೯೦ರ ದಶಕ. ಮಡಿಕೇರಿಯ ಕಾನ್ವೆಂಟ್ ಜಂಕ್ಷನ್ ಸುತ್ತಮುತ್ತ ಯಾವುದೇ ದೇವಾಲಯಗಳಿರಲಿಲ್ಲ. ಜಿಲ್ಲಾ ಪೊಲೀಸ್ ಕಚೇರಿಗೆ ಮತ್ತು ಕಾಲೇಜಿಗೆ ತೆರಳುವ ಎರಡು ರಸ್ತೆಗಳ ಮೂಲೆಯಲ್ಲಿದ್ದ ಸಣ್ಣ ಗುಡ್ಡದ ಜಾಗ ವನ್ನು ಗುರುತಿಸಿದ ಸುತ್ತಮುತ್ತಲಿನ ಆಸ್ತಿಕ ಬಂಧುಗಳು ಇಲ್ಲೊಂದು ವಿನಾಯಕ ದೇವಾಲಯವನ್ನು ನಿರ್ಮಿಸಬಹುದೆಂದು ಚರ್ಚಿಸಿ ದರು. ಹಲವರ ಇಚ್ಛೆಯಂತೆ ಆ ಪುಟ್ಟ ಜಾಗದ ಸುತ್ತಲೂ ತಂತಿಬೇಲಿಯನ್ನು ನಿರ್ಮಿಸಿ ‘ವಿನಾಯಕ ದೇವಾಲಯಕ್ಕೆ ಇರಿಸಿದ ಜಾಗ’ ಎಂಬ ನಾಮಫಲಕವನ್ನು ಹಾಕಲಾಯಿತು.

ಹಲವಾರು ಕಾರಣಗಳಿಂದ ದೇವಾಲಯ ನಿರ್ಮಾಣ ಕಾರ್ಯ ಮಾತ್ರ ಹಲವು ವರ್ಷಗಳವರೆಗೆ ಕಾರ್ಯರೂಪಕ್ಕೆ ಬರಲಿಲ್ಲ.

ಅದೇ ವೇಳೆಗೆ ಪೊಲೀಸ್ ಸ್ಮಾರಕ ನಿರ್ಮಾಣಕ್ಕೆ ಜಾಗ ಹುಡುಕುತ್ತಿದ್ದ ಪೊಲೀಸರಿಗೆ ಈ ಜಾಗ ಸೂಕ್ತ ಎನಿಸಿತು. ಅದಕ್ಕೆ ಪೂರಕವಾಗಿ ಪೊಲೀಸರಿಂದ ಈ ಜಾಗದಲ್ಲಿ ಸಣ್ಣಪುಟ್ಟ ಕೆಲಸಗಳೂ ಆರಂಭಗೊAಡವು. ದೇವಾಲಯದ ಕನಸು ಹೊತ್ತಿದ್ದ ಭಕ್ತಾದಿಗಳಿಗೆ ಈ ಅನಿರೀಕ್ಷಿತ ಬೆಳವಣಿಗೆ ದಿಗ್ಭçಮೆ ಮೂಡಿಸಿತು. ಪೊಲೀಸ್ ಅಧಿಕಾರಿಗಳೊಂದಿಗೆ ಈ ವಿಭಾಗದ ಹಲವು ಪ್ರಮುಖ ನಾಗರಿಕರು ಚರ್ಚೆ ನಡೆಸಿದರಾದರೂ ಸಂಧಾನ ಕಾಣದೆ ವಿಫಲವಾದವು. ವಿಷಯ ಊರೆಲ್ಲ ಹಬ್ಬಿತು, ದೇವಾಲಯ ಇದೇ ಜಾಗದಲ್ಲಿ ನಿರ್ಮಿಸದೆ ಬಿಡುವುದಿಲ್ಲ ಎಂಬ ಬೆರಳೆಣಿಕೆಯ ಜನಕ್ಕೆ ಊರೇ ಬೆಂಬಲ ನೀಡಿತು. ಅದೇ ಸಮಯದಲ್ಲಿ ದಸರಾ ಕೂಡ ಬಂದಿದ್ದರಿAದ ಹಲವರು ಈ ಜಾಗದಲ್ಲಿ ದೇವಾಲಯಕ್ಕೆ ಅವಕಾಶ ನೀಡದಿದ್ದಲ್ಲಿ ದಸರಾ ಹಬ್ಬಕ್ಕೂ ತೊಂದರೆಯಾದೀತು ಎಂಬ ಸುಳಿವನ್ನು ಪೊಲೀಸರಿಗೆ ನೀಡಿದರು. ವಿಜಯದಶಮಿಯಂದು ಈ ಜಾಗದಲ್ಲಿ ಭೂಮಿ ಪೂಜೆಯಾದರೂ ನೆರವೇ ರಿಸಬೇಕು ಎಂಬ ಭಕ್ತಪಡೆಯ ಸಂಕಲ್ಪಕ್ಕೆ ಹಿಂದೂ ಸಂಘಟನೆಗಳು, ಅಂದಿನ ಪ್ರತಿನಿಧಿಗಳು ಸಂಪೂರ್ಣ ಸಹಕಾರ ನೀಡಿ ಜೊತೆಯಲ್ಲಿರುವ ಭರವಸೆ ವ್ಯಕ್ತಪಡಿಸಿದರು. ಭೂಮಿ ಪೂಜೆ ಮಾಡಿದ ಮಾತ್ರಕ್ಕೆ ಸಂಘರ್ಷ ಅಂತ್ಯವಾಗಬಹುದು ಎಂದು ನಂಬದ ಭಕ್ತರು ಗುಟ್ಟಾಗಿ ಮೈಸೂರಿಗೆ ತೆರಳಿ ಅಲ್ಲಿ ಲಭ್ಯವಿದ್ದ ಸುಂದರ ಗಣೇಶ ಮೂರ್ತಿಯನ್ನು ಖರೀದಿಸಿ ಪ್ರಮುಖರ ಮನೆಯಲ್ಲಿ ತಂದಿಟ್ಟರು.

ಅದು ೧೧-೧೦-೧೯೯೭ನೇ ಶನಿವಾರದಂದು ವಿಜಯದಶಮಿಯ ದಿನ. ದೈವ ಸಂಕಲ್ಪ ಎಂಬAತೆ ಬ್ರಾಹ್ಮೀ ಮುಹೂರ್ತದಲ್ಲಿ ದೇವಾಲಯಕ್ಕೆ ಮೀಸಲಿಟ್ಟ ಈ ಮಣ್ಣು ಗುಡ್ಡದ ಮೇಲೆ ಗಣಪತಿ ಮೂರ್ತಿಯನ್ನು ಇಟ್ಟು, ಪೂಜಾ ಕಾರ್ಯಗಳನ್ನು ಆರಂಭಿಸಲಾಯಿತು. ಜಾತ್ಯತೀತವಾಗಿ, ಪಕ್ಷಾತೀತವಾಗಿ ಜನ ಈ ಜಾಗಕ್ಕೆ ದೌಡಾಯಿಸಲಾರಂಭಿಸಿದರು. ಭಕ್ತಿಭಾವಗಳ ಮಿಲನ ಈ ಪ್ರದೇಶದಲ್ಲಿ ಪಸರಿಸಲಾರಂಭಿಸಿತು. ದೇವಾಲಯ ನಿರ್ಮಾಣ ಮಾಡಲು ಅಲ್ಲಿಯೇ ದೇಣಿಗೆ ಸಂಗ್ರಹಾತಿಯೂ ಆರಂಭಗೊAಡಿತು. ಬೆಳವಣಿಗೆಯ ಸೂಕ್ಷö್ಮತೆಯನ್ನು ಅರಿತ ಪೊಲೀಸ್ ಅಧಿಕಾರಿಗಳು ಕೂಡ ಸ್ಥಳಕ್ಕೆ ಬಂದು ಪೂಜೆಯಲ್ಲಿ ಪಾಲ್ಗೊಂಡರು. ದೇವಾಲಯ ನಿರ್ಮಾಣದ ಸಂಕಲ್ಪಕ್ಕೆ ಜನತೆಯ ಧ್ವನಿಗೆ ಪೊಲೀಸರ ಭರವಸೆಯ ಮಾತುಗಳು ಬಲವನ್ನು ತುಂಬಿದವು. ಸಂಜೆಯಾಗುತ್ತಲೇ ಗಣಪನ ಮೂರ್ತಿಯನ್ನು ಹೇಗೆ ರಕ್ಷಿಸಬೇಕೆಂಬ ಆತಂಕ. ಕಬ್ಬಿಣದ ಕವಚವೊಂದು ತಯಾರಾಗಿ ಬಂದಿತು. ಅದರೊಳಗೆ ಗಣಪ ಬಂದಿಯಾದರೆ ಕಾವಲಿಗೆ ಯುವಕರು ಸಜ್ಜಾದರು.

ಮಾರನೇ ದಿನ ಆರಂಭಗೊAಡದ್ದು ದೇವಾಲಯ ನಿರ್ಮಾಣದ ಯೋಜನೆ. ಹಿಂದೂ ಭಕ್ತ ಪಡೆಯೊಂದಿಗಿದ್ದ ಕ್ರಿಶ್ಚಿಯನ್ ಯುವ ಇಂಜಿನಿಯರ್ ಒಬ್ಬ ನಕ್ಷೆಯ ಮತ್ತು ನಿರ್ಮಾಣದ ಜವಾಬ್ದಾರಿ ವಹಿಸಿಕೊಂಡರು. ಕುಶಾಲನಗರದ ಹಿರಿಯ ಮುಸ್ಲಿಂ ಬಂಧು ಇಬ್ಬರು ದೇವಾಲಯಕ್ಕೆ ಅಗತ್ಯವಿರುವ ಎಲ್ಲಾ ಮರದ ಅವಶ್ಯಕತೆಗಳನ್ನು ಪೂರೈಸುವುದಾಗಿ ಮಾತು ಕೊಟ್ಟರು. ಹಿಂದೂ ಬಂಧುಗಳು ಆರ್ಥಿಕ ನೆರವು ನೀಡಲು ಮುಂದಾದರು. ಆರಂಭದಿAದಲೇ ಈ ಒಂದು ದೇವಾಲಯ ಎಲ್ಲಾ ಜಾತಿಯವರು, ಎಲ್ಲಾ ಧರ್ಮದವರು, ಎಲ್ಲಾ ಮತದವರು ಗೌರವಿಸುವ ದೇವಾಲಯ ಆಗಿ ನೆಲೆ ನಿಲ್ಲುವ ಆಶಾಭಾವನೆ ದೇವಾಲಯ ನಿರ್ಮಾಣ ಜವಾಬ್ದಾರಿ ಹೊತ್ತವರಿಗೆ ಕಂಡು ಬಂದಿತು. ಶಾಸ್ತೊçÃಕ್ತವಾಗಿ ಆರಂಭಿಕ ಕೆಲಸಗಳು ಆಗಬೇಕಿದ್ದರಿಂದ ಪುತ್ತೂರಿನ ಜ್ಯೋತಿಷಿ ಗೋಪಾಲಕೃಷ್ಣ ಅವರನ್ನು ಕರೆಸಿ ಸಲಹೆ ಪಡೆಯಲಾಯಿತು. ಶೃಂಗೇರಿ ಬಳಿಯ ಕೊಪ್ಪದ ಪ್ರಸಿದ್ಧ ಜ್ಯೋತಿಷಿ ಬಾಲಗೋಪಾಲ ಜೋಯಿಸ ಅವರ ಸಂಪರ್ಕ, ಅವರ ಆಗಮನ, ವಾಸ್ತು ಮತ್ತು ಧಾರ್ಮಿಕ ಶಾಸ್ತçಗಳಿಗೆ ಅನುಗುಣವಾಗಿ ಈ ದೇವಾಲಯವನ್ನು ನಿರ್ಮಿಸಲು ಸಹಕಾರಿಯಾಯಿತು.

ನೋಡು-ನೋಡುತ್ತಲೇ ವಿಶೇಷ ವಿನ್ಯಾಸದ ದೇವಾಲಯ ಮೇಲೇಳಲು ಆರಂಭಗೊAಡಿತು. ವೃತ್ತಿ, ಸಂಪಾದನೆ, ಊಟ, ನಿದ್ರೆ ಎಲ್ಲವನ್ನು ಬದಿಗೊತ್ತಿ ಗಣಪನ ದೇವಾಲಯದ ಜವಾಬ್ದಾರಿ ಹೊತ್ತಿದ್ದ ಪಡೆ ಹಗಲಿರುಳು ದೇವಾಲಯದ ಉದ್ಘಾಟನೆಯ ಕನಸನ್ನು ಕಾಣಲಾರಂಭಿಸಿತು. ಸಿಮೆಂಟ್, ಕಲ್ಲು, ಮರಳು ಇದಾವುದರ ಮಧ್ಯೆ ಇರದ ಗಣಪ ಮಾತ್ರ ಪಕ್ಕದ ಮನೆಯಲ್ಲಿ ದೈವತಾ ಆರೈಕೆ ಮಾಡಿಸಿಕೊಂಡು ಖುಷಿಯಲ್ಲಿ ಕಾಲ ಕಳೆಯುತ್ತಿದ್ದ. ದೇವಾಲಯದ ಕಟ್ಟಡ ಕಾಮಗಾರಿ ಮುಗಿದು ಪ್ರತಿಷ್ಠಾಪನಾ ದಿನ ನಿಗದಿಯಾಯಿತು. ೧೯೯೮ನೇ ಇಸವಿ ನವೆಂಬರ್ ೨೧, ೨೨ ಮತ್ತು ೨೩ನೇ ಬುಧವಾರ, ಗುರುವಾರ, ಶುಕ್ರವಾರ ಪ್ರಶಸ್ತ ದಿನಗಳೆಂದು ತೀರ್ಮಾನಿಸಿ ಉಡುಪಿಯ ಪರಮ ಪೂಜ್ಯ ಪೇಜಾವರ ಶ್ರೀಗಳನ್ನು ಆಹ್ವಾನಿಸಲಾಯಿತು. ವೇದಬ್ರಹ್ಮ ಶ್ರೀ ಬಾಲಗೋಪಾಲ ಜೋಯಿಸರ ಮಾರ್ಗದರ್ಶನದಲ್ಲಿ ಶ್ರೀರಂಗಪಟ್ಟಣದ ವೇದಬ್ರಹ್ಮ ವಿ. ಭಾನುಪ್ರಕಾಶ್ ಶರ್ಮ ಇವರ ನೇತೃತ್ವದ ವೈದಿಕ ಕ್ರಿಯೆಗಳಲ್ಲಿ ಪೂಜ್ಯ ವಿಶ್ವೇಶತೀರ್ಥ ಸ್ವಾಮೀಜಿಯವರು ಪೂರ್ಣ ಕುಂಭಾಭಿಷೇಕದ ಮೂಲಕ ದೇವಾಲಯವನ್ನು ಸಮಾಜಕ್ಕೆ ಅರ್ಪಿಸಿದರು. ಗಣಪನೊಂದಿಗೆ ದೇವಾಲಯದೊಳಗೆ ನವಗ್ರಹವನ್ನೂ ಸ್ಥಾಪಿಸಲಾಯಿತು. ಹೋರಾಟದ ಮೂಲಕ ನಿರ್ಮಾಣಗೊಂಡ ದೇವಾಲಯಕ್ಕೆ ‘ ಶ್ರೀ ವಿಜಯ ವಿನಾಯಕ ದೇವಾಲಯ’ ಎಂದು ನಾಮಕರಣ ಮಾಡಲಾಯಿತು. ಸರ್ವಧರ್ಮದವರು ನೆರವು ನೀಡಿದ ಹಾಗೂ ಗೌರವದಿಂದ ಕಂಡ ದೇವಾಲಯದಲ್ಲಿ ‘ಮಾನವ ಧರ್ಮದ ಮಂದಿರ’ ಎಂಬ ನಾಮಫಲಕ ಕೂಡ ರಾರಾಜಿಸಿತು. ದೇವಾಲಯದ ಪ್ರತಿಷ್ಠಾಪನಾ ಸಂದರ್ಭ ಅಪರೂಪ ವೆಂಬAತೆ ಸರ್ವಧರ್ಮ ಸಮ್ಮೇಳನವನ್ನು ನಡೆಸಿ ಸರ್ವರಿಗೂ ಊಟೋಪಚಾರ ನೀಡುವ ಮೂಲಕ ವಿಜಯ ವಿನಾಯಕ ದೇವಾಲಯದ ಬಾಗಿಲು ಭಕ್ತಾದಿಗಳಿಗೆ ತೆರೆದುಕೊಂಡಿತು.

ಮುಂದೆ ಪ್ರತಿ ವರ್ಷ ವಾರ್ಷಿಕೋತ್ಸವ, ಅನ್ನದಾನ, ಸಾಂಸ್ಕೃತಿಕ ಕಾರ್ಯಕ್ರಮಗಳು, ಸಭಾ ಕಾರ್ಯಕ್ರಮಗಳು ಸುಸೂತ್ರವಾಗಿ ಜಾರಿಗೊಂಡವು. ನಾಡಿನ ಸುಪ್ರಸಿದ್ಧ ಕಲಾವಿದರು ಇಲ್ಲಿ ಕಾರ್ಯಕ್ರಮ ನೀಡುವುದರ ಮೂಲಕ ಕೊಡಗಿಗೆ ಪರಿಚಯವಾದರು. ದೇವಾಲಯದಲ್ಲಿ ವಿಶೇಷ ಪೂಜೆಗಳು ಆರಂಭಗೊAಡವು. ಸಾಮೂಹಿಕ ಸತ್ಯನಾರಾಯಣ ಪೂಜೆ, ಪ್ರತಿ ತಿಂಗಳು ಸಂಕಷ್ಟಿ, ದೇವರಿಗೆ ಬೆಣ್ಣೆ ಅಲಂಕಾರ ಸೇವೆ ಇವುಗಳು ಭಕ್ತಾದಿಗಳಿಗೆ ದೈವತಾಭಾವವನ್ನು ಇಮ್ಮಡಿಗೊಳಿಸಿದವು. ವಿಜಯ ವಿನಾಯಕ ದೇವಾಲಯ ಜಿಲ್ಲೆಯಲ್ಲಿ ಒಂದು ಶ್ರದ್ಧಾ ಕೇಂದ್ರವಾಗಿ, ಭಕ್ತಿ ಕೇಂದ್ರವಾಗಿ, ಭಕ್ತರ ಇಚ್ಛೆಯನ್ನು ಪೂರೈಸುವ ನಂಬಿಕೆಯ ಕೇಂದ್ರವಾಗಿ, ಪ್ರಮುಖ ಧಾರ್ಮಿಕ ಕ್ಷೇತ್ರವಾಗಿ ರೂಪುಗೊಂಡಿತು. ವಿನಾಯಕನ ಸೇವೆಯನ್ನು ಉಸಿರಾಗಿಸಿಕೊಂಡಿರುವ ಪ್ರಧಾನ ಅರ್ಚಕ ಕೃಷ್ಣ ಉಪಾಧ್ಯ ಅವರು, ಭಕ್ತರು ಮತ್ತು ದೇವರ ನಡುವಿನ ಕೊಂಡಿಯಾಗಿ ದಶಕಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಅಂದು ನಿರ್ಮಾಣ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಹಲವು ಸನ್ಮಿ ತ್ರರು ಇಹಲೋಕ ತ್ಯಜಿಸಿದ್ದರೆ, ಆಡಳಿತದಲ್ಲಿ ಮುಂದುವರಿದಿರುವ ಸ್ವಾರ್ಥ ರಹಿತ ಹಲವು ಸಹೃದಯರು ಇದೀಗ ಮತ್ತೆ ಕೆಲವು ಮಂದಿಯ ಸೇರ್ಪಡೆಯೊಂದಿಗೆ ದೇವಾಲಯವನ್ನು ಮುನ್ನಡೆಸುತ್ತಿದ್ದಾರೆ. ದಾನಿಗಳು ಶ್ರೀ ವಿಜಯ ವಿನಾಯಕನ ಮೇಲೆ ಇಟ್ಟಿರುವ ನಂಬಿಕೆಯಿAದ ನಿರಂತರ ಆರ್ಥಿಕ ನೆರವು, ಗಂಟೆಗಳು, ಬೆಳ್ಳಿಯ ಸಾಮಾಗ್ರಿಗಳು, ಚಿನ್ನದ ಉಡುಗೊರೆ ಹೀಗೆ ಶಕ್ತಾö್ಯನುಸಾರ ದೇವರ ಸೇವೆ ಮಾಡುತ್ತಾ ಬರುತ್ತಿದ್ದಾರೆ. ಪ್ರತಿ ವಾರ್ಷಿಕೋತ್ಸವದ ಸಂದರ್ಭ ಅನ್ನದಾನಕ್ಕೆ ಅಗತ್ಯವಿರುವ ಅಕ್ಕಿ, ಬೇಳೆ, ಪದಾರ್ಥಗಳು ಹಾಗೂ ತರಕಾರಿಗಳು ದೇವಾಲಯಕ್ಕೆ ಬಂದು ಸೇರುತ್ತಿವೆ. ಶ್ರೀ ವಿಜಯ ವಿನಾಯಕ ದೇವಾಲಯದ ಅನ್ನದಾನದ ವಿಶೇಷ ರುಚಿಗಾಗಿ ವರ್ಷವಿಡೀ ಕಾಯುವ ಸಹಸ್ರಾರು ಮಂದಿ ಆ ದಿನ ದೇವರ ಸೇವೆಯಲ್ಲಿಯೂ ಪಾಲ್ಗೊಳ್ಳುತ್ತಾರೆ.

೧೬ರಂದು ಬೆಳ್ಳಿ ಹಬ್ಬದ ಸಂಭ್ರಮ

ಇದೀಗ ಶ್ರೀ ವಿಜಯ ವಿನಾಯಕನಿಗೆ ಬೆಳ್ಳಿ ಹಬ್ಬದ ಸಂಭ್ರಮ. ಸುಮಾರು ೨೦ ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಮುಖವಾಡವನ್ನು ದೇವರಿಗೆ ಅರ್ಪಿಸ ಬೇಕೆನ್ನುವುದು ಭಕ್ತಾದಿಗಳ ಸಂಕಲ್ಪ. ತಾ. ೧೫ನೇ ಬುಧವಾರ ಸಂಜೆ ಆರಂಭ ಗೊಳ್ಳಲಿರುವ ಪೂಜಾ ಕೈಂಕರ್ಯಗಳು ತಾ. ೧೬ರ ಮಧ್ಯಾಹ್ನ ೧೨ ಗಂಟೆಯ ಮಹಾ ಮಂಗಳಾರತಿಯೊAದಿಗೆ ಪೂರ್ಣಗೊಳ್ಳಲಿದ್ದು ನಂತರ ಸಾರ್ವಜನಿ ಕರಿಗೆ ಅನ್ನದಾನ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ತಾ. ೧೫ರ ಸಂಜೆ ಸುತ್ತಮುತ್ತಲಿನ ಭಕ್ತಾಧಿಗಳಿಗೆ ಮಾರನೇ ದಿನದ ಅಡುಗೆಗೆ ತರಕಾರಿ ಹಚ್ಚುವ ಸಂಭ್ರಮ. ನಮ್ಮದೇ ದೇವಾಲಯ ಎನ್ನುವ ನಂಬಿಕೆ ಮತ್ತು ತೃಪ್ತಿಯೊಂದಿಗೆ ಸಹಸ್ರಾರು ಮಂದಿ ಈ ದೇವಾಲಯದೊಂದಿಗೆ ಬೆಸೆದು ಕೊಂಡಿದ್ದಾರೆ. ತಾವೆಲ್ಲ ತಾ. ೧೬ನೇ ಗುರುವಾರ ಬನ್ನಿ.

ಶ್ರೀ ವಿಜಯ ವಿನಾಯಕ ನಾಡಿನ ಎಲ್ಲರನ್ನು ಹರಸಲಿ.

-ಜಿ. ಚಿದ್ವಿಲಾಸ್, ೯೪೪೮೦೪೮೮೨೯