ಗುಡ್ಡೆಹೊಸೂರು, ನ. ೧೩: ಇತ್ತೀಚೆಗೆ ಪೊನ್ನಂಪೇಟೆಯ ಸಿ.ಐ.ಟಿ ಕಾಲೇಜಿನಲ್ಲಿ ನಡೆದ ಕೃಷಿಯಂತ್ರಮೇಳದಲ್ಲಿ ಒಟ್ಟು ೫ ಮಂದಿ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಗಿತ್ತು. ಪ್ರತಿ ತಾಲೂಕಿನಿಂದ ಒಬ್ಬರಂತೆ ಪ್ರಶಸ್ತಿಗೆ ಆಯ್ಕೆಯಾಗಿದ್ದರು. ಕುಶಾಲನಗರ ತಾ.ಬಸವನಹಳ್ಳಿ ಗ್ರಾಮದ ನಿವಾಸಿ, ಗುಡ್ಡೆಹೊಸೂರಿನ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾದ ಬಿ.ಎಂ.ಸಾಗರ್ ಅವರಿಗೆ ಹೈನುಗಾರಿಕೆ ಮತ್ತು ರೇಷ್ಮೆ ಬೆಳೆಗಳಲ್ಲಿ ಸಾಧನೆಗಾಗಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.