ಚೆಯ್ಯಂಡಾಣೆ, ನ. ೧೫: ನರಿಯಂದಡ ಗ್ರಾ.ಪಂ. ವ್ಯಾಪ್ತಿಯ ಕರಡ ಗ್ರಾಮದ ಕೀಮಲೆ ಕಾಡುವಿನಲ್ಲಿರುವ ಮನೆಯೊಂದರ ನಿವಾಸಿಗಳಿಗೆ ಮಂಗಳವಾರ ಬೆಳ್ಳಂಬೆಳಿಗ್ಗೆ ಅಚ್ಚರಿಯೊಂದು ಕಾದಿತ್ತು. ಅದಾಗತಾನೆ ಜನ್ಮತಾಳಿದ್ದ ಅರಣ್ಯ ಜೀವಿಯೊಂದು ಈ ಮನೆಯ ಜಗುಲಿಯಲ್ಲಿ ಕಂಡುಬAದು ಮನೆಯೊಳಗೆ ನುಗ್ಗಲು ಒದ್ದಾಡುತ್ತಿತ್ತು. ಅಂದಹಾಗೆ ಈ ಅತಿಥಿ ಬೆಳಗ್ಗಿನ ಜಾವ ಈ ಪ್ರಪಂಚಕ್ಕೆ ಕಾಲಿರಿಸಿದ್ದ ಪುಟ್ಟ ಆನೆ ಮರಿಯಾಗಿತ್ತು. ಅಲ್ಲಿನ ನಿವಾಸಿ ಮಾಜಿ ಯೋಧ ಪಟ್ರಪಂಡ ಸೋಮೇಶ್ ಚಂಗಪ್ಪ ಅವರ ಮನೆ ಸನಿಹದ ನಿವಾಸಿ ಮೊಣ್ಣಕುಟ್ಟಂಡ ಮಂಜು ಎಂಬವರ ಮನೆಯ ಸನಿಹ ಮುಂಜಾನೆ ಕಾಡಾನೆಯೊಂದು ಹೆಣ್ಣು ಆನೆ ಮರಿಗೆ ಜನ್ಮ ನೀಡಿದ್ದು, ನಂತರದಲ್ಲಿ ದೂರಾಗಿತ್ತು. ಈ ಆನೆಯೊಂದಿಗೆ ಇನ್ನೂ ನಾಲ್ಕು ಆನೆಗಳಿದ್ದು, ಸಾರ್ವಜನಿಕರ ಶಬ್ದ ಹಾಗೂ ಪಟಾಕಿಯ ಶಬ್ದಕ್ಕೆ ಬೆದರಿ ಮರಿಯಿಂದ ದೂರಾಗಿತ್ತೆನ್ನಲಾಗಿದೆ. ಈ ಮರಿ ಆ ಮನೆಯ ಜಗುಲಿಗೇ ಬಂದು ಮನೆಯೊಳಗೆ ನುಗ್ಗುವ ಪ್ರಯತ್ನ ನಡೆಸುತ್ತಿದ್ದುದನ್ನು ಹಲವರು ವೀಡಿಯೋ ಮಾಡಿದ್ದಾರೆ. ಈ ವಿಷಯವನ್ನರಿತ ಗ್ರಾಮಸ್ಥರು ಬಳಿಕ ತಂಡೋಪ ತಂಡವಾಗಿ ಇದನ್ನು ವೀಕ್ಷಿಸಲು ಆಗಮಿಸುತ್ತಿದ್ದರು.
(ಮೊದಲ ಪುಟದಿಂದ) ಬಳಿಕ ಅರಣ್ಯ ಇಲಾಖೆಗೂ ಸುದ್ದಿ ಮುಟ್ಟಿಸಲಾಯಿತು. ತದನಂತರದಲ್ಲಿ ವೀರಾಜಪೇಟೆ ಅರಣ್ಯ ವಲಯಾಧಿಕಾರಿಗಳಾದ ಕಳ್ಳಿರ ದೇವಯ್ಯ ಹಾಗೂ ತಂಡ ಭೇಟಿ ನೀಡಿ ಸೂಕ್ತ ಕ್ರಮ ಕೈಗೊಂಡರು. ಘಟನೆ ಬಗ್ಗೆ ಅರಣ್ಯ ಅಧಿಕಾರಿಗಳಿಗೆ ಗ್ರಾಮಸ್ಥರು ಮಾಹಿತಿ ನೀಡಿದರೂ ಸ್ಥಳಕ್ಕೆ ತಡವಾಗಿ ಆಗಮಿಸಿದಕ್ಕೆ ಅರಣ್ಯಾಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶವನ್ನು ಹೊರ ಹಾಕಿದರು. ಆರೈಕೆ ಹಾಗೂ ತಾಯಿಯ ಮಡಿಲು ಸೇರಿಸಲು ಹರಸಾಹಸ ಪಟ್ಟ ಅರಣ್ಯ ಇಲಾಖೆ ಸಿಬ್ಬಂದಿಗಳು ಮರಿ ಆನೆಗೆ ಲ್ಯಾಕ್ಟೊಜೆಲ್, ಗ್ಲುಕೋಸ್ ಹಾಲುಗಳನ್ನು ನೀಡಿ ಆರೈಕೆ ಮಾಡಿ ನಂತರ ೭ ಕಿ.ಮಿ ದೂರದ ಮಾಕುಟ್ಟ ಅರಣ್ಯದ ಇಚ್ ಮೊಟ್ಟೆಯ ಕೆಳಭಾಗದಲ್ಲಿ ಬೀಡು ಬಿಟ್ಟಿದ್ದ ಒಟ್ಟು ೪ ಆನೆಗಳ ಪೈಕಿ ತಾಯಿ ಆನೆಯ ಸಮೀಪಕ್ಕೆ ತೆರಳಿ ಮರಿ ಆನೆಯನ್ನು ಅದರೊಟ್ಟಿಗೆ ಸೇರಿಸುವಲ್ಲಿ ಯಶಸ್ವಿಯಾ ದರು. ಈ ಕಾರ್ಯಾಚರಣೆಗೆ ಮಾಜಿ ಯೋಧ ಸೋಮೇಶ್ ಚಂಗಪ್ಪ ಹಾಗೂ ಸಾರ್ವಜನಿಕರೂ ಕೈಜೋಡಿಸಿದರು. ಚಂಗಪ್ಪ ಅವರ ಜೀಪಿನಲ್ಲೇ ಮರಿಯನ್ನು ಸಾಗಿಸಲಾಯಿತು. ಗ್ರಾಮದಲ್ಲಿ ಕಾಡಾನೆ ನಿರಂತರ ತೋಟಗಳಿಗೆ ಲಗ್ಗೆ ಇಟ್ಟು ಅಪಾರ ಪ್ರಮಾಣದಲ್ಲಿ ಕೃಷಿ ಫÀಸಲುಗಳನ್ನು ಹಾನಿಪಡಿಸುತ್ತಿದ್ದು, ಅರಣ್ಯ ಇಲಾಖೆ ಕೂಡಲೇ ತೋಟಗಳಲ್ಲಿ ಬೀಡು ಬಿಟ್ಟ ಉಳಿದ ಕಾಡಾನೆಗಳನ್ನು ಕಾಡಿಗಟ್ಟ ಬೇಕು. ಇಲ್ಲ ಸೆರೆ ಹಿಡಿದು ಬೇರೆಡೆ ಸ್ಥಳಾಂತರಿಸಲು ಕ್ರಮ ಕೈಗೊಳ್ಳಬೇಕು. ಅದರಂತೆ ನಷ್ಟ ಹೊಂದಿದ ತೋಟದ ಮಾಲೀಕರಿಗೆ ಸೂಕ್ತ ಪರಿಹಾರ ನೀಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದರು. ಗ್ರಾಮದ ತೋಟಗಳೇ ಕಾಡಾನೆಗಳ ವಾಸ ಸ್ಥಳವಾಗಿದ್ದು, ಇಲ್ಲೇ ಮರಿಗಳನ್ನು ಹಾಕುವಂತಾಗಿದೆ. ಗ್ರಾಮಸ್ಥರು ಭಯದಿಂದ ಕಾಲ ಕಳೆಯುವ ಸನ್ನಿವೇಶ ನಿರ್ಮಾಣವಾಗಿದ್ದು ಕೂಡಲೇ ಸಂಬAಧ ಪಟ್ಟ ಇಲಾಖೆ ಕ್ರಮ ಕೈಗೊಳ್ಳುವಂತೆ ನಿವೃತ್ತ ಯೋಧ ಪಟ್ರಪಂಡ ಸೋಮೇಶ್, ಬಾಚಮಂಡ ಲೋಕೇಶ್ ಹಾಗೂ ಗ್ರಾಮಸ್ಥರು ಒತ್ತಾಯಿಸಿದರು. ವೀರಾಜಪೇಟೆ ಅರಣ್ಯ ವಲಯ ಆರ್ ಎಫ್ ಒ ಕಳ್ಳಿರ ದೇವಯ್ಯ ಮಾತನಾಡಿ ೪ ಕಾಡಾನೆಯ ಹಿಂಡುವಿನಲ್ಲಿದ್ದ ಒಂದು ಹೆಣ್ಣಾನೆ ಮರಿ ಆನೆಗೆ ಜನ್ಮ ನೀಡಿದೆ. ಹೆಚ್ಚು ಜನರು ಸೇರುವ ಸಂದರ್ಭ ಅದು ಸ್ಥಳೀಯ ನಿವಾಸಿ ಮಂಜು ಅವರ ಮನೆಗೆ ಸೇರಿಕೊಂಡಿದೆ. ಮಾಹಿತಿ ತಿಳಿದ ತಕ್ಷಣ ಅರಣ್ಯ ಅಧಿಕಾರಿಗಳಾದ ಮಹೇಶ್ ಕುಮಾರ್ ತ್ರಿಪಟೇಶ್, ಶರಣ ಬಸಪ್ಪ ಹಾಗೂ ನೆಹರು ರವರ ಮಾರ್ಗದರ್ಶನದಲ್ಲಿ ಸಿಬ್ಬಂದಿಗಳೊA ದಿಗೆ ಸೇರಿ ಮರಿಯಾನೆಯ ಆರೋಗ್ಯ ಬಗ್ಗೆ ನಿಗಾವಹಿಸಿ, ಗ್ಲುಕೋಸ್ ಹಾಲು, ಲಾಕ್ಟೋಜೆಲ್ಗಳನ್ನು ನೀಡಿ ಅದರ ತಾಯಿಯ ಜೊತೆ ಸೇರಿಸುವಂತ ಪ್ರಯತ್ನ ಪಟ್ಟು ಜನ್ಮ ನೀಡಿದ ಸಂದರ್ಭ ಆನೆಗೆ ರಕ್ತಸ್ರಾವವಾದ ಕುರುಹು ದೊರೆತ ಹಿನೆÀ್ನಲೆಯಲ್ಲಿ ಅದರ ಸಮೀಪದಲ್ಲೇ ಬಿಟ್ಟು ಅದರ ಮಡಿಲು ಸೇರಿಸಲು ನಾವು ಯಶಸ್ವಿಯಾಗಿರುವುದಾಗಿ ತಿಳಿಸಿದರು. ಈ ಸಂದರ್ಭ ವೀರಾಜಪೇಟೆ ಅರಣ್ಯ ಡಿಆರ್ಎಫ್ಒ ಅನಿಲ್, ಗಾರ್ಡ್ ಮಾಲ್ತೇಶ್, ಆನೆ ಕ್ಷಿಪ್ರ ಕಾರ್ಯಪಡೆಯ ಶ್ರೀಶೈಲಾ ಅರಣ್ಯ ಇಲಾಖೆಯ ಸಿಬ್ಬಂದಿ ಹಾಗೂ ಕ್ಯಾಂಪ್ ಸಿಬ್ಬಂದಿಗಳು ಹಾಜರಿದ್ದರು. -ಅಶ್ರಫ್