ಮಡಿಕೇರಿ, ನ. ೧೭ : ಬಾಡಗರಕೇರಿಯ ಶ್ರೀ ಮೃತ್ಯುಂಜಯ ದೇವಸ್ಥಾನದ ವತಿಯಿಂದ ಕಾರ್ತಿಕ ಮಾಸ ಕಾರ್ತಿಕ ಪೂಜೆ ಪ್ರಯುಕ್ತ ವಿಶೇಷ ಪೂಜಾ ಕಾರ್ಯಕ್ರಮ ನಡೆಯಲಿದೆ. ತಾ. ೨೦ರಂದು ಬೆಳಿಗ್ಗೆ ೭ ಗಂಟೆಗೆ ಏಕಾದಶಿ ರುದ್ರಾಭಿಷೇಕ ಮತ್ತು ರಾತ್ರಿ ೭ ಗಂಟೆಗೆ ವಿಷ್ಣು ದೇವಸ್ಥಾನದಲ್ಲಿ ಅಲಂಕಾರ ಪೂಜೆ ಜರುಗಲಿದೆ. ಇದೇ ಕೈಂಕರ್ಯ ತಾ. ೨೭, ಡಿ. ೪ ಹಾಗೂ ಡಿ. ೧೧ರಂದು ಇದೇ ಸಮಯದಲ್ಲಿ ನಡೆಯಲಿದೆ. ತಾ. ೨೦ ರಿಂದ ಪ್ರಾರಂಭವಾಗುವ ಕಾರ್ತಿಕ ಪೂಜೆಯ ಪ್ರಯುಕ್ತ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ನಡೆಸುವ ಕಾರ್ತಿಕ ಪೂಜೆಯನ್ನು ನಾಲ್ಕು ಸೋಮವಾರ ಹೊರತುಪಡಿಸಿ ನಾಡಿನ ಭಕ್ತಾದಿಗಳು ಹಾಗೂ ಪರಊರಿನ ಭಕ್ತಾದಿಗಳು ವಾರದ ಎಲ್ಲಾ ದಿವಸ ರಾತ್ರಿ ೭ ಗಂಟೆಯಿAದ ೯ ಗಂಟೆಯವರೆಗೆ ಪೂಜೆ ನಡೆಸಲು ಅವಕಾಶವಿದೆ. ಭಕ್ತರು ಇದಕ್ಕೆ ಮೊಬೈಲ್ ಸಂಖ್ಯೆ ೭೭೬೦೧೭೪೫೯೦, ೯೪೪೯೨೫೫೦೧೯, ೮೧೯೭೮೭೦೦೫೮ರ ಮೂಲಕ ಹೆಸರು ನೋಂದಾಯಿಸಿಕೊಳ್ಳಬಹುದೆAದು ಪ್ರಕಟಣೆ ತಿಳಿಸಿದೆ.