ಮುರುಘಾ ಶ್ರೀ ಬಿಡುಗಡೆ
ಚಿತ್ರದುರ್ಗ, ನ. ೧೬: ನಗರದ ಹೊರವಲಯದಲ್ಲಿರುವ ಮುರುಘಾ ಮಠದ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಜೈಲು ಸೇರಿದ್ದ ಮುರುಘಾ ಶ್ರೀ ಇಂದು ಜೈಲಿನಿಂದ ಬಿಡುಗಡೆ ಆಗಿದ್ದಾರೆ. ಕಳೆದ ೧೩ ತಿಂಗಳಿನಿAದ ನ್ಯಾಯಾಂಗ ಬಂಧನದಲ್ಲಿದ್ದ ಮುರುಘಾ ಮಠದ ಶಿವಮೂರ್ತಿ ಶರಣರು ಚಿತ್ರದುರ್ಗ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಪೋಕ್ಸೋ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದ ಮುರುಘಾ ಶ್ರೀಗಳಿಗೆ ಜಾಮೀನು ಮಂಜೂರು ಮಾಡಿದ ಹಿನ್ನೆಲೆಯಲ್ಲಿ ಇಂದು ಜೈಲಿನಿಂದ ಬಿಡು ಗಡೆಯಾಗಿದ್ದಾರೆ. ಕಾರಾಗೃಹದಿಂದ ಹೊರಬಂದ ಶರಣರು ಭಕ್ತರ ಕಾರಿನಲ್ಲಿ ಪ್ರಯಾಣ ಬೆಳೆಸಿದರು. ಬಿಡುಗಡೆ ಬಳಿಕ ಚಿತ್ರದುರ್ಗ ಜಿಲ್ಲೆ ಪ್ರವೇಶ ಮಾಡ ದಂತೆ ಹೈಕೋರ್ಟ್ ಷರತ್ತು ವಿಧಿಸಿದ್ದರಿಂದ ದಾವಣಗೆರೆಯತ್ತ ತೆರಳಿದರು ಎನ್ನಲಾಗಿದೆ. ಮುರುಘಾ ಶ್ರೀ ವಿರುದ್ಧ ಎರಡು ಪೋಕ್ಸೋ ಪ್ರಕರಣ ದಾಖಲಾ ಗಿತ್ತು. ನ.೮ ರಂದು ಒಂದು ಪ್ರಕರಣದಲ್ಲಿ ಜಾಮೀನು ಸಿಕ್ಕಿದ್ದರೂ ಎರಡನೇ ಪೋಕ್ಸೋ ಪ್ರಕರಣದ ಜಾಮೀನು ಅರ್ಜಿ ವಿಚಾರಣೆ ಹೈಕೋರ್ಟ್ನಲ್ಲಿ ಬಾಕಿಯಿದ್ದ ಹಿನ್ನೆಲೆಯಲ್ಲಿ ಬಿಡುಗಡೆಯಾಗಿರಲಿಲ್ಲ. ಜಾಮೀನು ಆದೇಶ ನೀಡುವ ಚಿತ್ರದುರ್ಗದಲ್ಲಿ ನೆಲೆಸುವಂತಿಲ್ಲ ಎಂದು ಕೋರ್ಟ್ ಷರತ್ತು ವಿಧಿಸಿದ ಹಿನ್ನೆಲೆಯಲ್ಲಿ ಶ್ರೀಗಳು ಜೈಲಿನಿಂದ ಬಿಡುಗಡೆಯಾದ ಬಳಿಕ ದಾವಣಗೆರೆ ಕಡೆ ಹೊರಟಿದ್ದಾರೆ. ವಿಚಾರಣೆ ಮುಗಿಯುವವರೆಗೂ ಚಿತ್ರದುರ್ಗಕ್ಕೆ ಹೋಗುವಂತಿಲ್ಲ. ಇಬ್ಬರ ಶ್ಯೂರಿಟಿಯನ್ನು ಒದಗಿಸಬೇಕು. ವೀಡಿಯೊ ಕಾನ್ಫರೆನ್ಸ್ ಮೂಲಕ ಕೋರ್ಟ್ ವಿಚಾರಣೆಗೆ ಹಾಜರಾಗಬೇಕು. ಎರಡು ಲಕ್ಷ ರೂ. ಬಾಂಡ್ ಶ್ಯೂರಿಟಿ ನೀಡಬೇಕು. ಪಾಸ್ಪೋರ್ಟ್ ಕೋರ್ಟ್ ವಶಕ್ಕೆ ನೀಡಬೇಕು. ಸಾಕ್ಷಿಗಳಿಗೆ ಬೆದರಿಕೆ ಹಾಕಬಾರದು. ಇಂತಹ ಕೃತ್ಯ ಪುನರಾವರ್ತನೆಯಾಗಬಾರದು ಎಂದು ಷರತ್ತು ವಿಧಿಸಿದೆ.
‘ಮಗನ ಹಸ್ತಕ್ಷೇಪವಿಲ್ಲ - ಆರೋಪ ಸಾಬೀತಾದರೆ ರಾಜೀನಾಮೆ’
ಬೆಂಗಳೂರು, ನ. ೧೬: ಸಿಎಸ್ಆರ್ ಫಂಡಿAಗ್ ಬಗ್ಗೆ ನನ್ನ ಪುತ್ರ ಡಾ. ಯತೀಂದ್ರ ಪ್ರಸ್ತಾಪಿಸಿದ್ದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯಿಸಿದ್ದಾರೆ. ಡಾ. ಯತೀಂದ್ರ ಸಿದ್ದರಾಮಯ್ಯ ಮೊಬೈಲ್ನಲ್ಲಿ ಮಾತನಾಡಿರುವ ವೀಡಿಯೋ ಮಾಧ್ಯಮಗಳಲ್ಲಿ ತೀವ್ರ ಸುದ್ದಿಯಾಗಿ ವಿರೋಧ ಪಕ್ಷಗಳು ಟೀಕಿಸುತ್ತಿರುವ ಸಂದರ್ಭದಲ್ಲಿ ಪ್ರತಿಕ್ರಿಯಿಸಿರುವ ಸಿಎಂ ಸಿದ್ದರಾಮಯ್ಯ ಶಾಲೆಗಳನ್ನು ದುರಸ್ತಿ ಮಾಡಲಾಗುತ್ತಿದೆ. ಅದಕ್ಕೆ ಸಿಎಸ್ಆರ್ ಫಂಡ್ ಒದಗಿಸುವ ಬಗ್ಗೆ ಮಾತನಾಡಿ ದ್ದಾರೆ ಹೊರತು ವರ್ಗಾವಣೆ ಬಗ್ಗೆ ಅಲ್ಲ ಎಂದು ಸ್ಪಷ್ಟಪಡಿಸಿದರು. ಐದು ಹೆಸರು ಮಾತ್ರ ಎಂದು ಮೊಬೈಲ್ನಲ್ಲಿ ಯತೀಂದ್ರ ಹೇಳಿದ್ದರ ಬಗ್ಗೆ ಕೇಳಿದಾಗ ಐದು ಹೆಸರು ಅಂದರೆ ವರ್ಗಾವಣೆ ಮಾಡುವ ಹೆಸರುಗಳೆಂದರ್ಥವೇ, ಇದನ್ನು ಭಾರೀ ದೊಡ್ಡದಾಗಿ ವಿವಾದ ಮಾಡುತ್ತಿದ್ದಾ ರಷ್ಟೆ. ನನ್ನ ೪೦ ವರ್ಷಗಳ ರಾಜಕೀಯ ಜೀವನದಲ್ಲಿ ಯಾವುದೇ ದಂಧೆ, ಹಗರಣಗಳಲ್ಲಿ ಭಾಗಿಯಾಗಿಲ್ಲ. ಕುಮಾರಸ್ವಾಮಿ ರಾಜಕೀಯಕ್ಕಾಗಿ ಏನೆಲ್ಲಾ ಆರೋಪ ಮಾಡಬಹುದು, ಮಾಡಿಕೊಳ್ಳಲಿ, ಕುಮಾರಸ್ವಾಮಿ ಆರೋಪಗಳ ಬಗ್ಗೆ ಬೇಕಾದರೆ ತನಿಖೆ ಮಾಡಿಕೊಳ್ಳಲಿ, ನನ್ನ ರಾಜಕೀಯ ಜೀವನದಲ್ಲಿ ವರ್ಗಾವಣೆ ದಂಧೆ ಮಾಡಿಲ್ಲ. ವರ್ಗಾವಣೆ ದಂಧೆ ಮಾಡಿದ್ದು ಸಾಬೀತಾದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದರು.
ಕಾರ್ಯಾಚರಣೆ ತೀವ್ರಗೊಳಿಸಿದ ಇಸ್ರೇಲ್ ಸೇನೆ
ಟೆಲ್ಅವೀವ್, ನ. ೧೬: ಹಮಾಸ್ ಉಗ್ರರ ವಿರುದ್ಧ ಕಾರ್ಯಾಚರಣೆ ತೀವ್ರಗೊಳಿಸಿರುವ ಇಸ್ರೇಲ್ ಸೇನೆ ಗಾಜಾದ ಮೂಲೆ ಮೂಲೆಯಲ್ಲೂ ಉಗ್ರರಿಗಾಗಿ ತೀವ್ರ ಶೋಧ ನಡೆಸುತ್ತಿದ್ದು, ಏತನ್ಮಧ್ಯೆ ಹಮಾಸ್ ಉಗ್ರ ಸಂಘಟನೆಯ ಮುಖಂಡನ ಮನೆಯನ್ನೇ ಇಸ್ರೇಲ್ ವಾಯುಸೇನೆ ಬಾಂಬ್ ಹಾಕಿ ಉಡಾಯಿಸಿದೆ. ಹಮಾಸ್ ಉಗ್ರ ಸಂಘಟನೆಯ ಪ್ರಮುಖ ಉಗ್ರನೊಬ್ಬನ ಮನೆಯನ್ನೇ ಇಸ್ರೇಲ್ ಬಾಂಬಿಟ್ಟು ಧ್ವಂಸಗೊಳಿಸಿದೆ. ಈ ಸಿನಿಮೀಯ ವೀಡಿಯೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಹಮಾಸ್ ಪ್ರಮುಖ ಉಗ್ರ, ಹಮಾಸ್ ರಾಜಕೀಯ ವಿಭಾಗದ ಮುಖ್ಯಸ್ಥ ಇಸ್ಮಾಯಿಲ್ ಹನಿಯೇಹ್ ಎಂಬಾತನ ಮನೆಯನ್ನು ಇಸ್ರೇಲ್ ಸೇನೆಯು ಬಾಂಬಿಟ್ಟು ಧ್ವಂಸಗೊಳಿಸಿದೆ. ಮನೆ ಧ್ವಂಸಗೊಳಿಸಿದ ಬಳಿಕ ಇಸ್ರೇಲ್ ಸೈನಿಕರು ಆ ಮನೆಯನ್ನು ಶೋಧ ಮಾಡಿದ ವಿಡಿಯೊವನ್ನು ಕೂಡ ಹಂಚಿಕೊಳ್ಳಲಾಗಿದೆ. ಆದರೆ, ಇಸ್ಮಾಯಿಲ್ ಹನಿಯೇಹ್ ಹತ್ಯೆಗೀಡಾಗಿರುವ ಕುರಿತು ಮಾಹಿತಿ ಲಭ್ಯವಾಗಿಲ್ಲ. ಈಗಾಗಲೇ ಹಮಾಸ್ ಉಗ್ರ ಸಂಘಟನೆಯ ಹಲವು ಮುಖಂಡರನ್ನು ಇಸ್ರೇಲ್ ಹತ್ಯೆಗೈದಿದೆ.
ಸಾವಿರಾರು ರಾಕೆಟ್ಗಳ ಮೂಲಕ ದಾಳಿ ಮಾಡಿದ ಹಮಾಸ್ ಉಗ್ರರನ್ನು ನಿರ್ನಾಮ ಮಾಡುವ ಪಣತೊಟ್ಟಿರುವ ಇಸ್ರೇಲ್ ಸೇನೆಯು ಗಾಜಾ ನಗರದ ಪ್ರತಿಯೊಂದು ಮೂಲೆಗಳಲ್ಲೂ ಆವರಿಸಿದ್ದಾರೆ. ಸುರಂಗಗಳಲ್ಲಿ ಅಡಗಿದರೂ ಉಗ್ರರನ್ನು ಬಿಡುತ್ತಿಲ್ಲ.
ಸಿದ್ದರಾಮಯ್ಯ-ಯತೀಂದ್ರ ಸಂಭಾಷಣೆ - ತನಿಖೆಗೆ ಹೆಚ್.ಡಿ.ಕೆ. ಆಗ್ರಹ
ಬೆಂಗಳೂರು, ನ. ೧೬: ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಪುತ್ರ ಯತೀಂದ್ರ ಅವರ ನಡುವಿನ ಸಂಭಾಷಣೆ ಕುರಿತು ತನಿಖೆಗೆ ಆದೇಶಿಸಿ, ಪ್ರಾಮಾಣಿಕರು ಎನ್ನುವುದನ್ನು ಸಾಬೀತು ಮಾಡಲಿ ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಆಗ್ರಹಿಸಿದರು. ಅಪ್ಪ-ಮಕ್ಕಳ ಸಂಭಾಷಣೆಯಲ್ಲಿ ಪ್ರಸ್ತಾಪ ಮಾಡಿರುವ ಮುಖ್ಯಮಂತ್ರಿ ವಿಶೇಷ ಕರ್ತವ್ಯಾಧಿಕಾರಿ ಮಹದೇವ್ ಸೇರಿದಂತೆ ಕೆಲವರನ್ನು ಎತ್ತುವಳಿಗಾಗಿಯೇ ನೇಮಿಸಿಕೊಳ್ಳಲಾಗಿದೆ. ತಕ್ಷಣ ಅವರನ್ನೆಲ್ಲ ವಜಾ ಮಾಡಬೇಕು ಎಂದು ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು. ತಮ್ಮ ನಡುವೆ ನಡೆದಿರುವುದು ಶಾಲೆಗಳ ಸಿಎಸ್ಆರ್ ನಿಧಿಯ ಹಂಚಿಕೆಯ ಸಂಭಾಷಣೆ ಅಷ್ಟೆ. ವ್ಯವಹಾರದ ಮಾತು ಎನ್ನುವುದನ್ನು ಸಾಬೀತು ಮಾಡಿದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ' ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಆತ್ಮಸಾಕ್ಷಿ ಇದ್ದರೆ ತಕ್ಷಣ ತನಿಖೆ ಮಾಡಿಸಿ, ಸತ್ಯವನ್ನು ಸಾರ್ವಜನಿಕರ ಮುಂದೆ ತೆರೆದಿಡಬೇಕು ಎಂದು ಸಲಹೆ ನೀಡಿದರು.
ರಾಜಸ್ಥಾನ್ಗೆ ಬಿಜೆಪಿ ಗ್ಯಾರಂಟಿ
ಜೈಪುರ, ನ. ೧೬: ರಾಜಸ್ಥಾನ ವಿಧಾನಸಭೆ ಚುನಾವಣೆಗೆ ಬಿಜೆಪಿ ತನ್ನ ಪ್ರಣಾಳಿಕೆಯನ್ನು ಗುರುವಾರ ಬಿಡುಗಡೆ ಮಾಡಿದೆ. ಉಜ್ವಲಾ ಯೋಜನೆಯಡಿ ೩೪೫೦ಗೆ ಗ್ಯಾಸ್ ಸಿಲಿಂಡರ್, ಐದು ವರ್ಷಗಳಲ್ಲಿ ೨.೫ ಲಕ್ಷ ಸರ್ಕಾರಿ ನೌಕರಿ ಹಾಗೂ ಪ್ರಧಾನಮಂತ್ರಿ ಕಿಸಾನ್ ಯೋಜನೆಯಡಿ ರೈತರಿಗೆ ಧನಸಹಾಯ ಸೇರಿದಂತೆ ಹಲವು ಕೊಡುಗೆಗಳನ್ನು ಘೋಷಿಸಿದೆ. ಇಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಜೆಪಿ ರಾಷ್ಟಿçÃಯ ಅಧ್ಯಕ್ಷ ಜೆ.ಪಿ ನಡ್ಡಾ ಅವರು 'ಸಂಕಲ್ಪ ಪತ್ರ' ಹೆಸರಿನ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿದರು. ಒಂದು ವೇಳೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ ಸೇರಿ ಕಾಂಗ್ರೆಸ್ ಸರ್ಕಾರದ ಹಗರಣಗಳ ಬಗ್ಗೆ ತನಿಖೆ ನಡೆಸಲು ವಿಶೇಷ ತನಿಖಾ ತಂಡ ರಚಿಸಲಾಗುವುದು ಎಂದು ಹೇಳಿದರು. ಕನಿಷ್ಟ ಬೆಂಬಲ ಬೆಲೆಯ ಮೇಲೆ ಬೋನಸ್ ಸೇರಿ ಪ್ರತೀ ಕ್ವಿಂಟಲ್ ಗೋಧಿ ೭೨,೭೦೦ಕ್ಕೆ ಖರೀದಿ ಮಾಡಲಾಗುವುದು ಹಾಗೂ ಪಿಎಂ ಕಿಸಾನ್ ಸಮ್ಮಾನ್ ನಿಧಿಯಡಿ ನೀಡುವ ಸಹಾಯಧನ ವರ್ಷಕ್ಕೆ ೩೧೨,೦೦೦ ಕ್ಕೆ ಏರಿಕೆ ಮಾಡಲಾಗುವುದು, ಪೂರ್ವ ರಾಜಸ್ಥಾನ ಕಾಲುವೆ ಯೋಜನೆಯ ಪೂರ್ಣಗೊಳಿಸುವ ಘೋಷಣೆಗಳು ಪ್ರಣಾಳಿಕೆಯಲ್ಲಿದೆ. ಪ್ರಣಾಳಿಕೆಯಲ್ಲಿ ಮಹಿಳೆಯರಿಗೆ ಹಾಗೂ ಮಕ್ಕಳಿಗೂ ಹಲವು ಭರವಸೆಗಳನ್ನು ಬಿಜೆಪಿ ಘೋಷಿಸಿದೆ. ಪ್ರತೀ ಜಿಲ್ಲೆಯಲ್ಲಿ ಮಹಿಳಾ ಠಾಣೆ ಹಾಗೂ ಮಹಿಳಾ ಡೆಸ್ಕ್ ಸ್ಥಾಪಿಸಲಾಗುವುದು ಎಂದು ಬಿಜೆಪಿ ಹೇಳಿದೆ.
ಪ್ರಧಾನಿ ಭೇಟಿ ವೇಳೆ ಭದ್ರತಾ ಲೋಪ - ಪೊಲೀಸರ ಅಮಾನತ್ತು
ರಾಂಚಿ, ನ. ೧೬: ಪ್ರಧಾನಿ ನರೇಂದ್ರ ಮೋದಿ ಅವರು ರಾಂಚಿಗೆ ಭೇಟಿ ನೀಡಿದ್ದ ವೇಳೆ ಉಂಟಾದ ಭದ್ರತಾ ಲೋಪಕ್ಕೆ ಸಂಬAಧಿಸಿದAತೆ ಮೂವರು ಪೊಲೀಸರನ್ನು ಅಮಾನತು ಮಾಡಲಾಗಿದೆ. ಬುಡಕಟ್ಟು ಜನಾಂಗದ ಸ್ವಾತಂತ್ರö್ಯ ಹೋರಾಟಗಾರ ಬಿರ್ಸಾ ಮುಂಡಾ ಅವರ ಜನ್ಮದಿನದ ಅಂಗವಾಗಿ ಗೌರವ ನಮನ ಸಲ್ಲಿಸಲು ಮೋದಿ ಅವರು ಬಿರ್ಸಾ ಮುಂಡಾ ಮೆಮೊರಿಯಲ್ ಪಾರ್ಕ್ಗೆ ಬುಧವಾರ ಆಗಮಿಸಿದ್ದರು. ಈ ವೇಳೆ ಮಹಿಳೆಯೊಬ್ಬರು ಅನಿರೀಕ್ಷಿತವಾಗಿ ಪ್ರಧಾನಿಯವರ ಬೆಂಗಾವಲು ಪಡೆಯತ್ತ ನುಗ್ಗಿದ್ದರು. ಭದ್ರತೆಗೆ ನಿಯೋಜನೆಗೊಂಡಿದ್ದ ಸಿಬ್ಬಂದಿ ತಕ್ಷಣವೇ ಅವರನ್ನು ಹಿಡಿದು, ವಶಕ್ಕೆ ಪಡೆದರು. ಪ್ರಧಾನಿ ಭೇಟಿ ವೇಳೆ ಕರ್ತವ್ಯದಲ್ಲಿ ನಿರ್ಲಕ್ಷö್ಯ ತೋರಿದ ಕಾರಣಕ್ಕಾಗಿ ಒಬ್ಬರು ಎಎಸ್ಐ ಹಾಗೂ ಇಬ್ಬರು ಕಾನ್ಸ್ಟೆಬಲ್ಗಳನ್ನು ಅಮಾನತು ಮಾಡಲಾಗಿದೆ ಎಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.