ಮಡಿಕೇರಿ, ನ. ೧೬: ತಲಕಾವೇರಿ ಕ್ಷೇತ್ರದಲ್ಲಿ ಇಂದು ಕಿರುಸಂಕ್ರಮಣ ಜರುಗಿತು. ತೀರ್ಥೋದ್ಭವದ ಬಳಿಕ ಒಂದು ತಿಂಗಳ ಕಾಲ ತಲಕಾವೇರಿ - ಭಾಗಮಂಡಲದಲ್ಲಿ ವಿಶೇಷ ಜಾತ್ರೆ ನಡೆಯುತ್ತದೆ. ಕಿರುಸಂಕ್ರಮಣ ದೊಂದಿಗೆ ವರ್ಷದ ಈ ಕೈಂಕರ್ಯ ಮುಕ್ತಾಯಗೊಳ್ಳುತ್ತದೆ. ಇದರೊಂದಿಗೆ ಕ್ಷೇತ್ರದಲ್ಲಿ ಕೊಡಗು ಏಕೀಕರಣ ರಂಗದ ವತಿಯಿಂದ ಒಂದು ತಿಂಗಳ ಕಾಲ ನಡೆಸಿಕೊಂಡು ಬರಲಾಗುತ್ತಿದ್ದ ಅನ್ನದಾನ ಕಾರ್ಯ ಏಕೀಕರಣ ರಂಗದ ವತಿಯಿಂದ ಅನ್ನದಾನ ನಡೆದಿದ್ದು, ಪ್ರಸಕ್ತ ವರ್ಷದ ಅನ್ನದಾನ ಕಾರ್ಯ ಸಮಾಪನಗೊಂಡಿತು.