ಕೊಡ್ಲಿಪೇಟೆ, ನ. ೧೦: ತಾಲೂಕು ಸವಿತಾ ಸಮಾಜದಿಂದ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ತಾಲೂಕು ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು. ಸವಿತಾ ಸಮಾಜ ದವರು ರಾಜಕೀಯ ವಾಗಿ, ಆರ್ಥಿಕವಾಗಿ ಮತ್ತು ಶ್ಯೆಕ್ಷಣಿಕವಾಗಿ ಹಿಂದುಳಿದಿದ್ದು, ಶೋಷಣೆ, ಅಸ್ಪೃಶ್ಯತೆಯಿಂದ ತುಳಿತಕ್ಕೊಳಗಾಗಿದ್ದಾರೆ.
ಈ ಹಿನ್ನೆಲೆ ಸವಿತಾ ಸಮಾಜಕ್ಕೆ ಮೀಸಲಾತಿ ಒದಗಿಸಬೇಕು ಜಾತಿ ನಿಂದನೆ ಕಾಯ್ದೆಯಡಿ ಸೇರ್ಪಡೆಗೊಳಿಸುವುದೂ ಸೇರಿದಂತೆ ಇತರ ಬೇಡಿಕೆಗಳನ್ನೊಳಗೊಂಡ ಮನವಿಯನ್ನು ಸವಿತ ಸಮಾಜದ ತಾಲೂಕು ಉಪಾಧ್ಯಕ್ಷ ಹೆಚ್.ಆರ್. ರಾಮಕೃಷ್ಣ ಕೊಡ್ಲಿಪೇಟೆ ಮತ್ತು ಪದಾಧಿಕಾರಿಗಳು, ತಹಶೀಲ್ದಾರ್ ನರಗುಂದ ಅವರ ಮೂಲಕ ಸರ್ಕಾರಕ್ಕೆ ಸಲ್ಲಿಸಿದರು.