೇಕಾಗುತ್ತದೆ ಯಾರೆಲ್ಲ ಕಾವೇರಿಯ ನೀರು ಸೇವಿಸಿ ಪುನೀತರಾಗುತ್ತಾರೋ ಅವರೆಲ್ಲರಿಗೂ ಮಾತೆಯನ್ನು ನಮಿಸುವ ಹಕ್ಕು ಇದೆ ಎಂದು ಪ್ರತಿಪಾದಿಸಿದ್ದಾರೆ.