ಮಡಿಕೇರಿ, ನ.೧೦ : ಕೂರ್ಗ್ ಟೇಬಲ್ ಟೆನ್ನಿಸ್ ಯೂತ್ ಅಸೋಸಿಯೇಶನ್ ವತಿಯಿಂದ ಪ್ರಥಮ ಬಾರಿಗೆ ಮಲ್ಲೇಂಗಡ ಬೆಳ್ಯಪ್ಪ ಅವರ ಸ್ಮರಣಾರ್ಥ ಜಿಲ್ಲಾ ಮಟ್ಟದ ಟೇಬಲ್ ಟೆನ್ನಿಸ್ ಕೂರ್ಗ್ ಚಾಂಪಿಯನ್‌ಶಿಪ್ ಕಪ್-೨೦೨೩ ಪಂದ್ಯಾವಳಿ ಏರ್ಪಡಿಸಲಾಗಿದೆ.

ಪತ್ರಿಕಾಗೋಷ್ಠಿಯಲ್ಲಿ ಈ ವಿಚಾರ ತಿಳಿಸಿದ ಅಸೋಸಿಯೇಶನ್ ಅಧ್ಯಕ್ಷ ಮಲ್ಲೇಂಗಡ ರಚನ್ ಪೊನ್ನಪ್ಪ, ಶಾಲಾ-ಕಾಲೇಜುಗಳಲ್ಲಿ ಟೇಬಲ್ ಟೆನ್ನಿಸ್‌ಗೆ ಪ್ರೋತ್ಸಾಹ ನೀಡುವ ಸಲುವಾಗಿ ಕಾಲೇಜು ಮಕ್ಕಳನ್ನು ಸೇರಿಸಿಕೊಂಡು ಹೊಸದಾಗಿ ಯೂತ್ ಅಸೋಸಿಯೇಶನ್ ರಚನೆ ಮಾಡಲಾಗಿದೆ. ಅದರ ಮೂಲಕ ಪ್ರಥಮ ಪಂದ್ಯಾವಳಿಯನ್ನು ಆಯೋಜನೆ ಮಾಡಲಾಗಿದೆ. ಮಡಿಕೇರಿ, ನ.೧೦ : ಕೂರ್ಗ್ ಟೇಬಲ್ ಟೆನ್ನಿಸ್ ಯೂತ್ ಅಸೋಸಿಯೇಶನ್ ವತಿಯಿಂದ ಪ್ರಥಮ ಬಾರಿಗೆ ಮಲ್ಲೇಂಗಡ ಬೆಳ್ಯಪ್ಪ ಅವರ ಸ್ಮರಣಾರ್ಥ ಜಿಲ್ಲಾ ಮಟ್ಟದ ಟೇಬಲ್ ಟೆನ್ನಿಸ್ ಕೂರ್ಗ್ ಚಾಂಪಿಯನ್‌ಶಿಪ್ ಕಪ್-೨೦೨೩ ಪಂದ್ಯಾವಳಿ ಏರ್ಪಡಿಸಲಾಗಿದೆ.

ಪತ್ರಿಕಾಗೋಷ್ಠಿಯಲ್ಲಿ ಈ ವಿಚಾರ ತಿಳಿಸಿದ ಅಸೋಸಿಯೇಶನ್ ಅಧ್ಯಕ್ಷ ಮಲ್ಲೇಂಗಡ ರಚನ್ ಪೊನ್ನಪ್ಪ, ಶಾಲಾ-ಕಾಲೇಜುಗಳಲ್ಲಿ ಟೇಬಲ್ ಟೆನ್ನಿಸ್‌ಗೆ ಪ್ರೋತ್ಸಾಹ ನೀಡುವ ಸಲುವಾಗಿ ಕಾಲೇಜು ಮಕ್ಕಳನ್ನು ಸೇರಿಸಿಕೊಂಡು ಹೊಸದಾಗಿ ಯೂತ್ ಅಸೋಸಿಯೇಶನ್ ರಚನೆ ಮಾಡಲಾಗಿದೆ. ಅದರ ಮೂಲಕ ಪ್ರಥಮ ಪಂದ್ಯಾವಳಿಯನ್ನು ಆಯೋಜನೆ ಮಾಡಲಾಗಿದೆ. ವರ್ಷದೊಳಗಿನ ಬಾಲಕ- ಬಾಲಕಿಯರಿಗೆ ಟೇಬಲ್ ಟೆನ್ನಿಸ್ ಬ್ಯಾಟ್ ಹಾಗೂ ಬಾಲ್ ನೀಡಲಾಗುವದು ಎಂದು ಪೊನ್ನಪ್ಪ ತಿಳಿಸಿದರು.

ಪಂದ್ಯಾವಳಿಯಲ್ಲಿ ಭಾಗವಹಿಸಲು ಇಚ್ಚಿಸುವವರು ತಾ. ೧೬ರ ಒಳಗಡೆ ಹೆಸರು ನೋಂದಾಯಿಸಿಕೊಳ್ಳಬೇಕಿದೆ. ಹೆಚ್ಚಿನ ಮಾಹಿತಿಗೆ ೯೪೮೩೫೯೮೭೬೧, ೯೧೧೦೬೭೭೦೩೦,೯೯೮೦೦೦೦೪೩೮ ಈ ಮೊಬೈಲ್ ಸಂಖ್ಯೆಗಳನ್ನು ಸಂಪರ್ಕಿಸಬಹುದಾಗಿದೆ ಎಂದು ಹೇಳಿದರು.

ಉದ್ಘಾಟನೆ

ತಾ.೧೭ರಂದು ಬೆಳಿಗ್ಗೆ ೧೦ಗಂಟೆಗೆ ಪಂದ್ಯಾವಳಿಯ ಉದ್ಘಾಟನೆ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ಕಾರವಾರ ಮೀನುಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಕಲ್ಲೇಂಗಡ ಬಬಿನ್ ಬೋಪಣ್ಣ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ವಿಸ್ಮಯಿ ಚಕ್ರವರ್ತಿ, ಡಾ.ನವೀನ್ ಹಾಗೂ ಡಾ.ರಾಜೇಶ್ವರಿ, ಅಂತರರಾಷ್ಟಿçÃಯ ಬ್ಯಾಡ್‌ಮಿಂಟನ್ ತಾತಪಂಡ ಜ್ಯೋತಿ ಸೊಮಯ್ಯ ಉಪಸ್ಥಿತರಿರುವರು. ತಾ. ೧೯ರಂದು ಸಂಜೆ ೬ ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ನೇತ್ರ ತಜ್ಞ ಡಾ. ಪ್ರಶಾಂತ್, ಗಾನ ಪ್ರಶಾಂತ್, ವಕೀಲ ಕೆ.ಎಸ್.ಕವನ್, ವೈದ್ಯ ಡಾ. ಮೋಹನ್ ಅಪ್ಪಾಜಿ ಪಾಲ್ಗೊಳ್ಳಲಿದ್ದಾರೆ ಎಂದು ರಚನ್ ಪೊನ್ನಪ್ಪ ಮಾಹಿತಿ ನೀಡಿದರು.

ಗೋಷ್ಠಿಯಲ್ಲಿ ಅಸೋಸಿಯೇಷನ್ ಖಜಾಂಚಿ ಹೆಚ್. ಆರ್. ಪುನಿತ್, ಸದಸ್ಯರುಗಳಾದ ವಿ.ವೈ.ಚೇತನ್, ಕೆ.ಸಿ.ಪ್ರಜ್ವಲ್, ಬಿ.ಎ ಅನನ್ಯ ಇದ್ದರು.