ಕುಶಾಲನಗರ, ನ. ೧೬: ಅನಧಿಕೃತವಾಗಿ ಆಡು, ಕುರಿ ಮಾಂಸ ಮಾರಾಟ ಮಾಡುತ್ತಿದ್ದ ಮಳಿಗೆಗಳಿಗೆ ಪಂಚಾಯಿತಿ ಅಧಿಕಾರಿಗಳು ಪೊಲೀಸರ ಸಹಕಾರದೊಂದಿಗೆ ತೆರವುಗೊಳಿಸಿ ಬೀಗ ಜಡಿದಿದ್ದಾರೆ.
ಕುಶಾಲನಗರದ ದಂಡಿನಪೇಟೆಯ ನಿವಾಸಿ ಮೀರಾ ಎಂಬಾತ ಕಳೆದ ಎರಡು ತಿಂಗಳಿAದ ಯಾವುದೇ ಅನುಮತಿ ಇಲ್ಲದೆ ಅಕ್ರಮವಾಗಿ ಕೊಪ್ಪ ಗ್ರಾಮ ಪಂಚಾಯಿತಿ ಮಳಿಗೆಯಲ್ಲಿ ಆಡು ಕುರಿ ಮಾಂಸ ಮಾರಾಟ ಮಾಡುತ್ತಿದ್ದ ಬಗ್ಗೆ ಪಂಚಾಯಿತಿ ಅಧಿಕಾರಿಗಳು ನೋಟೀಸ್ ನೀಡಿದರೂ ಸ್ಪಂದಿಸದ ಹಿನ್ನೆಲೆಯಲ್ಲಿ ಪಿರಿಯಾಪಟ್ಟಣ ತಾಲೂಕು ಪಂಚಾಯಿತಿ ಕಾರ್ಯ ನಿರ್ವಾಣಾಧಿಕಾರಿ ಸುನಿಲ್ ಕುಮಾರ್ ನೇತೃತ್ವದಲ್ಲಿ ಪಂಚಾಯಿತಿ ಅಧಿಕಾರಿಗಳು, ಸಿಬ್ಬಂದಿಗಳು ಪೊಲೀಸರ ನೆರವಿನೊಂದಿಗೆ ಅಂಗಡಿ ತೆರವುಗೊಳಿಸಿ ಬೀಗ ಹಾಕಿ ಕ್ರಮ ಕೈಗೊಂಡರು. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸತೀಶ್ ಕುಮಾರ್, ಪಂಚಾಯಿತಿ ಅಧ್ಯಕ್ಷೆ ಶೀಲ, ಸದಸ್ಯರಾದ ನಾರಾಯಣ, ರಾಜಪ್ಪ ಮತ್ತು ಗ್ರಾಮ ಪಂಚಾಯಿತಿ ಸಿಬ್ಬಂದಿಗಳು, ಬೈಲುಕೊಪ್ಪ ಠಾಣಾ ಪೊಲೀಸ್ ಅಧಿಕಾರಿ ಸಿಬ್ಬಂದಿಗಳು ತೆರವು ಕಾರ್ಯಾಚರಣೆ ಸಂದರ್ಭ ಇದ್ದರು.