ಮುಳ್ಳೂರು, ನ. ೧೧ : ಇಲ್ಲಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಹಾಗೂ ಅಂಕನಹಳ್ಳಿ ಸರಕಾರಿ ಪ್ರೌಢ ಮತ್ತು ಹಿರಿಯ ಪ್ರಾಥಮಿಕ ಶಾಲೆ ಸಹಭಾಗಿತ್ವದಲ್ಲಿ ಪರಿಸರ ಸ್ನೇಹಿ ಹಸಿರು ದೀಪಾವಳಿ ಹಾಗೂ ಮಕ್ಕಳ ದಿನಾಚರಣೆ ಸಂಗಮ ಕಾರ್ಯಕ್ರಮ ವನ್ನು ಆಚರಿಸಲಾಯಿತು. ಸೋಮ ವಾರಪೇಟೆ ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯ ಅಧಿಕಾರಿ ಜಿ.ಎಂ.ಹೇಮAತ್ ಮತ್ತು ಅಂಕನಹಳ್ಳಿ ಸರಕಾರಿ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಸಾವಿತ್ರಿ ಉದ್ಘಾಟಿಸಿದರು.
ಕಾರ್ಯಕ್ರಮದ ಕುರಿತು ಕ್ಷೇತ್ರ ಸಮನ್ವಯ ಅಧಿಕಾರಿ ಜಿ.ಎಂ. ಹೇಮಂತ್ ಮಾತನಾಡಿದರು. ಮುಳ್ಳೂರು ಶಾಲಾ ಮುಖ್ಯ ಶಿಕ್ಷಕ ಸಿ.ಎಸ್. ಸತೀಶ್ ಮಾತನಾಡಿದರು.
ಕಾರ್ಯಕ್ರಮದಲ್ಲಿ ಶನಿವಾರಸಂತೆ ಕ್ಲಸ್ಟರ್ ಸಿಆರ್ಪಿ ಸಿ.ಕೆ. ದಿನೇಶ್, ಹಂಡ್ಲಿ ಕ್ಲಸ್ಟರ್ ಸಿಆರ್ಪಿ ಮನೋಹರ್, ಅಂಕನಹಳ್ಳಿ ಶಾಲಾ ಶಿಕ್ಷಕರುಗಳಾದ ಶಿವಕುಮಾರ್, ದೇವರಾಜ್, ದಿವಾಕರ್, ಲತಾ ಮುಳ್ಳೂರು ಶಾಲಾ ಅತಿಥಿ ಶಿಕ್ಷಕಿ ಎಂ.ಆರ್.ನವ್ಯ, ಎಸ್ಡಿಎಂಸಿ ಪದಾಧಿಕಾರಿಗಳು, ಗ್ರಾಮಸ್ಥರು ಹಾಜರಿದ್ದರು. ದೀಪಾವಳಿ ಹಬ್ಬದ ಪ್ರಯುಕ್ತ ವಿದ್ಯಾರ್ಥಿಗಳು ಹಣತೆಯನ್ನು ಹಚ್ಚುವ ಮೂಲಕ ಹಸಿರು ದೀಪಾವಳಿಯನ್ನು ಆಚರಿಸಿದರು. ನಂತರ ಮಕ್ಕಳ ದಿನಾಚರಣೆ ಪ್ರಯುಕ್ತ ಉಭಯ ಶಾಲಾ ವಿದ್ಯಾರ್ಥಿಗಳು ಪಕ್ಕದ ತ್ರಿವಳಿ ಜೈನ ಬಸದಿ ಕೇಂದ್ರದ ತಂಪಾದ ನೆರಳಿನಲ್ಲಿ ಆಟ ಆಡಿ ಸಂಭ್ರಮ ಪಟ್ಟರು.