ಕೂಡಿಗೆ, ನ. ೧೦: ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಕೂಡಿಗೆಯಲ್ಲಿ ಗುರುವಂದನೆ ಮತ್ತು ಸ್ನೇಹ ಸಮ್ಮಿಲನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಸಂಸ್ಥೆಯಲ್ಲಿ ೨೦೦೧ ರಿಂದ ೨೦೦೪ ರವರೆಗೆ ತರಬೇತಿ ಪಡೆದು ಪ್ರಸ್ತುತ ಬೇರೆ ಬೇರೆ ಜಿಲ್ಲೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಪ್ರಶಿಕ್ಷಣಾರ್ಥಿಗಳು ಸುಮಾರು ಇಪ್ಪತ್ತು ವರ್ಷಗಳ ನಂತರ ತಮ್ಮ ಗುರುಗಳು ಮತ್ತು ತಮ್ಮೊಂದಿಗೆ ಕಲಿತ ಎಲ್ಲರನ್ನೂ ಒಗ್ಗೂಡಿಸಿ ಒಂದು ಭಾವಪೂರ್ಣ ಕಾರ್ಯಕ್ರಮವನ್ನು ಆಯೋಜಿಸಿ ತಮ್ಮ ಗುರುಗಳಿಗೆ ಸನ್ಮಾನಿಸಿ ಗುರುವಂದನೆ ಸಲ್ಲಿಸಿದರು.

ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯನ್ನು ಸಿಂಗರಿಸಿದ ಹಳೆಯ ವಿದ್ಯಾರ್ಥಿಗಳು ವಿದ್ಯುತ್ ದೀಪಾ ಲಂಕಾರಗಳಿAದ ಜಗಮಗಿಸುವಂತೆ ಮಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಅಭಿವೃದ್ಧಿ ಉಪನಿರ್ದೇಶಕ ಚಂದ್ರಕಾAತ್ .ಎಂ. ವಹಿಸಿದ್ದರು.

ತರಬೇತಿ ಪಡೆದ ವಿದ್ಯಾರ್ಥಿಗಳು ಬಹುತೇಕ ಶಿಕ್ಷಕರಾಗಿ ವಿವಿಧ ಜಿಲ್ಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಕೆಲವು ಪ್ರಶಿಕ್ಷಣಾರ್ಥಿಗಳು ಕೆ.ಎ.ಎಸ್. ಪರೀಕ್ಷೆ ಉತ್ತೀರ್ಣರಾಗಿ ಇಂದು ಉಪಕಾರ್ಯದರ್ಶಿ, ಕಾರ್ಮಿಕ ಇಲಾಖೆ ಅಧಿಕಾರಿ, ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸುತ್ತಿರುವುದು ಹೆಮ್ಮೆಯ ವಿಚಾರವಾಗಿದೆ ಎಂದು ಅವರು ಶ್ಲಾಘಿಸಿದರು. ಕಾರ್ಯಕ್ರಮದ ಆಯೋಜನೆ ಯಲ್ಲಿ ದಿವಾಕರ್, ವಿಜಯ್ ಕುಮಾರ್, ವೇಣುಗೋಪಾಲ್, ಸತೀಶ್ ವಿಶ್ವನಾಥ್, ಉಮಾದೇವಿ ಮುಂತಾದ ಪ್ರಮುಖರು ವಹಿಸಿ ಕೊಂಡು ಎಲ್ಲರನ್ನೂ ಒಗ್ಗೂಡಿಸಿದರು. ಈ ಸಂದರ್ಭ ನಿವೃತ್ತ ಅಧಿಕಾರಿ ಕೆ.ಜೆ ಜೋಸೆಫ್, ಭಾಗ್ಯಲಕ್ಷಿö್ಮ್ಮ, ಪೆರಿಗ್ರಿನ್ ಹೆಚ್. ಮಚ್ಚಾಡೋ, ಮಂಜುಳಾ, ದೀನಾ ನಾಯಕ್ ಮೊದಲಾದವರು ಗುರುವಂದನೆ ಸ್ವೀಕರಿಸಿದರು.