ವೀರಾಜಪೇಟೆ, ನ. ೧೬: ಕೊಡವ ಸಮಾಜಗಳ ಒಕ್ಕೂಟದ ವತಿಯಿಂದ ಬಾಳುಗೋಡುವಿನ ಫೀ. ಮಾ. ಕಾರ್ಯಪ್ಪ ಸಾಂಸ್ಕೃತಿಕ ಕೇಂದ್ರ ಹಾಗೂ ಕ್ರೀಡಾಸಮುಚ್ಚಯದಲ್ಲಿ ಆಯೋಜಿಸ ಲಾಗುತ್ತಿರುವ ೯ನೇ ವರ್ಷದ ಕೊಡವ ನಮ್ಮೆ ಕಾರ್ಯಕ್ರಮ ಇಂದು ಹಾಕಿ ಪಂದ್ಯಾವಳಿಯ ಉದ್ಘಾಟನೆ ಯೊಂದಿಗೆ ಶುಭಾರಂಭ ಗೊಂಡಿತು. ಆವರಣದಲ್ಲಿ ಅಗ್ನಿ ಚಾಮುಂಡಿ ದೇವಾಲಯ ಹಾಗೂ ಮೈದಾನದಲ್ಲಿ ಪೂಜೆ ಸಲ್ಲಿಸುವುದರೊಂದಿಗೆ ಕೊಡವ ಸಮಾಜಗಳ ಒಕ್ಕೂಟದ ಅಧ್ಯಕ್ಷ ಕಳ್ಳಿಚಂಡ ವಿಷ್ಣು ಕಾರ್ಯಪ್ಪ ಅವರು ಪಂದ್ಯಾವಳಿಗೆ ಚಾಲನೆ ನೀಡಿದರು.

ಈ ಸಂದರ್ಭ ಮಾತನಾಡಿದ ಅವರು, ಜಿಲ್ಲೆ ಹಾಗೂ ಹೊರ ಭಾಗದಲ್ಲಿರುವ ೩೫ ಕೊಡವ ಸಮಾಜಗಳನ್ನು ಸೇರಿಸಿ ಕೊಡವ ಸಮಾಜಗಳ ಒಕ್ಕೂಟ ರಚಿಸಲಾಗಿದೆ. ಇಲ್ಲಿನ ಕೇಂದ್ರದಲ್ಲಿ ಕಳೆದ ೧೧ ವರ್ಷಗಳಿಂದ ಅಂತರ ಕೊಡವ ಸಮಾಜಗಳ ನಡುವೆ ಹಾಕಿ ಪಂದ್ಯಾವಳಿಯನ್ನು ನಡೆಸಲಾಗುತ್ತಿದೆ. ಇದರೊಂದಿಗೆ ಮೂರು ದಿನಗಳ ಕಾಲ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ, ಜನಪದ ಸಾಂಸ್ಕೃತಿಕ ಸ್ಪರ್ಧೆಯಂತಹ ಕಾರ್ಯಕ್ರಮ ನಡೆಸಿಕೊಂಡು ಬರಲಾಗುತ್ತಿದೆ ಎಂದರು. ರೂ. ೧೦ ಕೋಟಿ ವೆಚ್ಚದಲ್ಲಿ ಮೈದಾನ ವಿಸ್ತರಣೆ, ತಡೆಗೋಡೆ, ಗ್ಯಾಲರಿ ನಿರ್ಮಾಣದ ಉದ್ದೇಶ ಹೊಂದಲಾಗಿದೆ. ಸರಕಾರ ಹಾಗೂ ಇತರ ದಾನಿಗಳ ಸಹಕಾರದೊಂದಿಗೆ ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಕೇಂದ್ರವನ್ನು ಮತ್ತಷ್ಟು ಅಭಿವೃದ್ಧಿ ಪಡಿಸಲಾಗುವುದು ಎಂದರು.

ಕೊಡವ ಸಮಾಜಗಳ ಒಕ್ಕೂಟದ ಉಪಾಧ್ಯಕ್ಷ ಚೆರಿಯಪಂಡ ಕುಶಾಲಪ್ಪ, ಕಾರ್ಯದರ್ಶಿ ವಾಟೇರಿರ ಶಂಕರಿ ಪೂವಯ್ಯ, ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಕಾಳಿಮಾಡ ಮೋಟಯ್ಯ, ಊಟೋಪಚಾರ ಸಮಿತಿ ಅಧ್ಯಕ್ಷ ಕುಂಬೇರ ಮನು ಕುಮಾರ್, ಕ್ರೀಡಾ ಸಮಿತಿ ಅಧ್ಯಕ್ಷ ತಂಬುಕುತ್ತಿರ ಮಧುಮಂದಣ್ಣ, ಕಂಬೀರAಡ ಕಿಟ್ಟು ಕಾಳಪ್ಪ, ಬೊಳಿಯಂಗಡ ದಾದು ಪೂವಯ್ಯ, ತಾಂತ್ರಿಕ ಸಮಿತಿ ನಿರ್ದೇಶಕ ಅಚ್ಚಕಾಳೆರ ಪಳಂಗಪ್ಪ, ಹಾಕಿ ಕೊಡಗು ಅಧ್ಯಕ್ಷ ಪಳಗಂಡ ಲವಕುಮಾರ್, ಕಾರ್ಯದರ್ಶಿ ಅಮ್ಮಂಡಿರ ಚೇತನ್ ಮತ್ತಿತರರು ಉಪಸ್ಥಿತರಿದ್ದರು.

ಅಮ್ಮತ್ತಿ, ಆರಾಯಿರನಾಡ್, ಹುದಿಕೇರಿ, ಮೈಸೂರು ಕೊಡವ ಸಮಾಜಗಳು ಮುಂದಿನ ಸುತ್ತಿಗೆ

ವಿವಿಧ ಕೊಡವ ಸಮಾಜಗಳ ನಡುವೆ ನಡೆಯುತ್ತಿರುವ ಹಾಕಿ ಪಂದ್ಯಾಟದಲ್ಲಿ ಅಮ್ಮತ್ತಿ, ಆರಾಯಿರನಾಡ್, ಹುದಿಕೇರಿ, ಮೈಸೂರು ಕೊಡವ ಸಮಾಜಗಳು ಜಯಗಳಿಸಿ ಮುಂದಿನ ಸುತ್ತಿನ ಅರ್ಹತೆ ಪಡೆದುಕೊಂಡಿದೆ.

ಅಮ್ಮತ್ತಿ ಕೊಡವ ಸಮಾಜ ೬-೨ ಗೋಲುಗಳಿಂದ ಶ್ರೀಮಂಗಲ ಕೊಡವ ಸಮಾಜವನ್ನು ಮಣಿಸಿತು. ಅಮ್ಮತ್ತಿ ಪರ ಐನಂಡ ಆಕಾಶ್ ಪೂವಣ್ಣ(೨.೧೨ನಿ), ಪಾಲೇಕಂಡ ಬೋಪಣ್ಣ(೨೪ನಿ), ನೆಲ್ಲಮಕ್ಕಡ ಪ್ರತಿಕ್(೨೫,೩೦ನಿ), ನೆಲ್ಲಮಕ್ಕಡ ಅಯ್ಯಪ್ಪ(೨೬ನಿ), ನೆಲ್ಲಮಕ್ಕಡ ಸಚಿನ್(೪೩ನಿ), ಶ್ರೀಮಂಗಲ ಕೊಡವ ಸಮಾಜದ ಪರ ನಾಣಯ್ಯ(೨೯ನಿ), ಸಾಗರ್(೩೭ನಿ) ದಲ್ಲಿ ಗೋಲು ಬಾರಿಸಿದರು.

ಆರಾಯಿರನಾಡು ಕೊಡವ ಸಮಾಜ ೬-೨ ಗೋಲುಗಳಿಂದ ಕುಶಾಲನಗರ ಕೊಡವ ಸಮಾಜವನ್ನು ಪರಾಭವಗೊಳಿಸಿತು. ಆರಾಯಿರ ಕೊಡವ ಸಮಾಜದ ಪರ ನಾಪಂಡ ನಾಚಪ್ಪ(೫,೨೬ನಿ), ಪುಳ್ಳಂಗಡ ಉಜ್ವಲ್(೨೩ನಿ), ಮಲ್ಲಾಜಿರ ವಚನ್(೨೪ನಿ), ಕುಪ್ಪಂಡ ಭವಿನ್(೩೦ನಿ), ಚೇಂದAಡ ಮೌರ್ಯ(೩೯ನಿ), ಕುಶಾಲನಗರ ಪರ ಭೀಮಂಡ ಮಿಥುನ್(೮ನಿ), ದಾಸಂಡ ಅಚ್ಚಯ್ಯ(೩೩ನಿ) ದಲ್ಲಿ ಗೋಲು ದಾಖಲಿಸಿದರು.

ಹುದಿಕೇರಿ ಕೊಡವ ಸಮಾಜವು ೩-೦ ಗೋಲುಗಳಿಂದ ಟಿ. ಶೆಟ್ಟಿಗೇರಿ ಕೊಡವ ಸಮಾಜವನ್ನು ಮಣಿಸಿತು. ಹುದಿಕೇರಿ ಕೊಡವ ಸಮಾಜದ ಪರ ಚೆಕ್ಕೆರ ಆದರ್ಶ್(೨೮,೩೩ನಿ), ಕೊಡಿಯಂಡ ಚಿಣ್ಣಪ್ಪ(೩೭ನಿ)ದಲ್ಲಿ ಗೋಲು ದಾಖಲಿಸಿದರು.

ಮೈಸೂರು ಕೊಡವ ಸಮಾಜವು ೨-೧ ಗೋಲುಗಳಿಂದ ಪೊನ್ನಂಪೇಟೆ ಕೊಡವ ಸಮಾಜವನ್ನು ಮಣಿಸುವದರ ಮೂಲಕ ಮುಂದಿನ ಸುತ್ತಿಗೆ ಅರ್ಹತೆ ಪಡೆದುಕೊಂಡಿತು. ಮೈಸೂರು ಕೊಡವ ಸಮಾಜದ ಪರ ಪಟ್ಟಡ ಬೆಳ್ಳಿಯಪ್ಪ(೩೦ನಿ), ಬೊಟ್ಟೋಳಂಡ ಸೂರಜ್ ೪೪(ನಿ), ಪೊನ್ನಂಪೇಟೆ ಕೊಡವ ಸಮಾಜದ ಪರ ಪೆಮ್ಮಂಡ ಸೋಮಣ್ಣ(೪೭ನಿ)ದಲ್ಲಿ ಗೋಲು ದಾಖಲಿಸಿ ಗೋಲಿನ ಅಂತರವನ್ನು ಕಡಿಮೆಗೊಳಿಸಿದರು.

ತೀರ್ಪುಗಾರರಾಗಿ ಚಂದಪAಡ ಆಕಾಶ್, ಕುಪ್ಪಂಡ ದಿಲನ್, ಬಲ್ಲಚಂಡ ನಾಣಯ್ಯ, ಅಂಜಪರವAಡ ಕುಶಾಲಪ್ಪ, ಚೇಂದಿರ ಡ್ಯಾನಿ ತಾಂತ್ರಿಕ ನಿರ್ದೆಶಕ ಕೋಡಿಮಣಿಯಂಡ ಗಣಪತಿ ಕಾರ್ಯ ನಿರ್ವಹಿಸಿದರು.