ಸೋಮವಾರಪೇಟೆ, ನ. ೧೫: ಮಡಿಕೇರಿ-ಸೋಮವಾರಪೇಟೆ ರಾಜ್ಯ ಹೆದ್ದಾರಿಯ ನಗರೂರು ಬಳಿಯಲ್ಲಿ ಎರಡು ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಓರ್ವ ಸಾವನ್ನಪ್ಪಿ, ನಾಲ್ವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಇಂದು ಸಂಜೆ ಸಂಭವಿಸಿದೆ.

ಸೋಮವಾರಪೇಟೆಯಿAದ ಕುಶಾಲನಗರಕ್ಕೆ ತೆರಳುತ್ತಿದ್ದ ತಾಲೂಕಿನ ಇನಕನಹಳ್ಳಿ ಗ್ರಾಮದ ವಿಜಯ್, ಧ್ಯಾನ್ ಅವರುಗಳು ತೆರಳುತ್ತಿದ್ದ ಬೈಕ್‌ಗೆ, ಕುಶಾಲನಗರ ಕಡೆಯಿಂದ ಪಟ್ಟಣಕ್ಕೆ ಆಗಮಿಸುತ್ತಿದ್ದ ಕಾರೇಕೊಪ್ಪ ಗ್ರಾಮದ ಭಾಸ್ಕರ್, ನಿಧೀಶ್, ವಿನೋದ್ ಕುಮಾರ್ ಅವರುಗಳಿದ್ದ ಬೈಕ್ ಮುಖಾಮುಖಿ ಡಿಕ್ಕಿಯಾಗಿದೆ.

ಘಟನೆಯಿಂದ ಐವರು ಗಂಭೀರ ಗಾಯಗೊಂಡಿದ್ದು, ಕಾರೇಕೊಪ್ಪದ ವಿನೋದ್‌ಕುಮಾರ್(೨೬) ಮಡಿಕೇರಿಯ ಜಿಲ್ಲಾಸ್ಪತ್ರೆಯಲ್ಲಿ ಅಸುನೀಗಿದ್ದಾರೆ. ಭಾಸ್ಕರ್, ವಿಜಯ್ ಎಂಬವರ ತೊಡೆ ಭಾಗ ಮುರಿದಿದ್ದು, ತಲೆಗೆ ತೀವ್ರ ಗಾಯವಾಗಿದೆ. ಗಾಯಾಳುಗಳಿಗೆ ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಮಡಿಕೇರಿ ಜಿಲ್ಲಾಸ್ಪತ್ರೆಗೆ ಕಳುಹಿಸಲಾಗಿದೆ.

ಕಾರೇಕೊಪ್ಪದ ಭಾಸ್ಕರ್, ನಿಧೀಶ್ ಹಾಗೂ ವಿನೋದ್‌ಕುಮಾರ್ ಅವರುಗಳು ಹೀರೋ ಹೋಂಡಾ ಸ್ಲೆ÷್ಪಂಡರ್ ಬೈಕ್‌ನಲ್ಲಿ ಕಾರೇಕೊಪ್ಪದಿಂದ ಸೋಮವಾರಪೇಟೆಗೆ ಆಗಮಿಸುತ್ತಿದ್ದ ಸಂದರ್ಭ ನಗರೂರು ಗ್ರಾಮದ ಬಳಿಯಲ್ಲಿ ತೆರಳುತ್ತಿದ್ದ ಮಾರುತಿ ೮೦೦ ಕಾರನ್ನು

(ಮೊದಲ ಪುಟದಿಂದ) ಓವರ್‌ಟೇಕ್ ಮಾಡಿ ಮುನ್ನುಗ್ಗಿದಾಗ ಎದುರಿನಿಂದ ಆಗಮಿಸು ತ್ತಿದ್ದ ವಿಜಯ್ ಹಾಗೂ ಧ್ಯಾನ್ ಅವರುಗಳಿದ್ದ ಬೈಕ್‌ಗೆ ಡಿಕ್ಕಿಯಾಗಿ ಅವಘಡ ಸಂಭವಿಸಿದೆ. ಘಟನೆ ಯಿಂದ ಐವರು ರಸ್ತೆಯಲ್ಲಿ ಬಿದ್ದ ಸಂದರ್ಭ ಸಮೀಪದಲ್ಲಿದ್ದ ಟಿಂಬರ್ ಖರೀದಿ ಕೇಂದ್ರದ ಸಿಬ್ಬಂದಿಗಳು, ವರ್ಕ್ಶಾಪ್ ಕೆಲಸಗಾರರು ಹಾಗೂ ಸಾರ್ವಜನಿಕರು ಗಾಯಾಳುಗಳನ್ನು ಆಸ್ಪತ್ರೆಗೆ ಕಳುಹಿಸಲು ಸಹಕಾರ ನೀಡಿದ್ದಾರೆ. ಪೊಲೀಸ್ ಇನ್ಸ್ಪೆಕ್ಟರ್ ರಾಮಚಂದ್ರನಾಯಕ್ ಹಾಗೂ ಸಿಬ್ಬಂದಿಗಳು ಸ್ಥಳಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಪೋಷಕರಿಗೆ ಎಡೆ ಇಡಲು ಬಂದಿದ್ದ ವಿನೋದ್: ಬೆಂಗಳೂರಿನಲ್ಲಿ ವಾಹನದ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದ ವಿನೋದ್ ಕುಮಾರ್, ಕಳೆದ ತಾ. ೧೨ರಂದು ಕಾರೇಕೊಪ್ಪದ ಮನೆಗೆ ಬಂದಿದ್ದ. ಕಳೆದ ೭ ವರ್ಷಗಳ ಹಿಂದೆ ತಂದೆ ಅಯ್ಯಪ್ಪ ಹಾಗೂ ತಾಯಿ ಶಕುಂತಲ ಅವರುಗಳು ಆತ್ಮಹತ್ಯೆಗೆ ಶರಣಾಗಿದ್ದು, ಅವರಿಗೆ ವರ್ಷಂಪ್ರತಿ ದೀಪಾವಳಿಯ ಅಮಾವಾಸ್ಯೆ ಯಂದು ಎಡೆ ಪೂಜೆ ಮಾಡುತ್ತಿದ್ದ. ತಾ.೧೩ರ ಅಮಾವಾಸ್ಯೆ ಯಂದು ಎಡೆ ಪೂಜೆ ಮಾಡಿ ನಿನ್ನೆ ದಿನ ಬೆಂಗಳೂರಿಗೆ ವಾಪಸ್ ತೆರಳಲು ಯೋಚಿಸಿದ್ದ ವಿನೋದ್, ಕೊನೆಕ್ಷಣದಲ್ಲಿ ನಿರ್ಧಾರ ಬದಲಿಸಿ ಒಂದು ದಿನ ಕಳೆದು ಹೋಗುವುದಾಗಿ ಸಹೋದರನಿಗೆ ತಿಳಿಸಿದ್ದ. ಅದರಂತೆ ತಾ. ೧೬ರಂದು ಬೆಳಿಗ್ಗೆ ೪ ಗಂಟೆಯ ಬಸ್‌ಗೆ ಬೆಂಗಳೂರಿಗೆ ತೆರಳಲು ಸಿದ್ದತೆ ಮಾಡಿಕೊಂಡಿದ್ದ. ಆದರೆ ಇಂದು ಸಂಜೆ ವೇಳೆಗೆ ಪಟ್ಟಣಕ್ಕೆ ಗೆಳೆಯರೊಂದಿಗೆ ಆಗಮಿಸುತ್ತಿದ್ದ ಸಂದರ್ಭ ಅವಘಡದಲ್ಲಿ ಸಾವಿಗೀಡಾಗಿದ್ದು, ಅವಿವಾಹಿತ ನಾಗಿದ್ದ ಮೃತ ವಿನೋದ್ ಓರ್ವ ಸಹೋದರನನ್ನು ಅಗಲಿದ್ದಾನೆ.