ಗೋಣಿಕೊಪ್ಪ ವರದಿ, ನ. ೧೦: ಸ್ವಾಮಿ ಶಾಂಭವಾನAದಾಜಿ ಜ್ಞಾಪಕಾರ್ಥ ಮೈಸೂರು ರಾಮಕೃಷ್ಣ ವಿದ್ಯಾ ಶಾಲಾ ಹಳೇ ವಿದ್ಯಾರ್ಥಿ ಸಂಘದ ವತಿಯಿಂದ ಕಾಪ್ಸ್ ಶಾಲೆಯಲ್ಲಿ ಸಾಮಾನ್ಯ ಜ್ಞಾನ ಲಿಖಿತ ಸ್ಪರ್ಧೆಯ ಉದ್ಘಾಟನೆ ನಡೆಯಿತು. ಪೊನ್ನಂಪೇಟೆ ರಾಮಕೃಷ್ಣ ಶಾರದಾಶ್ರಮದ ಸ್ವಾಮೀಜಿ ಧರ್ಮಾತ್ಮನಂದಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಸ್ವಾಮಿ ಶಾಂಭವಾನAದಾಜಿ ಅಧ್ಯಾತ್ಮಿಕತೆಯಲ್ಲಿ ತೊಡಗಿಕೊಂಡು ವಿಶೇಷತೆ ಮೂಡಿಸಿದ್ದಾರೆ. ಸಾರ್ವಜನಿಕರು ಕಷ್ಟದಲ್ಲಿದ್ದ ಸಂದರ್ಭ ಸಾಕಷ್ಟು ಸೇವೆ ನೀಡುವಲ್ಲಿ ಅವರು ಯಶಸ್ವಿಯಾಗಿದ್ದಾರೆ. ಅವರು ಸಮಾಜಕ್ಕೆ ನೀಡಿದ ಕೊಡುಗೆ, ಒಬ್ಬ ಸೇನಾನಿ ದೇಶಕ್ಕೆ ನೀಡಿದ ಕೊಡುಗೆಯಷ್ಟೆ ಶ್ರೇಷ್ಠ ಎಂದರು. ಸಂಘದ ಸದಸ್ಯ ಡಾ. ಚೆಪ್ಪುಡೀರ ಜಿ. ಕುಶಾಲಪ್ಪ ಮಾತನಾಡಿ, ರಾಜ್ಯವ್ಯಾಪ್ತಿ ೧೭ ಸಾವಿರ ವಿದ್ಯಾರ್ಥಿಗಳು ಪಾಲ್ಗೊಂಡಿರುವುದು ವಿಶೇಷ. ಕೊಡಗು ಜಿಲ್ಲೆಯಲ್ಲಿ ೫೬೦ ವಿದ್ಯಾರ್ಥಿಗಳು ಸ್ಪರ್ಧೆ ಎದುರಿಸಿದ್ದಾರೆ.
ಗೋಣಿಕೊಪ್ಪ ಕಾಪ್ಸ್ ಶಾಲೆ, ಸ್ವಾಮೀಜಿಯ ತವರೂರು ದೇವಣಗೇರಿ ಗ್ರಾಮದ ಬಿ.ಸಿ. ಪ್ರೌಢಶಾಲೆ, ಮಡಿಕೇರಿಯ ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆ, ಸೋಮವಾರಪೇಟೆಯ ಸಾಂದೀಪನಿ ಇಂಗ್ಲೀಷ್ ಮೀಡಿಯಂ ಶಾಲೆಗಳಲ್ಲಿ ಪ್ರತ್ಯೇಕ ಕೇಂದ್ರವಾಗಿ ಸ್ಪರ್ಧೆ ನಡೆಸಲಾಯಿತು ಎಂದು ತಿಳಿಸಿದರು. ಸ್ವಾಮಿ ವಿವೇಕಾನಂದ, ರಾಮಕೃಷ್ಣ ಅವರುಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಉದ್ಘಾಟಿಸಲಾಯಿತು.
ಕಾಪ್ಸ್ ಶಾಲಾ ಪ್ರಾಂಶುಪಾಲ ರಾಮಚಂದ್ರ, ಸಂಘದ ಸದಸ್ಯರಾದ ಡಾ. ಅಳಮೇಂಗಡ ಬೆಳ್ಯಪ್ಪ, ಡಾ. ಪೊನ್ನಪ್ಪ, ಡಾ. ಕುಟ್ಟಪ್ಪ, ಡಾ. ಕಾಡ್ಯಮಾಡ ದೇವಯ್ಯ, ಆದೇಂಗಡ ಪ್ರದೀಪ್, ಟವ್, ಕಳ್ಳಿಚಂಡ ರಾಜೀವ್, ಸಂಚಾಲಕ ಚಂದನ್ ಕಾಮತ್, ಟೀನಾ ಮಾಚಯ್ಯ ಇದ್ದರು.