ಮಡಿಕೇರಿ, ನ. ೧೫: ಡಿಸೆಂಬರ್ ೫ ರಿಂದ ೧೬ರ ತನಕ ಮಲೇಷಿಯಾದ ಕೌಲಾಲಂಪುರದಲ್ಲಿ ನಡೆಯಲಿರುವ ಎಫ್.ಐ.ಎಚ್. ಪುರುಷರ ಜೂನಿಯರ್ ವಿಶ್ವಕಪ್ ಹಾಕಿ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲಿರುವ ಭಾರತ ತಂಡವನ್ನು ಹಾಕಿ ಇಂಡಿಯಾ ಪ್ರಕಟಿಸಿದೆ. ತಂಡದಲ್ಲಿ ಕರ್ನಾಟಕದ ಇಬ್ಬರು ಸ್ಥಾನ ಪಡೆದಿದ್ದು, ಇವರಲ್ಲಿ ಕೊಡಗಿನವರಾದ ಚಂದುರ ಬಿ. ಪೂವಣ್ಣ ಅವರು ಒಬ್ಬರಾಗಿದ್ದಾರೆ. ಕಳೆದ ಹಲವು ಸಮಯದಿಂದ ಪೂವಣ್ಣ ಭಾರತ ಜೂನಿಯರ್ ತಂಡದಲ್ಲಿ ಆಡುತ್ತಿದ್ದು, ಇದೀಗ ವಿಶ್ವಕಪ್ ಪಂದ್ಯಾವಳಿಗೂ ಆಯ್ಕೆಗೊಂಡಿದ್ದಾರೆ. ಇವರು ಮೂಲತಃ ಕಂಡAಗಾಲದ ನಿವಾಸಿ ಚಂದುರ ಬಾಬಿ (ಪ್ರಭು) ಹಾಗೂ ಅನಿಲ (ತಾಮನೆ - ಮಲ್ಲೇಂಗಡ) ದಂಪತಿಯ ಪುತ್ರ . ಹಾಸನ ಜಿಲ್ಲೆಯ ಮೋಹಿತ್ ಹೆಚ್.ಎಸ್. ತಂಡದಲ್ಲಿರುವ ಕರ್ನಾಟಕದ ಮತ್ತೋರ್ವ ಆಟಗಾರರಾಗಿದ್ದಾರೆ.