ಮಡಿಕೇರಿ, ನ. ೧೫: ಒಂದು ಕಡೆಯಿಂದ ಬಾರಿಸು ಕನ್ನಡ ಡಿಂಡಿಮವ ಕನ್ನಡ ಗೀತೆ ತೇಲಿ ಬರುತಿದ್ದರೆ, ಮತ್ತೊಂದೆಡೆಯಿAದ ವಚನದ ಘಮಲು., ಇನ್ನೊಂದು ಕಡೆಯಿಂದ ಕನ್ನಡ ಹಾಡಿಗೆ ಹೆಜ್ಜೆ., ಜೊತೆಗೆ ಕಂಸಾಳೆ ಕುಣಿತ.., ಇವೆಲ್ಲದರ ನಡುವೆ ಒನಕೆ ಓಬವ್ವ, ಕಿತ್ತೂರು ರಾಣಿ ಚೆನ್ನಮ್ಮ, ಸ್ವಾತಂತ್ರö್ಯ ಹೋರಾಟಗಾರ ಗುಡ್ಡೆಮನೆ ಅಪ್ಪಯ್ಯ ಗೌಡ., ಭಾರತೀಯ ವೀರ ಯೋಧ., ಕವಿ ಪುಂಗವರು., ವಿದೇಶಿ ಪ್ರಜೆಗಳು ರಾರಾಜಿಸಿದರು..! ಇಂತಹ ಒಂದು ಅಪರೂಪದ ಪ್ರಸಂಗ ಕಾಣಸಿಕ್ಕಿದ್ದು ಮಡಿಕೇರಿಯ ಕೊಡಗು ಗೌಡ ಸಮಾಜದ ಸಭಾಂಗಣದಲ್ಲಿ.,

ಹೌದು., ಈ ಸಭಾಂಗಣದಲ್ಲಿ ಎಲ್ಲರೂ ಜಾತಿ, ಧರ್ಮ, ಮತ ಬೇಧಗಳನ್ನು ಮರೆತು ಒಂದಾಗಿದ್ದರು. ಭಾಷೆ ಯಾವದಾದರೇನೂ ನಾವೆಲ್ಲರೂ ಒಂದೇ ಎಂಬ ಭಾವನೆಯೊಂದಿಗೆ ಕನ್ನಡ ಭಾಷೆಯ ಕಂಪನ್ನು ಹೊರ ಸೂಸಿದರು. ಈ ಒಂದು ಸುಸಂದರ್ಭಕ್ಕೆ ವೇದಿಕೆಯನ್ನು ಕೊಡಗು ಗೌಡ ಮಹಿಳಾ ಒಕ್ಕೂಟ ಕಲ್ಪಿಸಿಕೊಟ್ಟಿತ್ತು.

ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಮತ್ತು ಕೊಡಗು ಒಂದಾಗಿದ್ದರು. ಭಾಷೆ ಯಾವದಾದರೇನೂ ನಾವೆಲ್ಲರೂ ಒಂದೇ ಎಂಬ ಭಾವನೆಯೊಂದಿಗೆ ಕನ್ನಡ ಭಾಷೆಯ ಕಂಪನ್ನು ಹೊರ ಸೂಸಿದರು. ಈ ಒಂದು ಸುಸಂದರ್ಭಕ್ಕೆ ವೇದಿಕೆಯನ್ನು ಕೊಡಗು ಗೌಡ ಮಹಿಳಾ ಒಕ್ಕೂಟ ಕಲ್ಪಿಸಿಕೊಟ್ಟಿತ್ತು.

ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಮತ್ತು ಕೊಡಗು ಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ಗಡಿಯಲ್ಲಿ ನುಡಿಯಾಗಲಿ

ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದ ಮಡಿಕೇರಿ ನಗರಸಭಾಧ್ಯಕ್ಷೆ ನೆರವಂಡ ಅನಿತಾ ಪೂವಯ್ಯ; ರಾಜ್ಯದ ೯೮ ಗಡಿ ಜಿಲ್ಲೆಗಳಲ್ಲಿ ಯಾವ ಭಾಷೆ ಮಾತ ನಾಡಬೇಕು,

(ಮೊದಲ ಪುಟದಿಂದ) ಯಾವ ಸಂಸ್ಕೃತಿಯನ್ನು ಪಾಲಿಸಬೇಕೆಂಬ ಗೊಂದಲ ಅಲ್ಲಿನ ಜನತೆಯಲ್ಲಿದೆ. ಕಾಸರಗೋಡು, ಬೆಳಗಾವಿಯಂತಹ ಜಿಲ್ಲೆಗಳಲ್ಲಿ ಗಡಿವಿವಾದಗಳಿವೆ. ಇಂತಹ ಪ್ರದೇಶಗಳಲ್ಲಿ ಕನ್ನಡ ನುಡಿ, ಸಂಸ್ಕೃತಿ, ಕಲೆ, ಸಾಹಿತ್ಯ ಮುಂತಾದವುಗಳನ್ನು ಉಳಿಸಿ ಬೆಳೆಸಬೇಕಾಗಿದೆ. ಈ ನಿಟ್ಟಿನಲ್ಲಿ ಗಡಿ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಿ ಪ್ರಯತ್ನ ಮಾಡಲಾಗುತ್ತಿದೆ. ಗಡಿಭಾಗದಲ್ಲಿ ಇಂತಹ ಕಾರ್ಯಕ್ರಮಗಳು ಹೆಚ್ಚಾಗಿ ನಡೆಯಬೇಕು. ಗಡಿಯಲ್ಲಿ ಕನ್ನಡ ನುಡಿಯಾಗಬೇಕೆಂದು ಹೇಳಿದರು. ಯಾವದೇ ಕಾರ್ಯಕ್ರಮಗಳು ಯಶಸ್ವಿಯಾಗಬೇಕಾದಲ್ಲಿ ಮಹಿಳೆ ಯರ ಪಾತ್ರ ಮುಖ್ಯವಾದುದು. ಕೊಡಗು ಗೌಡ ಮಹಿಳಾ ಒಕ್ಕೂಟ ಈ ಒಂದು ಕಾರ್ಯವನ್ನು ಯಶಸ್ವಿಯಾಗಿ ಮಾಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಎದೆ ಬೃಂದಾವನವಾಗಲಿ

ಅತಿಥಿಗಾಳಗಿದ್ದ ನಿವೃತ್ತ ಪ್ರಾಂಶುಪಾಲ ಹಾಗೂ ಹಿರಿಯ ಸಾಹಿತಿ ಬಾರಿಯಂಡ ಜೋಯಪ್ಪ ಮಾತನಾಡಿ; ಭಾರತ ಅಮೃತೋತ್ಸವ ದೊಂದಿಗೆ ಕರ್ನಾಟಕ ಸುವರ್ಣ ಸಂಭ್ರಮಾಚರಣೆಯಲ್ಲಿ ನಾವಿದ್ದೇವೆ. ಇಂತಹ ಸಂದರ್ಭಗಳಲ್ಲಿ ಸಾಧನೆ ಮಾಡಿದವರನ್ನು ಗುರುತಿಸುವ ಕಾರ್ಯವಾಗುತ್ತಿದೆ. ಕನ್ನಡಿಗರಾದ ನಾವುಗಳು ಸೂಕ್ಷö್ಮ ಮನಸಿನವರಾಗಿದ್ದು, ಶಾಂತಿಯೊAದಿಗೆ ಎಲ್ಲರಲ್ಲೂ ಸಮಾನತೆಯನ್ನು ಕಾಣುವವರು. ಸಾಮನ್ಯವಾಗಿ ಗಡಿಪ್ರದೇಶವನ್ನು ನಾವುಗಳು ಶ್ರೀಮಂತ ಪ್ರದೇಶವೆಂದು ತಿಳಿದಿದ್ದೇವೆ. ಆದರೆ, ಅದು ಗೊಂದಲದ ಗೂಡಾಗಿದೆ. ಗಡಿ ಇಲ್ಲದೇ ಇದ್ದಿದ್ದರೆ ಹಣಕಾಸು ಉಳಿಕೆಯಾಗುತ್ತಿತ್ತು, ನಾಡಿನಲ್ಲಿ ಶಾಂತಿ ಇರುತ್ತಿತ್ತು ಎಂದು ಅಭಿಪ್ರಾಯಪಟ್ಟರು. ಭಾರತ ಇಂದು ಅಮೃತಮಹೋತ್ಸವ ಆಚರಿಸಬೇಕಾದರೆ ಇದರಲ್ಲಿ ಹಲವು ಹಿರಿಯರ ತ್ಯಾಗ, ಬಲಿದಾನವಿದೆ. ಈ ನಾಡು ನಮ್ಮದು ಎಂದು ಎಲ್ಲರೂ ಒಂದಾಗಬೇಕು, ನಮ್ಮ ಎದೆ ಸುಡುಗಾಡಾಗದೇ ಬೃಂದಾವನ ವಾಗಬೇಕೆಂದು ಕಿವಿ ಮಾತು ಹೇಳಿದರು.

ಕನ್ನಡಕ್ಕೆ ಆದ್ಯತೆ

ನಿವೃತ್ತ ಪ್ರಾಂಶುಪಾಲೆ ಕೊಂಬಾರನ ಕುಂತಿ ಬೋಪಯ್ಯ ಮಾತನಾಡಿ; ಕರ್ನಾಟಕ ರಾಜ್ಯ ಆರು ಗಡಿ ಪ್ರದೇಶಗಳನ್ನು ಹೊಂದಿದ್ದು, ಅಲ್ಲಿನ ಗ್ರಾಮಗಳು ಸಮಸ್ಯೆಗಳನ್ನು ಎದುರಿಸುತ್ತಿವೆ. ಈ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಗಡಿ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಲಾಗಿದೆ. ಕನ್ನಡಿಗರ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಸಮಸ್ಯೆಗಳನ್ನು ಪೂರೈಸುವ ಕೆಲಸ ಆಗಬೇಕಾಗಿದೆ ಎಂದು ಹೇಳಿದರು. ಅಭಿವೃದ್ಧಿ ಪ್ರಾಧಿಕಾರ ದಿಂದ ಪ್ರತಿವರ್ಷ ಅನೇಕ ಕಾರ್ಯ ಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಈ ಬಾರಿ ಮಡಿಕೇರಿಯಲ್ಲಿ ಎಲ್ಲರನ್ನೂ ಒಗ್ಗೂಡಿಸಿ ಕಾರ್ಯಕ್ರಮ ಹಮ್ಮಿ ಕೊಂಡಿರುವದು ಶ್ಲಾಘನೀಯವಾ ದುದು. ಗಡಿನಾಡ ಕನ್ನಡಿಗರು ಬಹು ಸಂಸ್ಕೃತಿಯವರಾಗಿದ್ದು, ಅವರ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಗಡಿಯಲ್ಲಿ ಕಾರ್ಯಕ್ರಮ ಆಯೋಜನೆ ಮಾಡುವಂತಾಗಬೇಕು. ಕರ್ನಾಟಕದಲ್ಲಿ ಕನ್ನಡಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಎಲ್ಲರಲ್ಲೂ ಕನ್ನಡದ ಪ್ರಜ್ಞೆ ಮೊಳಗಲಿ ಎಂದು ಹೇಳಿದರು.

ನಾವೆಲ್ಲರೂ ಒಂದೇ

ಹಿರಿಯ ಸಾಹಿತಿ ಮೊಣ್ಣಂಡ ಶೋಭಾ ಸುಬ್ಬಯ್ಯ ಮಾತನಾಡಿ; ಗಡಿ ಪ್ರದೇಶಗಳಲ್ಲಿ ಕನ್ನಡದ ಪ್ರೇಮಿಗಳಿದ್ದಾರೆ. ಕಾರಣಾಂತರಗಳಿAದ ಪ್ರೋತ್ಸಾಹದ ಕೊರತೆ ಇದೆ. ಅವರೂ ಕೂಡ ನಮ್ಮವರೇ, ನಾವುಗಳು ಸಹಕಾರ ನೀಡಬೇಕು. ಅಲ್ಲಲ್ಲಿ ಕನ್ನಡ ಸಂಘಟನೆಗಳಿವೆ, ಅವುಗಳ ಕಾರ್ಯಕ್ರಮಗಳಲ್ಲಿ ನಾವುಗಳು ಭಾಗವಹಿಸಬೇಕು ಎಂದು ಹೇಳಿದರು. ಗಡಿ ಭಾಗದಲ್ಲಿ ಕನ್ನಡ ಮಾತನಾಡಿದರೆ ತೊಂದರೆ ನೀಡುತ್ತಾರೆ, ತನ್ನತನವನ್ನು ಮರೆಯುವಂತಹ ಪರಿಸ್ಥಿತಿ ಇದೆ. ಅವರುಗಳಿಗೆ ನಾವು ಪ್ರೋತ್ಸಾಹ ನೀಡಬೇಕು, ವಿವಿಧತೆಯಲ್ಲಿ ಏಕತೆ ಹೊಂದಿರುವ ದೇಶ ನಮ್ಮದಾಗಿದ್ದು, ಜಾತಿ ನೂರು ಇರಲಿ ನಾವೆಲ್ಲರೂ ಒಂದೇ ಎಂಬ ಭಾವನೆ ಇರಬೇಕೆಂದು ಹೇಳಿದರು.

ಯಾವದೇ ಪರಿಮಿತಿಯಿಲ್ಲ

ಪತ್ರಕರ್ತ, ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷ ಕುಡೆಕಲ್ ಸಂತೋಷ್ ಮಾತನಾಡಿ; ಕಲೆ, ಸಾಹಿತ್ಯ, ಸಂಸ್ಕೃತಿಗೆ ಯಾವದೇ ಜಾತಿ, ಭಾಷೆ, ಧರ್ಮದ ಪರಿಮಿತಿಯಿಲ್ಲ, ಎಲ್ಲವನ್ನೂ ಮೀರಿದ ಎಲ್ಲರನ್ನೂ ಒಂದುಗೂಡಿಸುವ ಶಕ್ತಿ ತೊಂದರೆ ನೀಡುತ್ತಾರೆ, ತನ್ನತನವನ್ನು ಮರೆಯುವಂತಹ ಪರಿಸ್ಥಿತಿ ಇದೆ. ಅವರುಗಳಿಗೆ ನಾವು ಪ್ರೋತ್ಸಾಹ ನೀಡಬೇಕು, ವಿವಿಧತೆಯಲ್ಲಿ ಏಕತೆ ಹೊಂದಿರುವ ದೇಶ ನಮ್ಮದಾಗಿದ್ದು, ಜಾತಿ ನೂರು ಇರಲಿ ನಾವೆಲ್ಲರೂ ಒಂದೇ ಎಂಬ ಭಾವನೆ ಇರಬೇಕೆಂದು ಹೇಳಿದರು.

ಯಾವದೇ ಪರಿಮಿತಿಯಿಲ್ಲ

ಪತ್ರಕರ್ತ, ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷ ಕುಡೆಕಲ್ ಸಂತೋಷ್ ಮಾತನಾಡಿ; ಕಲೆ, ಸಾಹಿತ್ಯ, ಸಂಸ್ಕೃತಿಗೆ ಯಾವದೇ ಜಾತಿ, ಭಾಷೆ, ಧರ್ಮದ ಪರಿಮಿತಿಯಿಲ್ಲ, ಎಲ್ಲವನ್ನೂ ಮೀರಿದ ಎಲ್ಲರನ್ನೂ ಒಂದುಗೂಡಿಸುವ ಶಕ್ತಿ ಅವುಗಳಿಗೆ ಇದೆ. ನಮ್ಮೊಳÀಡಗಿರುವ ಪ್ರತಿಭೆಗಳನ್ನು ಹೊರಹಾಕುವ ಒಂದು ಕಾಯಕವಷ್ಟೇ ಎಂದು ಹೇಳಿದರು. ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಜನರ ಭಾಗವಹಿಸುವಿಕೆ ವಿರಳವಾಗಿರುತ್ತದೆ. ಅಂತಹದರಲ್ಲಿ ಮಹಿಳಾ ಒಕ್ಕೂಟದವರ ಶ್ರಮ ಶ್ಲಾಘನೀಯ, ಕಲಾವಿದರು ಕೇವಲ ವೇದಿಕೆ ಕಾರ್ಯಕ್ರಮಗಳಿಗೆ ಮಾತ್ರ ಸೀಮಿತವಾಗಿರದೆ ನಿರಂತರವಾಗಿ ಕಲಾಸೇವೆಯಲ್ಲಿ ತೊಡಗಿಸಿಕೊಳ್ಳಬೇಕು. ಇಂತಹ ಕಾರ್ಯಕ್ರಮಗಳು ಎಲ್ಲೇ ನಡೆದರೂ ಆಮಂತ್ರಣವಿಲ್ಲದಿದ್ದರೂ ಪಾಲ್ಗೊಳ್ಳುವದರೊಂದಿಗೆ ನಾಡು, ನುಡಿಯ ಕಟ್ಟುವ ಕಾರ್ಯಕ್ಕೆ ಸಹಕಾರ ನೀಡುವಂತೆ ಮನವಿ ಮಾಡಿದರು.ಅಧ್ಯಕ್ಷತೆ ವಹಿಸಿದ್ದ ಕೊಡಗು ಗೌಡ ಮಹಿಳಾ ಒಕ್ಕೂಟದ ಅಧ್ಯಕ್ಷೆ ಅಮೆ ದಮಯಂತಿ ಪ್ರಾಸ್ತಾವಿಕವಾಗಿ ಮಾತನಾಡಿ; ಗಡಿ ಅಭಿವೃದ್ಧಿ ಪ್ರಾಧಿಕಾರ ಈ ಜವಾಬ್ದಾರಿಯನ್ನು ಒಕ್ಕೂಟಕ್ಕೆ ನೀಡಿದ್ದು, ಕಳೆದ ಸಾಲಿನಲ್ಲಿಯೇ ನಡೆಸಬೇಕಾಗಿತ್ತು, ಕೋವಿಡ್, ಇನ್ನಿತರ ಕಾರಣಗಳಿಂದ ಸಾಧ್ಯವಾಗದ ಹಿನ್ನೆಲೆಯಲ್ಲಿ ಇದೀಗ ನವೆಂಬರ್ ತಿಂಗಳಲ್ಲಿ ಆಚರಿಸಲಾಗಿದೆ. ಒಕ್ಕೂಟದಿಂದ ಇನ್ನಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಲುವ ಉದ್ದೇಶ ಹೊಂದಿದ್ದು, ಎಲ್ಲರೂ ಸಹಕಾರ ನೀಡುವಂತೆ ಕೋರಿದರು. ಇದೇ ಸಂದರ್ಭ ಒಕ್ಕೂಟದ ನಿರ್ದೇಶಕಿ, ಕನ್ನಡ ಸಾಹಿತ್ಯ ಪರಿಷತ್ತಿನ ಕೊಡಗಿನ ಗೌರಮ್ಮ ದತ್ತಿ ಪ್ರಶಸ್ತಿ ವಿಜೇತರಾದ ಸಾಹಿತಿ ಕಟ್ರತನ ಲಲಿತ ಅಯ್ಯಣ್ಣ ಅವರನ್ನು ಸನ್ಮಾನಿಸಲಾಯಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇ ಶಕ ಚಿನ್ನಸ್ವಾಮಿ. ಒಕ್ಕೂಟದ ನಿರ್ದೇ ಶಕರುಗಳಾದ ಪೇರಿಯನ ಮುತ್ತಮ್ಮ, ಕಡ್ಲೇರ ಆಶಾ ಪ್ರಭು, ಬೈತಡ್ಕ ಜಾನಕಿ ಬೆಳ್ಯಪ್ಪ, ಇತರರು ಪಾಲ್ಗೊಂಡಿದ್ದರು.

ಮಹಿಳಾ ಒಕ್ಕೂಟದ ಸದಸ್ಯರು ಗಳು ನಾಡಗೀತೆ ಹಾಡಿದರು. ಬಾರನ ಶೋಭಾ ಹಾಗೂ ಕಟ್ರತನ ಲಲಿತ ಅಯ್ಯಣ್ಣ ಕಾರ್ಯಕ್ರಮ ನಿರೂಪಿಸಿದರು. ದೇಲಂಪಾಡಿ ರಮ್ಯ ಸನ್ಮಾನಿತರ ಪರಿಚಯ ಮಾಡಿದರು. ಒಕ್ಕೂಟದ ಸ್ಥಾಪಕ ಕಾರ್ಯದರ್ಶಿ ಕೂಡಕಂಡಿ ಕಾವೇರಮ್ಮ ವಂದಿಸಿದರು.