೯ ಮೈತೇಯಿ ಉಗ್ರ ಸಂಘಟನೆ - ಅವುಗಳ ಸಹ ಸಂಘಟನೆ ನಿಷೇಧಿಸಿದ ಕೇಂದ್ರ
ನವದೆಹಲಿ, ನ. ೧೩: ಜನಾಂಗೀಯ ಹಿಂಸಾಚಾರದಿAದ ತತ್ತರಿಸಿರುವ ಮಣಿಪುರದಲ್ಲಿ ರಾಷ್ಟ್ರವಿರೋಧಿ ಕೃತ್ಯಗಳಲ್ಲಿ ತೊಡಗಿರುವ ಮತ್ತು ಭದ್ರತಾ ಪಡೆಗಳ ಮೇಲೆ ಮಾರಣಾಂತಿಕ ದಾಳಿ ನಡೆಸುತ್ತಿರುವ ಒಂಬತ್ತು ಮೈತೇಯಿ ಉಗ್ರಗಾಮಿ ಸಂಘಟನೆಗಳನ್ನು ಮತ್ತು ಅವುಗಳ ಸಹ ಸಂಘಟನೆಗಳನ್ನು ಕೇಂದ್ರ ಸರ್ಕಾರ ಸೋಮವಾರ ನಿಷೇಧಿಸಿದೆ. ಈ ಸಂಬAಧ ಕೇಂದ್ರ ಗೃಹ ಸಚಿವಾಲಯ ಹೊರಡಿಸಿದ ಅಧಿಸೂಚನೆಯ ಪ್ರಕಾರ, ಪೀಪಲ್ಸ್ ಲಿಬರೇಶನ್ ಆರ್ಮಿ ಸಾಮಾನ್ಯವಾಗಿ Pಐಂ ಎಂದು ಕರೆಯಲಾಗುತ್ತದೆ ಮತ್ತು ಅದರ ರಾಜಕೀಯ ವಿಭಾಗವಾದ ಕ್ರಾಂತಿಕಾರಿ ಪೀಪಲ್ಸ್ ಫ್ರಂಟ್ (ಖPಈ), ಯುನೈಟೆಡ್ ನ್ಯಾಷನಲ್ ಲಿಬರೇಶನ್ ಫ್ರಂಟ್ (Uಓಐಈ) ಮತ್ತು ಅದರ ಸಶಸ್ತç ವಿಭಾಗ ಮಣಿಪುರ ಪೀಪಲ್ಸ್ ಆರ್ಮಿ (ಒPಂ)ಯನ್ನು ಐದು ವರ್ಷಗಳ ಕಾಲ ನಿಷೇಧಿಸಲಾಗಿದೆ. ಪೀಪಲ್ಸ್ ರೆವಲ್ಯೂಷನರಿ ಪಾರ್ಟಿ ಆಫ್ ಕಂಗ್ಲೀಪಾಕ್ (PಖಇPಂಏ) ಮತ್ತು ಅದರ ಸಶಸ್ತ್ರ ವಿಭಾಗ ರೆಡ್ ಆರ್ಮಿ, ಕಂಗ್ಲೇಪಕ್ ಕಮ್ಯುನಿಸ್ಟ್ ಪಾರ್ಟಿ (ಏಅP) ಮತ್ತು ಅದರ ಸಶಸ್ತ್ರ ವಿಭಾಗ (ಕೆಂಪು ಸೈನ್ಯ ಎಂದೂ ಕರೆಯುತ್ತಾರೆ), ಕಂಗ್ಲೇ ಯೋಲ್ ಕನ್ಬಾ ಲುಪ್ (ಏಙಏಐ), ಸಮನ್ವಯ ಸಮಿತಿ (ಅoಡಿಅom) ಮತ್ತು ಅಲಯನ್ಸ್ ಫಾರ್ ಸೋಷಿಯಲಿಸ್ಟ್ ಯೂನಿಟಿ ಕಂಗ್ಲೀಪಾಕ್ (ಂSUಏ) ಅನ್ನು ಸಹ ನಿಷೇಧಿಸಲಾಗಿದೆ. ಕೇಂದ್ರ ಗೃಹ ಸಚಿವಾಲಯ, Pಐಂ, Uಓಐಈ, PಖಇPಂಏ, ಏಅP, ಮತ್ತು ಏಙಏಐ ಅನ್ನು ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯಿದೆ, ೧೯೬೭ (೧೯೬೭ ರ ೩೭) ಅಡಿಯಲ್ಲಿ ಐದು ವರ್ಷಗಳ ಕಾಲ ನಿಷೇಧಿಸಿದೆ. ಸಶಸ್ತç ಹೋರಾಟದ ಮೂಲಕ ಮಣಿಪುರವನ್ನು ಭಾರತದಿಂದ ಬೇರ್ಪಡಿಸುವ ಮೂಲಕ ಸ್ವತಂತ್ರ ರಾಷ್ಟçವನ್ನು ಸ್ಥಾಪಿಸುವುದು ಮತ್ತು ಅಂತಹ ಪ್ರತ್ಯೇಕತೆಗೆ ಮಣಿಪುರದ ಮೂಲನಿವಾಸಿಗಳನ್ನು ಪ್ರಚೋದಿಸುವುದು ಮೈತೇಯಿ ಉಗ್ರಗಾಮಿ ಸಂಘಟನೆಗಳ ಗುರಿಯಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯ ತನ್ನ ಅಧಿಸೂಚನೆಯಲ್ಲಿ ತಿಳಿಸಿದೆ.
ಬೆಂಕಿ ಅವಘಡ : ಐವರು ಸಾವು
ದಿಮಾಪುರ, ನ. ೧೩: ನಾಗಾಲ್ಯಾಂಡ್ನ ದಿಮಾಪುರ್ ಜಿಲ್ಲೆಯ ನಹರ್ಬರಿ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡು ಮೂವರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ಐವರು ಸಜೀವ ದಹನಗೊಂಡಿದ್ದಾರೆ. ಭಾನುವಾರ ರಾತ್ರಿ ೧೦.೪೫ ರ ಸುಮಾರಿಗೆ ಈ ಘಟನೆ ಸಂಭವಿಸಿದ್ದು, ನಾಗ ಸಮುದಾಯವಲ್ಲದ ಜನರು ವಾಸಿಸುವ ಹುಲ್ಲಿನ ಮನೆಗಳ ಸಾಲುಗಳಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಅವರು ಹೇಳಿದರು. ದೀಪಾವಳಿ ಆಚರಣೆ ವೇಳೆ ಪಟಾಕಿ ಸಿಡಿಸಿದ್ದರಿಂದ ಬೆಂಕಿ ಹೊತ್ತಿಕೊಂಡಿರುವ ಸಾಧ್ಯತೆ ಇದೆ. ಬೆಂಕಿಯಿAದಾಗಿ ಸುಮಾರು ೫೦ ಕುಟುಂಬಗಳು ತೊಂದರೆಗೀಡಾಗಿವೆ. ಆರು ಅಗ್ನಿಶಾಮಕ ವಾಹನಗಳು ಸುಮಾರು ಎರಡು ಗಂಟೆಗಳ ಕಾರ್ಯಾಚರಣೆಯ ನಂತರ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿವೆ. ಆದರೆ, ಅಗ್ನಿ ಅವಘಡಕ್ಕೆ ನಿಖರ ಕಾರಣ ತನಿಖೆಯ ನಂತರವೇ ತಿಳಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೃತರ ಶವಗಳನ್ನು ಪೊಲೀಸರಿಗೆ ಹಸ್ತಾಂತರಿಸಲಾಗಿದೆ.
ರಾಸಾಯನಿಕ ಗೋದಾಮಿನಲ್ಲಿ ಅಗ್ನಿ ಅವಘಡ : ೯ ಮಂದಿ ಸಜೀವ ದಹನ
ಹೈದರಾಬಾದ್ (ತೆಲಂಗಾಣ), ನ. ೧೩: ಹೈದಾರಾಬಾದ್ನಲ್ಲಿ ದೀಪಾವಳಿ ಹಬ್ಬದಂದೇ ಭಾರೀ ಅಗ್ನಿ ಅವಘಡ ಸಂಭವಿಸಿದ್ದು, ದುರಂತದಲ್ಲಿ ೯ ಮಂದಿ ಸಜೀವ ದಹನಗೊಂಡಿದ್ದಾರೆ. ನಾಂಪಲ್ಲಿ ಬಜಾರ್ ಘಾಟ್ನಲ್ಲಿ ನಾಲ್ಕು ಅಂತಸ್ತಿನ ರಾಸಾಯನಿಕ ಗೋದಾಮಿನಲ್ಲಿ ಭಾರೀ ಬೆಂಕಿ ಕಾಣಿಸಿಕೊಂಡಿದೆ. ಸ್ಥಳದಲ್ಲಿ ೧೬ ಮಂದಿಯನ್ನು ರಕ್ಷಣೆ ಮಾಡಲಾಗಿದ್ದು, ಮೂವರಿಗೆ ಗಂಭೀರವಾಗಿ ಗಾಯಗೊಂಡಿದ್ದಾರೆ. 'ಕಟ್ಟಡದ ನೆಲಮಹಡಿಯಲ್ಲಿ ಕಾರ್ ರಿಪೇರಿ ಮಾಡಲಾಗುತ್ತಿತ್ತು. ಈ ವೇಳೆ ಅಲ್ಲೇ ಇದ್ದ ರಾಸಾಯನಿಕ ತುಂಬಿದ್ದ ಡ್ರಮ್ಗಳಿಗೆ ಬೆಂಕಿ ತಗುಲಿ ಬೆಳಿಗ್ಗೆ ೯.೩೦ರ ಸುಮಾರಿಗೆ ಅವಘಡ ಸಂಭವಿಸಿದೆ. ಕೆಲ ಹೊತ್ತಿನಲ್ಲೇ ಉಳಿದ ಮಹಡಿಗಳಿಗೂ ಬೆಂಕಿ ವ್ಯಾಪಿಸಿದೆ. ಅಗ್ನಿ ಅವಘಡದಲ್ಲಿ ಗೋದಾಮಿನಲ್ಲಿದ್ದ ಕಾರು ಹಾಗೂ ಎರಡು ಸೈಕಲ್ ಸುಟ್ಟು ಕರಕಲಾಗಿವೆ.
ಮಂಗಳೂರಿನಲ್ಲಿ ಡ್ರಗ್ಸ್ ಪೆಡ್ಲರ್ ಬಂಧನ
ಮAಗಳೂರು, ನ. ೧೩: ನಗರದಲ್ಲಿ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳಿಗೆ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ೩೨ ವರ್ಷದ ಡ್ರಗ್ಸ್ ಪೆಡ್ಲರ್ನನ್ನು ಕೇಂದ್ರ ಅಪರಾಧ ವಿಭಾಗದ ಪೊಲೀಸರು ಬಂಧಿಸಿದ್ದಾರೆ. ಬಂಧಿತ ವ್ಯಕ್ತಿಯನ್ನು ಹರೇಕಳ ಮೂಲದ ಬಜಾಲ್ ನಿವಾಸಿ ಹಸೈನಾರ್ ಅಲಿಯಾಸ್ ಅಚ್ಚು ಎಂದು ಗುರುತಿಸಲಾಗಿದೆ. ಪಡೀಲ್ನಲ್ಲಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಅಚ್ಚುನನ್ನು ಖಚಿತ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದಾರೆ. ಆತನಿಂದ ೬೦,೦೦೦ ರೂಪಾಯಿ ಮೌಲ್ಯದ ೧೨ ಗ್ರಾಂ ತೂಕದ ಎಂಡಿಎAಎ, ಒಂದು ಮೊಬೈಲ್ ಫೋನ್ ಮತ್ತು ತೂಕ ಮಾಡುವ ಡಿಜಿಟಲ್ ಯಂತ್ರವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಸಂಬAಧ ಕಂಕನಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಕಿ ಅವಘಡ; ಸುಟ್ಟು ಕರಕಲಾದ ೮ ಮೀನುಗಾರಿಕಾ ದೋಣಿಗಳು
ಮಂಗಳೂರು, ನ. ೧೩: ಉಡುಪಿ ಜಿಲ್ಲೆಯ ಗಂಗೊಳ್ಳಿಯ ನದಿ ದಡದಲ್ಲಿ ಲಂಗರು ಹಾಕಲಾಗಿದ್ದ ಎಂಟು ಮೀನುಗಾರಿಕಾ ದೋಣಿಗಳು ಸೋಮವಾರ ಬೆಳಗಿನ ಜಾವ ಬೆಂಕಿಗೆ ಆಹುತಿಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಬೆಂಕಿಗೆ ಕಾರಣ ಏನೆಂಬುದು ತಕ್ಷಣಕ್ಕೆ ತಿಳಿದುಬಂದಿಲ್ಲ. ದೀಪಾವಳಿ ಹಬ್ಬದ ಅಂಗವಾಗಿ ಸಿಡಿಸಿದ ಪಟಾಕಿ ಕಿಡಿ ದೋಣಿಯ ಮೇಲೆ ಬಿದ್ದಿದ್ದರಿಂದ ಬೆಂಕಿ ಕಾಣಿಸಿಕೊಂಡಿದೆ ಎನ್ನಲಾಗಿದ್ದು, ಒಂದು ದೋಣಿಯಲ್ಲಿ ಮೊದಲಿಗೆ ಕಾಣಿಸಿಕೊಂಡ ಬೆಂಕಿಯು ಸ್ವಲ್ಪ ಸಮಯದಲ್ಲಿಯೇ ಲಂಗರು ಹಾಕಲಾಗಿದ್ದ ಇತರ ದೋಣಿಗಳಿಗೂ ಹರಡಿತು. ಕುಂದಾಪುರ ಮತ್ತು ಬೈಂದೂರಿನಿAದ ಆಗಮಿಸಿದ ಅಗ್ನಿಶಾಮಕ ಮತ್ತು ರಕ್ಷಣಾ ಸಿಬ್ಬಂದಿ ಬೆಂಕಿಯನ್ನು ಹತೋಟಿಗೆ ತಂದಿದ್ದಾರೆ. ಕರಾವಳಿ ಕಾವಲು ಸಿಬ್ಬಂದಿ ಮತ್ತು ಪೊಲೀಸರು ಸಹ ರಕ್ಷಣಾ ಕಾರ್ಯದಲ್ಲಿ ಸಹಕರಿಸಿದ್ದಾರೆ. ಅಗ್ನಿ ಅವಘಡದಿಂದ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ.