ಮಡಿಕೇರಿ, ನ. ೧೭ : ಸ್ಥಳೀಯ ಲಯನ್ಸ್ ಸಂಸ್ಥೆಯ ಆಶ್ರಯದಲ್ಲಿ ಇತ್ತೀಚೆಗೆ ಲಯನ್ಸ್ ಹಾಲ್‌ನಲ್ಲಿ ನಡೆದ ಚಿತ್ರಕಲಾ ಸ್ಪರ್ಧೆಯಲ್ಲಿ ಸಂತ ಜೋಸೆಫ್ ಕಾನ್ವೆಂಟ್‌ನ ವಿದ್ಯಾರ್ಥಿ ಪ್ರನಮ್ ರಾಮಕೃಷ್ಣ ಪ್ರಥಮ, ಸಂತ ಮೈಕಲ್ ಶಾಲೆಯ ವಿದ್ಯಾರ್ಥಿ ಸಚಿನ್ ಪಿ.ಎನ್. ದ್ವಿತೀಯ ಹಾಗೂ ಕೊಡಗು ವಿದ್ಯಾಲಯದ ಅಮೃತ ಬಿ.ಎಸ್. ತೃತೀಯ ಬಹುಮಾನ ಪಡೆದಿರುತ್ತಾರೆ.

ವಿಜೇತರಿಗೆ ತಾ. ೨೯ರಂದು ಸಂಜೆ ೭.೩೦ ಗಂಟೆಗೆ ಲಯನ್ಸ್ ಹಾಲ್‌ನಲ್ಲಿ ನಡೆಯಲಿರುವ ಪ್ರಾಂತೀಯ ಅಧ್ಯಕ್ಷರ ಅಧಿಕೃತ ಭೇಟಿ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಲಾಗುವುದು ಎಂದು ಸಂಸ್ಥೆಯ ಅಧ್ಯಕ್ಷ ಮಧುಕರ್ ಶೇಟ್ ತಿಳಿಸಿದ್ದಾರೆ.