ವೀರಾಜಪೇಟೆ, ನ. ೧೫: ಕೇರಳದ ಬೈತೂರು ದೇವಾಲಯದಲ್ಲಿ ಮೂಲ ಸೌಕರ್ಯಗಳ ಕೊರತೆ ಇರುವುದ ರಿಂದ ತಾ. ೨೦ ರಂದು ಪೂರ್ವಾಹ್ನ ೧೦.೩೦ ಗಂಟೆಗೆ ವೀರಾಜಪೇಟೆ ಕೊಡವ ಸಮಾಜದ ರಿಕ್ರಿಯೇಷನ್ ಕ್ಲಬ್ ಸಭಾಂಗಣದಲ್ಲಿ ಕೇರಳ ದೇವಸಂ ಬೋರ್ಡ್ ಹಾಗೂ ಬೈತೂರು ದೇವಾಲಯದ ತಕ್ಕ ಮುಖ್ಯ ಸ್ಥರ ಜಂಟಿ ಸಭೆಯನ್ನು ಆಯೋ ಜಿಸಲಾಗಿದೆ ಎಂದು ಬೈತೂರು ದೇವಾಲಯದ ದೇವತಕ್ಕರಾದ ಪುಗ್ಗೆರ ಪೊನ್ನಪ್ಪ ಹೇಳಿದರು.

ವೀರಾಜಪೇಟೆ ಪ್ರೆಸ್ ಕ್ಲಬ್‌ನಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿವರ್ಷ ಜನವರಿ ನಾಲ್ಕನೇ ವಾರದಲ್ಲಿ ಬೈತೂರು ದೇವಾಲಯದಲ್ಲಿ ಹಬ್ಬ ನಡೆಯುತ್ತಿದ್ದು, ದೇವಾಲಯದಲ್ಲಿ ಮೂಲ ಸೌಕರ್ಯಗಳ ಕೊರತೆ ಇದೆ. ದೇವಾಲಯದಿಂದ ನದಿಗೆ ತೆರಳುವ ರಸ್ತೆ ಅಭಿವೃದ್ಧಿ, ದೇವಾಲಯದಲ್ಲಿ ಭಕ್ತರು ಕುಳಿತುಕೊಳ್ಳಲು ಗ್ಯಾಲರಿ ನಿರ್ಮಾಣ, ಬೇಟೆ ಕುರುಮಗನ್ ದೇವಾಲಯದ ಸುತ್ತ ತಡೆಗೋಡೆ, ದೇವಾಲಯದ ಎಡಬದಿಯ ಗೋಪುರ ನಿರ್ಮಾಣ, ಬೋಜನಾ ಲಯ ನಿರ್ಮಾಣ ಇತ್ಯಾದಿ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಒಂದು ಕೋಟಿಗೂ ಅಧಿಕ ವೆಚ್ಚವಾಗಲಿದೆ. ದೇವಾಲಯ ಕೇರಳ ರಾಜ್ಯದ ಅಧೀನದಲ್ಲಿ ಇರುವ ಕಾರಣ ನೇರವಾಗಿ ನಿರ್ಣಯ ತೆಗದುಕೊ ಳ್ಳಲು ಸಾಧ್ಯವಾಗುತ್ತಿಲ್ಲ. ಈಗಾಗಲೇ ಕಳೆದ ತಿಂಗಳು ತಕ್ಕಮುಖ್ಯಸ್ಥರು ಹಾಗೂ ಭಕ್ತರು ಸೇರಿ ಒಂದು ಸಭೆ ನಡೆಸಲಾಗಿದೆ. ಆ ಸಭೆಯಲ್ಲಿ ದೇವಸಂ ಬೋರ್ಡ್ ಹಾಗೂ ತಕ್ಕಮುಖ್ಯಸ್ಥರ ಜಂಟಿ ಸಭೆ ನಡೆಸಿ ಅಭಿವೃದ್ದಿ ಕಾರ್ಯಗಳ ಚರ್ಚೆ ನಡೆಸುವಂತೆ ನಿರ್ಣಯ ಕೈಗೊಂಡ ಹಿನ್ನೆಲೆಯಲ್ಲಿ ತಾ. ೨೦ ರಂದು ಸಭೆ ಕರೆಯಲಾಗಿದೆ ಎಂದು ತಿಳಿಸಿದರು.

ದೇವಾಲಯ ಟ್ರಸ್ಟಿ ಮಾಳೇಟಿರ ರತ್ನ ಸುಬ್ಬಯ್ಯ ಮಾತನಾಡಿ ಅಂದಿನ ಸಭೆಯಲ್ಲಿ ಕೇರಳದ ಮಲಬಾರ್ ದೇವಾಲಯದ ಕಮಿಷನರ್ ನಂದಕುಮಾರ್, ದೇವಸಂ ಬೋರ್ಡ್ನ ಅಧ್ಯಕ್ಷ ಮುರುಳಿ, ನಿರ್ದೇಶಕ ಮಧುಸೂದನ್, ವೀರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ, ವಿಧಾನ ಪರಿಷತ್ ಸದಸ್ಯ ಸುಜಾಕುಶಾಲಪ್ಪ ಉಪಸ್ಥಿತರಿರುತ್ತಾರೆ ಎಂದರು. ಗೋಷ್ಠಿಯಲ್ಲಿ ಬೈತೂರಪ್ಪ ಭವನ ಅಧ್ಯಕ್ಷರಾದ ಪುಗ್ಗೆರ ರಂಜಿ ದೇವಯ್ಯ, ಭಕ್ತ ಸಂಘದ ಸದಸ್ಯರಾದ ಚೇಂದAಡ ಶಿವಕುಮಾರ್, ಮಾಳೇಟಿರ ಅಜಿತ್ ಪೂವಣ್ಣ ಉಪಸ್ಥಿತರಿದ್ದರು.