ಸೋಮವಾರಪೇಟೆ, ನ. ೧೦: ತುಮಕೂರಿನ ಗುಬ್ಬಿ ವೀರಣ್ಣ ಕಲಾಮಂದಿರದಲ್ಲಿ ಎರಡು ದಿನಗಳ ಕಾಲ ಜರುಗಿದ ಜೆ.ಸಿ.ಐ. ವಲಯ ಸಮ್ಮೇಳನ-೨೦೨೩ ರಲ್ಲಿ ಭಾರತ ಮತ್ತು ವಲಯ ೧೪ ರಲ್ಲಿ ಸಾಧನೆಗೈದ ಘಟಕಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಜೆ.ಸಿ.ಐ. ಸೋಮವಾರಪೇಟೆ ಪುಷ್ಪಗಿರಿ ಸಂಸ್ಥೆಗೆ ‘ಔಟ್‌ಸ್ಟಾö್ಯಂಡಿAಗ್ ಜೂನಿಯರ್ ಜೆಸಿ ಆಕ್ಟಿವೇಟಿಂಗ್ ಆಫ್ ದಿ ಜೋನ್ ವಿನ್ನರ್’ ಅವಾರ್ಡ್ ಲಭಿಸಿದ್ದು, ಜೆ.ಜೆ.ಸಿ. ರಿಶಾ ಎಸ್.ಎ. ಪಡೆದುಕೊಂಡರೆ, ‘ಔಟ್‌ಸ್ಟಾö್ಯಂಡಿAಗ್ ನ್ಯಾಷನಲ್ ಪ್ಲಾಗ್ ಶಿಫ್ ಪ್ರೋಗ್ರಾಂ’ನಲ್ಲಿ ‘ಒನ್ ಲಾಮ್ ಒನ್ ಸಸ್ಟೆನೇಬಲ್ ಪ್ರಾಜೆಕ್ಟ್ ಆಫ್ ದಿ ಜೋನ್ ವಿನ್ನರ್ ಅವಾರ್ಡ್, ‘ಔಟ್‌ಸ್ಟಾö್ಯಂಡಿAಗ್ ಲೋಕಲ್ ಆರ್ಗನೈಸೇಷನ್ ಪ್ರೆಸಿಡೆಂಟ್ ಆಫ್ ದಿ ಜೋನ್ ವಿನ್ನರ್ ಅವಾರ್ಡ್’ ವಿಭಾಗದ ೧೦ ತಂಡಗಳ ಪೈಕಿ ಐದನೇ ಸ್ಥಾನವನ್ನು ಸೋಮವಾರಪೇಟೆ ಜೆ.ಸಿ.ಐ. ಅಧ್ಯಕ್ಷೆ ರುಬೀನಾ ಎಂ.ಎ. ಪಡೆದುಕೊಂಡರು.

ಜೆ.ಸಿ.ಐ.ನ ಹಲವಷ್ಟು ಕಾರ್ಯಕ್ರಮಗಳ ಮೂಲಕ ಮನ್ನಣೆಯನ್ನು ಪಡೆದಿರುವ ಜೆ.ಸಿ. ಅಧ್ಯಕ್ಷೆ ರುಬೀನಾ ಅವರನ್ನು ಕಾರ್ಯಕ್ರಮದಲ್ಲಿ ವಲಯಾಧ್ಯಕ್ಷೆ ಯಶಸ್ವಿನಿ ಅವರು ಸನ್ಮಾನಿಸಿದರು.

ಸಮ್ಮೇಳನದಲ್ಲಿ ಜೆಸಿ ಪದಾಧಿಕಾರಿಗಳಾದ ಪ್ರಶಾಂತ್ ಹೆಚ್.ಆರ್., ನೆಲ್ಸನ್, ಮಮತಾ, ಜಗದಾಂಭ, ಮಾಯಾ, ಗುರುಪ್ರಸಾದ್, ಗಿರೀಶ್, ಮನೋಹರ್, ರಿಶಾ ಮತ್ತು ಇಶಾ ಪಾಲ್ಗೊಂಡಿದ್ದರು.