ಗೋಣಿಕೊಪ್ಪ ವರದಿ, ನ. ೧೫: ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲೆಯ ಟರ್ಫ್ ಮೈದಾನದಲ್ಲಿ ಹಾಕಿ ಕೂರ್ಗ್ ವತಿಯಿಂದ ನಡೆಯುತ್ತಿರುವ ಹಾಕಿ ಲೀಗ್ ಟೂರ್ನಿಯಲ್ಲಿ ೫ ತಂಡಗಳು ಗೆಲುವು ದಾಖಲಿಸಿದವು.

ಗೋಣಿಕೊಪ್ಪ ಎಎಸ್‌ಎಫ್ ತಂಡವು ಸೋಮವಾರಪೇಟೆ ಬ್ಲೂ ಸ್ಟಾರ್ ತಂಡವನ್ನು ೪-೨ ಗೋಲು ಗಳಿಂದ ಮಣಿಸಿತು. ಎಎಸ್‌ಎಫ್ ತಂಡದ ಕುಶಾಲಪ್ಪ ೨, ಜಶನ್, ತಶ್ವಿನ್, ಸೋಮವಾರಪೇಟೆ ತಂಡದ ಗುರುಪ್ರಸಾದ್, ಅಭಿಷೇಕ್ ಒಂದೊAದು ಗೋಲು ಹೊಡೆದರು.

ಕುಶಾಲನಗರ ಟೈಕೂನ್ ತಂಡಕ್ಕೆ ಸೋಮವಾರಪೇಟೆ ಡಾಲ್ಫಿನ್ಸ್ ವಿರುದ್ಧ ೩-೨ ಗೋಲುಗಳ ಜಯ ದೊರೆಯಿತು. ಕುಶಾಲನಗರದ ಕಿಶನ್, ಪವನ್, ತನೀಶ್, ಸೋಮವಾರ ಪೇಟೆಯ ಪ್ರಜ್ವಲ್, ಮಿಲನ್ ಗೋಲು ಬಾರಿಸಿ ಮಿಂಚಿದರು.

ಅAಜಿಕೇರಿ ನಾಡ್ ತಂಡಕ್ಕೆ ಪೊನ್ನಂಪೇಟೆ ಸ್ಪೋರ್ಟ್ಸ್ ಹಾಸ್ಟೇಲ್ ವಿರುದ್ಧ ೫-೦ ಗೋಲುಗಳ ಜಯ ಲಭಿಸಿತು. ಮಿಥುನ್ ೨, ನಿರೂಪ್, ಆಕಾಶ್, ಸಚಿನ್ ಒಂದೊAದು ಗೋಲು ಹೊಡೆದರು.

ಅಮ್ಮತ್ತಿ ಸ್ಪೋರ್ಟ್ಸ್ ಕ್ಲಬ್ ತಂಡವು ಜನರಲ್ ತಿಮ್ಮಯ್ಯ ತಂಡವನ್ನು ೩-೧ ಗೋಲುಗಳಿಂದ ಮಣಿಸಿತು. ಅಮ್ಮತ್ತಿ ತಂಡದ ರಿವಿನ್ ಭೀಮಯ್ಯ ೨, ಆರ್ಯನ್ ನಾಣಯ್ಯ, ಜನರಲ್ ತಿಮ್ಮಯ್ಯ ತಂಡದ ಸುಬ್ಬಯ್ಯ ತಲಾ ಒಂದೊAದು ಗೋಲು ಬಾರಿಸಿದರು.

ಮಡಿಕೇರಿ ಚಾರ್ಮರ್ಸ್ ತಂಡಕ್ಕೆ ಮಹಾದೇವ ಯೂತ್ ಕ್ಲಬ್ ವಿರುದ್ಧ ೩-೨ ಗೋಲುಗಳ ಜಯ ದೊರೆಯಿತು. ಮಡಿಕೇರಿ ಆಟಗಾರರಾದ ನಿಹಾಲ್ ಪೂಣಚ್ಚ ೨, ಅಲನ್ ದೇವಯ್ಯ, ಮಹಾದೇವ ತಂಡದ ಬೋಪಣ್ಣ, ಅಪ್ಪಚ್ಚು ಒಂದೊAದು ಗೋಲು ಹೊಡೆದರು.