ಗೋಣಿಕೊಪ್ಪ ವರದಿ, ನ. ೧೧ ; ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲೆಯ ಟರ್ಫ್ ಮೈದಾನದಲ್ಲಿ ಹಾಕಿ ಕೂರ್ಗ್ ವತಿಯಿಂದ ನಡೆಯುತ್ತಿರುವ ಹಾಕಿ ಲೀಗ್ ಟೂರ್ನಿಯ ಎರಡನೇ ದಿನ ೬ ತಂಡಗಳು ಜಯಭೇರಿ ಯೊಂದಿಗೆ ಮುನ್ನಡೆ ಪಡೆದುಕೊಂಡಿದೆ.
ಕುAದ ಬೊಟ್ಯತ್ನಾಡ್, ಬ್ಲೂಸ್ಟಾರ್ ಪೊದ್ದಮಾನಿ, ಫಾಲ್ಕನ್ಸ್ ಕ್ಲಬ್, ಮೂರ್ನಾಡು ಬ್ಲೇಜ್, ಬೇಗೂರು ಹಾಗೂ ಕೋಣನಕಟ್ಟೆ ತಂಡಗಳು ಗೆಲುವಿನ ನಗೆ ಬೀರಿದವು.
ಬೊಟ್ಯತ್ನಾಡ್ ಹಾಗೂ ಮಲ್ಮ ಕಕ್ಕಬ್ಬೆ ತಂಡಗಳ ನಡುವಿನ ಪಂದ್ಯ ೩-೩ ಗೋಲುಗಳಿಂದ ಡ್ರಾ ಫಲಿತಾಂಶ ಬಂದಿತು. ಬೊಟ್ಯತ್ನಾಡ್ ಆಟಗಾರರಾದ ಭೀಮಯ್ಯ ೨, ಸೋಮಣ್ಣ, ಮಲ್ಮ ಆಟಗಾರರಾದ ಜೋಯಪ್ಪ, ಲಿಖಿತ್, ಗಣಪತಿ ತಲಾ ಒಂದೊAದು ಗೋಲು ಬಾರಿಸಿದರು.
ಬ್ಲೂಸ್ಟಾರ್ ಪೊದ್ದಮಾನಿ ತಂಡವು ಕೂಡಿಗೆ ಸ್ಪೋರ್ಟ್ಸ್ ಹಾಸ್ಟೆಲ್ ತಂಡವನ್ನು ೩-೨ ಗೋಲುಗಳಿಂದ ಮಣಿಸಿತು. ಪೊದ್ದಮಾನಿ ಪರವಾಗಿ ಧನಂಜಯ, ನಾಚಪ್ಪ, ಅಯ್ಯಪ್ಪ, ಕೂಡಿಗೆ ಆಟಗಾರರಾದ ಆಕಾಶ್, ಸುಪ್ರಿತ್ ಗೋಲು ಹೊಡೆದರು.
ಫಾಲ್ಕನ್ಸ್ ಹಾಗೂ ಜನರಲ್ ತಿಮ್ಮಯ್ಯ ತಂಡಗಳ ನಡುವಿನ ಪಂದ್ಯ ೧-೧ ಗೋಲುಗಳಿಂದ ಡ್ರಾಗೊಂಡಿತು. ಫಾಲ್ಕನ್ಸ್ ಆಟಗಾರರಾದ ಕೌಶಿಕ್, ತಿಮ್ಮಯ್ಯ ತಂಡದ ಬೋಪಣ್ಣ ಒಂದೊAದು ಗೋಲು ಬಾರಿಸಿದರು.
ಬ್ಲೇಜ್ ತಂಡವು ಅಂಜಿಕೇರಿ ತಂಡವನ್ನು ೫-೦ ಗೋಲುಗಳಿಂದ ಮಣಿಸಿತು. ಬ್ಲೇಝ್ ತಂಡದ ಪ್ರಜ್ವಲ್ ೨, ಸಜೀರ್, ನಾಣಯ್ಯ, ಚಂದನ್ ತಲಾ ಒಂದೊAದು ಗೋಲು ಹೊಡೆದರು.
ಬೇಗೂರು ತಂಡವು ಗೋಣಿಕೊಪ್ಪ ಬಿಬಿಸಿ ತಂಡದ ವಿರುದ್ದ ೪-೦ ಗೋಲುಗಳ ಅಂತರದಿAದ ಜಯಿಸಿತು. ಬೇಗೂರು ಆಟಗಾರರಾದ ಬೋಪಣ್ಣ, ಅಯ್ಯಣ್ಣ, ಪೊನ್ನಣ್ಣ, ಮಂಜುನಾಥ್ ಗೋಲು ಹೊಡೆದರು.
ಕೋಣನಕಟ್ಟೆ ತಂಡಕ್ಕೆ ಮಹಾದೇವ ಸ್ಪೋರ್ಟ್ಸ್ ಕ್ಲಬ್ ವಿರುದ್ಧ ೪-೧ ಗೋಲುಗಳ ಗೆಲುವು ದೊರೆಯಿತು. ಕೋಣನಕಟ್ಟೆ ಪರವಾಗಿ ಯಶ್ವಿನ್, ನಿಹಾಲ್, ಗಣಪತಿ, ಸೋಮಣ್ಣ, ಮಹಾದೇವ ತಿಮ್ಮಯ್ಯ ಗೋಲು ದಾಖಲಿಸಿದರು.