ಮಡಿಕೇರಿ, ನ. ೧೦ : ಇತ್ತೀಚಿಗೆ ಧಾರವಾಡದಲ್ಲಿ ನಡೆದ ಕರ್ನಾಟಕ ಮುಕ್ತ ಮಾಸ್ಟರ್ಸ್ ಗೇಮ್ಸ್ ಟೂರ್ನಿಯಲ್ಲಿ ಜಿಲ್ಲೆಯ ಹುದಿಕೇರಿ ನಿವಾಸಿ ಮಾರಮಾಡ ಮಾಚಮ್ಮ ಅವರು ೭೫+ ವಿಭಾಗದಲ್ಲಿ ಭಾಗವಹಿಸಿ ವಿವಿಧ ಕ್ರೀಡೆಗಳಲ್ಲಿ ಮೊದಲನೆಯ ಸ್ಥಾನ ಗಳಿಸಿದ್ದಾರೆ. ಶಾಟ್ಪುಟ್, ಡಿಸ್ಕಸ್ ಥ್ರೊ, ಹ್ಯಾಮರ್ ಥ್ರೊ ಹಾಗೂ ಜಾವಲಿನ್ ಥ್ರೋ ಸ್ಪರ್ಧೆಗಳಲ್ಲಿ ಭಾಗವಹಿಸಿ ಚಿನ್ನದ ಪದಕ ಪಡೆದುಕೊಂಡಿದ್ದಾರೆ. ಈ ಮೂಲಕ ಪುಣೆಯಲ್ಲಿ ನಡೆಯಲಿರುವ ರಾಷ್ಟಿçÃಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.
ಇವರು ಕರ್ನಾಟಕ ಹಾಗೂ ಕೊಡಗು ಮಾಸ್ಟರ್ಸ್ ಗೇಮ್ಸ್ ಅಸೋಸಿಯೇಷನ್ನ ಅಧ್ಯಕ್ಷೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಬಾರಿ ಕೊಡಗಿನಿಂದ ೬ ಕ್ರೀಡಾಪಟುಗಳು ಭಾಗವಹಿಸಿ ೨೦ ಪದಕಗಳನ್ನು ಪಡೆದಿರುವುದಾಗಿ ಅವರು ಮಾಹಿತಿ ನೀಡಿದ್ದಾರೆ.