ವೀರಾಜಪೇಟೆ, ನ. ೧೫: ವೀರಾಜಪೇಟೆ ತಾಲೂಕು ರೈತ ಉತ್ಪಾದಕ ಸಂಸ್ಥೆಯ ವಾರ್ಷಿಕ ಮಹಾಸಭೆಯು ವೀರಾಜಪೇಟೆ ಮಹಿಳಾ ಸಮಾಜದಲ್ಲಿ ಮುಕ್ಕಾಟಿರ ಐ. ಸುನಿಲ್ ನಾಣಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು.
ಸಂಸ್ಥೆಯ ನೂತನ ಲೋಗೊ ವನ್ನು ಅನಾವರಣ ಮಾಡಿ ಮಾತನಾಡಿದ ಅವರು, ಈ ಸಂಸ್ಥೆಯು ೨೦೨೧ರಲ್ಲಿ ಆರಂಭವಾಗಿ ಪ್ರಸ್ತುತ ಮೂರು ವರ್ಷ ಪೂರೈಸಿದೆ, ಚಿಕ್ಕಪೇಟೆಯಲ್ಲಿ ತನ್ನದೆ ಆದ ಮಳಿಗೆಯನ್ನು ಪ್ರಾರಂಭಿಸಿ ಸಂಸ್ಥೆಯ ಸದಸ್ಯ ರೈತರಿಗೆ ಉತ್ತಮ ಗುಣಮಟ್ಟದ ಕೃಷಿಗೆ ಬಳಕೆಯಾಗುವ ಅನೇಕ ಉಪಕರಣಗಳನ್ನು, ಕ್ರಿಮಿನಾಶಕಗಳನ್ನು ಉತ್ತಮ ಗುಣಮಟ್ಟದ ಯಂತ್ರಗಳನ್ನು ಪೂರೈಸುತ್ತಿದೆ. ಕರಿಮೆಣಸು, ಕಾಫಿ ವ್ಯಾಪಾರವನ್ನು ಈ ವರ್ಷದಲ್ಲಿ ಆರಂಭಿಸಿದೆ. ಮುಂದಿನ ದಿನಗಳಲ್ಲಿ ಈ ಸಂಸ್ಥೆಯು ರೈತರನ್ನು ಆರ್ಥಿಕ ವಾಗಿ ಸದೃಢರಾಗಿಸಲು ಅನೇಕ ವಿಶೇಷ ರೈತಪರ ಚಟುವಟಿಕೆಗಳನ್ನು ಜಾರಿಗೆ ತರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ನಂತರ ವಾರ್ಷಿಕ ಲೆಕ್ಕ ಪತ್ರಗಳನ್ನು ಮಂಡಿಸಲಾಯಿತು. ಡಿಪಾರ್ಟ್ಮೆಂಟ್ ಆಫ್ ಮಾರ್ಕೆಟಿಂಗ್ ಇನ್ಫ್ರಾಸ್ಟçಕ್ಚರ್ ಅಧಿಕಾರಿಗಳಾದ ರವೀಂದ್ರ ಅವರು ಕೇಂದ್ರ ಸರಕಾರದಿಂದ ರೈತರಿಗೆ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.
ಸಭೆಯಲ್ಲಿ ವೀರಾಜಪೇಟೆ ರೈತ ಉತ್ಪಾದಕ ಸಂಸ್ಥೆಯ ಆಡಳಿತ ಮಂಡಳಿಯ ನಿರ್ದೇಶಕರುಗಳಾದ ಪ್ರವೀಣ್ ಪೂವಯ್ಯ, ದಿವಿನ್ ಮುತ್ತಣ್ಣ, ಬಾಬು ರಾಘವನ್, ಸರೋಜ್ ಕಾರ್ಯಪ್ಪ ಹಾಜರಿದ್ದರು. ಸಂಸ್ಥೆಯ ಸದಸ್ಯತ್ವ ಪಡೆದ ರೈತರು ಭಾಗವಹಿಸಿ ಸಭೆಯನ್ನು ಯಶಸ್ವಿಗೊಳಿಸಿದರು. ಅಲ್ಲದೆ ಈಶಾ ಔಟ್ರೀಚ್ ಕೊಯಂ ಬತ್ತೂರು ಇಲ್ಲಿನ ಸ್ವಯಂ ಸೇವಕರು, ಕರ್ನಾಟಕದ ಈಶಾ ರೈತ ಉತ್ಪಾದಕ ಸಂಸ್ಥೆಗಳ ಸಂಯೋಜಕರಾದ ರಮಾ ಪ್ರಿಯ, ಕೊಡಗು ಈಶಾ ರೈತ ಉತ್ಪಾದಕ ಸಂಸ್ಥೆಗಳ ಸಂಯೋಜ ಕರಾದ ಪವಿತ್ರ ಹಾಜರಿದ್ದು ಸಂಸ್ಥೆಯ ಕಾರ್ಯಚಟುವಟಿಕೆಗಳ ಪ್ರಸ್ತುತಿ ನೀಡಿ ದರು. ಬಾಬು ರಾಘವನ್ ಅವರು ಸ್ವಾಗತಿ ಸಿದರು. ವಿದ್ಯಾ ನಿರೂಪಿಸಿ ವಂದಿಸಿದರು.