ಮಡಿಕೇರಿ, ನ. ೧೧: ದೀಪಾವಳಿಯು ಬೆಳಕಿನ ಹಬ್ಬವಾಗಿದ್ದು, ಪರಿಸರ ಸ್ನೇಹಿ ಹಬ್ಬವನ್ನಾಗಿ ಆಚರಿಸುವಂತೆ ನಗರಸಭೆ ಪೌರಾಯುಕ್ತ ವಿಜಯ್ ಕರೆ ನೀಡಿದ್ದಾರೆ. ದೀಪಾವಳಿ ಆಚರಿಸುವ ಸಂದರ್ಭದಲ್ಲಿ ವಿವಿಧ ರೀತಿಯ ಪಟಾಕಿಗಳನ್ನು ಸ್ಪೋಟಿಸುವುದರಿಂದ ಶಬ್ದಮಾಲಿನ್ಯ, ವಾಯುಮಾಲಿನ್ಯ ಮತ್ತು ತ್ಯಾಜ್ಯ ಉತ್ಪಾದನೆಯಾಗಲಿದ್ದು, ಅದನ್ನು ತಡೆಗಟ್ಟಲು ಪರಿಸರ ಸ್ನೇಹಿ ವಸ್ತುಗಳನ್ನು ಬಳಸುವುದು ಹಾಗೂ ತ್ಯಾಜ್ಯದಿಂದ ಉಪಯುಕ್ತ ವಸ್ತುಗಳನ್ನು ಸಿದ್ಧಪಡಿಸಿ ದೀಪಾವಳಿ ಉಡುಗೊರೆ ನೀಡಬಹುದು ಹಾಗೂ hಣಣಠಿs://ಠಿಟeಜge.mಥಿgov.iಟಿ/sತಿಚಿಛಿhh.ಜivಚಿಟi-shubh-ಜiತಿಚಿಟi ಟiಟಿಞ ಮೂಲಕ ಸ್ವಚ್ಛ ದೀಪಾವಳಿ ಶುಭ ದೀಪಾವಳಿ ಆಚರಿಸುವ ಬಗ್ಗೆ ಪ್ರತಿಜ್ಞೆ ಪಡೆದು ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ನಗರಸಭೆಯ ಪೌರಾಯುಕ್ತ ವಿಜಯ್ ಕೋರಿದ್ದಾರೆ.