ಮಡಿಕೇರಿ, ನ. ೧೭: ಕೊಡಗಿನ ಕಲಾವಿದ ಮಂಡೀರ ಗಗನ್ ಚಿಣ್ಣಪ್ಪಗೆ ಜನಪ್ರಿಯ ನಾಯಕ ನಟ ಪ್ರಶಸ್ತಿ ಲಭಿಸಿದೆ. ಸೀತಾರಾಮ ಧಾರಾವಾಹಿಯ ರಾಮನ ಪಾತ್ರಕ್ಕಾಗಿ ಜನಪ್ರಿಯ ನಾಯಕ ನಟ ಪ್ರಶಸ್ತಿ ಸ್ವೀಕರಿಸಿದ್ದಾರೆ.

ಬೆಂಗಳೂರಿನಲ್ಲಿ ನಡೆದ ಝೀ ಕುಟುಂಬ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಚಿತ್ರನಟ ಡಾ. ಶಿವರಾಜ್ ಕುಮಾರ್ ಗಗನ್ ಚಿಣ್ಣಪ್ಪಗೆ ಪ್ರಶಸ್ತಿ ವಿತರಿಸಿದರು.

ಕೊಡಗಿನ ನೆಲಜಿ ಗ್ರಾಮದ ಮಂಡೀರ ರವಿ ಚಿಣ್ಣಪ್ಪ, ಶಶಿ ದಂಪತಿ ಪುತ್ರರಾಗಿರುವ ಗಗನ್ ಚಿಣ್ಣಪ್ಪ ಕನ್ನಡ, ತೆಲುಗು ಧಾರಾವಾಹಿಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸುವ ಮೂಲಕ ಕಿರುತೆರೆಯಲ್ಲಿ ಛಾಪು ಮೂಡಿಸಿದ್ದಾರೆ.