ವೀರಾಜಪೇಟೆ, ನ. ೧೬: ಬೆಟ್ಟ ಪ್ರದೇಶವಾದ ನೆಹರು ನಗರದಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿದ್ದು ಕುಡಿಯಲು ನೀರಿಲ್ಲದೆ ಆ ಭಾಗದ ಜನರು ಪರಿತಪಿಸು ವಂತಾಗಿದೆ. ನೀರಿನ ಅಭಾವವನ್ನು ನೀಗಿಸಲು ಟ್ಯಾಂಕ್ ನಿರ್ಮಾಣ ಕಾರ್ಯ ಕೈಗೊಂಡು ಎರಡು ವರ್ಷ ಕಳೆದರು ಕಾಮಾಗಾರಿ ಅಪೂರ್ಣಗೊಂಡಿದೆ.
ಕರ್ನಾಟಕ ರಾಜ್ಯದ ಬಹುತೇಕ ಜಿಲ್ಲೆಗಳು ಸೇರಿದಂತೆ ಕೊಡಗು ಜಿಲ್ಲೆಯಲ್ಲಿ ಬರ ಆವರಿಸಿಕೊಂಡಿದೆ. ವೀರಾಜಪೇಟೆ ಪಟ್ಟಣ ಸೇರಿದಂತೆ ಇತರ ಕಡೆಗಳಲ್ಲಿಯು ಕುಡಿಯುವ ನೀರಿನ ಅಭಾವ ಉಂಟಾಗಿದೆ. ಬೆಟ್ಟಪ್ರದೇಶವಾದ ನೆಹರು ನಗರದ ಮೇಲ್ಭಾಗದಲ್ಲಿ ಈ ಹಿಂದೆಯೇ ಒಂದು ಲಕ್ಷ ಸಾಮರ್ಥ್ಯದ ನೀರಿನ ಟ್ಯಾಂಕ್ನ್ನು ನಿರ್ಮಾಣ ಮಾಡಲಾಗಿದೆ. ಬೇತ್ರಿ ನೀರಿನ ಸ್ಥಾವರದಿಂದ ನೀರು ಸರಬರಾಜು ಮಾಡಲಾಗುತ್ತಿದೆ.
ನೀರಿನ ಬೇಡಿಕೆ ಹೆಚ್ಚಾಗಿರುವುದರಿಂದ ಐದು ದಿನಗಳಿಗೊಮ್ಮೆ ನೀರು ಸರಬರಾಜಾಗುತ್ತಿದೆ. ನೀರಿನ ಸಮಸ್ಯೆ ಅರಿತ ವಾರ್ಡ್ ಸದಸ್ಯೆ ಮನೆಯಪಂಡ ದೇಚಮ್ಮ ಕಾಳಪ್ಪ ಅವರು ಖಾಸಿಮ್ ಉಲುಮಾ ಮದರಸಾ ಅವರೊಂದಿಗೆ ವ್ಯವಹರಿಸಿದ ಫಲವಾಗಿ ನೀರಿನ ಟ್ಯಾಂಕ್ ನಿರ್ಮಾಣ ಮಾಡಲು ಮೊಗರಗಲ್ಲಿ ಕೆಳಭಾಗದಲ್ಲಿ ಒಂದು ಸೆಂಟ್ ಜಾಗವನ್ನು ಉದಾರವಾಗಿ ನೀಡಲಾಗಿದೆ.
ಮದರಸಾ ಸಮಿತಿ ನೀಡಿದ ಜಾಗದಲ್ಲಿ ಪುರಸಭೆ ವತಿಯಿಂದ ೧೫ನೇ ಹಣಕಾಸು ಯೋಜನೆಯಲ್ಲಿ ರೂ. ೧೮.೫೦ ಲಕ್ಷದಲ್ಲಿ ಭೂಮಿಯ ಕೆಳಭಾಗದಲ್ಲಿ ೫೦ ಸಾವಿರ ಸಾಮರ್ಥ್ಯದ ಟ್ಯಾಂಕ್ ನಿರ್ಮಾಣ ಮಾಡಿ ಮೇಲ್ಭಾಗದಲ್ಲಿ ಮೋಟಾರ್ ಅಳವಡಿಕೆ ಮಾಡಿ ನೀರು ಸರಬರಾಜು ಮಾಡುವ ಯೋಜನೆ ಯನ್ನು ಕೈಗೆತ್ತಿಕೊಳ್ಳಲಾಗಿತ್ತು. ಆದರೆ ಮಂಗಳೂರಿನ ಗುತ್ತಿಗೆದಾರರೋರ್ವರು ಗುತ್ತಿಗೆ ಪಡೆದುಕೊಂಡು ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಿದ್ದಾರೆ. ಇದರಿಂದ ಕುಡಿಯುವ ನೀರಿನ ಸಮಸ್ಯೆ ಇನ್ನಷ್ಟು ವೀರಾಜಪೇಟೆ, ನ. ೧೬: ಬೆಟ್ಟ ಪ್ರದೇಶವಾದ ನೆಹರು ನಗರದಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿದ್ದು ಕುಡಿಯಲು ನೀರಿಲ್ಲದೆ ಆ ಭಾಗದ ಜನರು ಪರಿತಪಿಸು ವಂತಾಗಿದೆ. ನೀರಿನ ಅಭಾವವನ್ನು ನೀಗಿಸಲು ಟ್ಯಾಂಕ್ ನಿರ್ಮಾಣ ಕಾರ್ಯ ಕೈಗೊಂಡು ಎರಡು ವರ್ಷ ಕಳೆದರು ಕಾಮಾಗಾರಿ ಅಪೂರ್ಣಗೊಂಡಿದೆ.
ಕರ್ನಾಟಕ ರಾಜ್ಯದ ಬಹುತೇಕ ಜಿಲ್ಲೆಗಳು ಸೇರಿದಂತೆ ಕೊಡಗು ಜಿಲ್ಲೆಯಲ್ಲಿ ಬರ ಆವರಿಸಿಕೊಂಡಿದೆ. ವೀರಾಜಪೇಟೆ ಪಟ್ಟಣ ಸೇರಿದಂತೆ ಇತರ ಕಡೆಗಳಲ್ಲಿಯು ಕುಡಿಯುವ ನೀರಿನ ಅಭಾವ ಉಂಟಾಗಿದೆ. ಬೆಟ್ಟಪ್ರದೇಶವಾದ ನೆಹರು ನಗರದ ಮೇಲ್ಭಾಗದಲ್ಲಿ ಈ ಹಿಂದೆಯೇ ಒಂದು ಲಕ್ಷ ಸಾಮರ್ಥ್ಯದ ನೀರಿನ ಟ್ಯಾಂಕ್ನ್ನು ನಿರ್ಮಾಣ ಮಾಡಲಾಗಿದೆ. ಬೇತ್ರಿ ನೀರಿನ ಸ್ಥಾವರದಿಂದ ನೀರು ಸರಬರಾಜು ಮಾಡಲಾಗುತ್ತಿದೆ.
ನೀರಿನ ಬೇಡಿಕೆ ಹೆಚ್ಚಾಗಿರುವುದರಿಂದ ಐದು ದಿನಗಳಿಗೊಮ್ಮೆ ನೀರು ಸರಬರಾಜಾಗುತ್ತಿದೆ. ನೀರಿನ ಸಮಸ್ಯೆ ಅರಿತ ವಾರ್ಡ್ ಸದಸ್ಯೆ ಮನೆಯಪಂಡ ದೇಚಮ್ಮ ಕಾಳಪ್ಪ ಅವರು ಖಾಸಿಮ್ ಉಲುಮಾ ಮದರಸಾ ಅವರೊಂದಿಗೆ ವ್ಯವಹರಿಸಿದ ಫಲವಾಗಿ ನೀರಿನ ಟ್ಯಾಂಕ್ ನಿರ್ಮಾಣ ಮಾಡಲು ಮೊಗರಗಲ್ಲಿ ಕೆಳಭಾಗದಲ್ಲಿ ಒಂದು ಸೆಂಟ್ ಜಾಗವನ್ನು ಉದಾರವಾಗಿ ನೀಡಲಾಗಿದೆ.
ಮದರಸಾ ಸಮಿತಿ ನೀಡಿದ ಜಾಗದಲ್ಲಿ ಪುರಸಭೆ ವತಿಯಿಂದ ೧೫ನೇ ಹಣಕಾಸು ಯೋಜನೆಯಲ್ಲಿ ರೂ. ೧೮.೫೦ ಲಕ್ಷದಲ್ಲಿ ಭೂಮಿಯ ಕೆಳಭಾಗದಲ್ಲಿ ೫೦ ಸಾವಿರ ಸಾಮರ್ಥ್ಯದ ಟ್ಯಾಂಕ್ ನಿರ್ಮಾಣ ಮಾಡಿ ಮೇಲ್ಭಾಗದಲ್ಲಿ ಮೋಟಾರ್ ಅಳವಡಿಕೆ ಮಾಡಿ ನೀರು ಸರಬರಾಜು ಮಾಡುವ ಯೋಜನೆ ಯನ್ನು ಕೈಗೆತ್ತಿಕೊಳ್ಳಲಾಗಿತ್ತು. ಆದರೆ ಮಂಗಳೂರಿನ ಗುತ್ತಿಗೆದಾರರೋರ್ವರು ಗುತ್ತಿಗೆ ಪಡೆದುಕೊಂಡು ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಿದ್ದಾರೆ. ಇದರಿಂದ ಕುಡಿಯುವ ನೀರಿನ ಸಮಸ್ಯೆ ಇನ್ನಷ್ಟು