ಮಡಿಕೇರಿ, ನ. ೧೬ : ಕಳೆದ ಮೂರು ದಿನಗಳ ಕಾಲ ನಾಡಿನಾದ್ಯಂತ ಬೆಳಕಿನ ಹಬ್ಬ ದೀಪಾವಳಿಯನ್ನು ಭಕ್ತಿ, ಸಂಭ್ರಮ-ಸಡಗರದಿAದ ಆಚರಿಸಲಾಗಿದೆ. ಮಡಿಕೇರಿಯ ಮಂಗಳಾದೇವಿ ನಗರದಲ್ಲಿ ವಿಭಿನ್ನವಾಗಿ ಸರ್ವಧರ್ಮೀಯರು ಸೇರಿ ಸಾರ್ವಜನಿಕವಾಗಿ ಆಚರಣೆ ಮಾಡಿರುವದು ವಿಶೇಷವಾಗಿತ್ತು.
ಬಲಿಪಾಡ್ಯಮಿಯಂದು ರಾತ್ರಿ ವಾರ್ಡ್ನ ಎಲ್ಲರೂ ಅಲ್ಲಿನ ಶ್ರೀ ಆದಿ ಪರಾಶಕ್ತಿ ದೇವಾಲಯದಲ್ಲಿ ಜಮಾವಣೆಗೊಂಡು ಪೂಜೆ ಸಲ್ಲಿಸಿದ ಬಳಿಕ ದೇವಾಲಯದಲ್ಲಿ ಮೊದಲು ದೀಪ ಬೆಳಗಿಸಿ ಅದೇ ದೀಪವನ್ನು ಪ್ರತಿ ಮನೆಗಳಿಗೆ ಕೊಂಡೊಯ್ದು ಆ ದೀಪದಿಂದಲೇ ಮನೆ ಮನೆಗಳಲ್ಲಿ ದೀಪ ಬೆಳಗಿಸಿದರು. ನಂತರ ದೇವಾಲಯದ ಆವರಣದಲ್ಲಿ ಸೇರಿ ಸಹ ಭೋಜನದಲ್ಲಿ ಪಾಲ್ಗೊಂಡರು. ವಾರ್ಡ್ನ ನಗರಸಭಾ ಸದಸ್ಯೆ ಸಬಿತಾ ಮುಂದಾಳತ್ವದಲ್ಲಿ ಇದು ಎರಡನೇ ವರ್ಷದ ಆಚರಣೆಯಾಗಿದ್ದು, ವಾರ್ಡ್ನ ಎಲ್ಲರೂ ಜಾತಿ, ಮತ, ಧರ್ಮ ಭೇದ ಮರೆತು ಒಂದಾಗಿ ಸಂಭ್ರಮದಲ್ಲಿ ಪಾಲ್ಗೊಂಡಿದ್ದರು.