ವೀರಾಜಪೇಟೆ, ನ. ೮: ಕೊಡವ ಕ್ರಿಕೆಟ್ ಅಕಾಡೆಮಿ ವತಿಯಿಂದ ತಾ.೧೧ ರಂದು ಚಿಕ್ಕಪೇಟೆ ಸಮೀಪದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಅಂತರ್ ಕೊಡವ ಸಮಾಜಗಳ ನಡುವೆ ಸೀಮಿತ ಓವರ್‌ಗಳ ಲೆದರ್ ಬಾಲ್ ಕ್ರಿಕೆಟ್ ಪಂದ್ಯಾಟ ಆಯೋಜಿಸಲಾಗಿದೆ ಎಂದು ಅಕಾಡೆಮಿ ನಿರ್ದೇಶಕ ಪಟ್ಟಡ ಪ್ರಕಾಶ್ ತಿಳಿಸಿದ್ದಾರೆ.

ಕ್ರಿಕೆಟ್ ಪಂದ್ಯಾವಳಿ ತಾ. ೧೪ ರಂದು ಕೊನೆಗೊಳ್ಳಲಿದೆ ಎಂದು ತಿಳಿಸಿದ್ದಾರೆ. ತಾ. ೧೧ ರಂದು ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಕೊಡವ ಕ್ರಿಕೆಟ್ ಆಕಾಡೆಮಿಯ ಅಧ್ಯಕ್ಷ ಕೀತಿಯಂಡ ಕಾರ್ಸನ್ ಕಾರ್ಯಪ್ಪ ಅವರು ಅಧ್ಯಕ್ಷತೆ ವಹಿಸಲಿದ್ದು ಸಮಾಜ ಸೇವಕ ತೇಲಪಂಡ ಶಿವಕುಮಾರ್, ಅಖಿಲ ಕೊಡವ ಸಮಾಜಗಳ ಅಧ್ಯಕ್ಷ ಪರದಂಡ ಕೆ. ಸುಬ್ರಮಣಿ, ವೀರಾಜಪೇಟೆ ಕೊಡವ ಸಮಾಜದ ಅಧ್ಯಕ್ಷ ಕುಂಬೇರ ಮನು ಕುಮಾರ್, ಪುರಸಭೆಯ ಸದಸ್ಯರಾದ ಅಂಜಪರವAಡ ಯಶೋಧ ಮಂದಣ್ಣ ಮತ್ತು ಜಯಲಕ್ಷಿö್ಮÃ ಜ್ಯುವೆಲ್ಲರಿ ಗೋಣಿಕೊಪ್ಪಲು ಮಾಲೀಕರಾದ ನಾಗೇಶ್ ಪವನ್ ಅವರುಗಳು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ತಾ ೧೪ ರಂದು ಮಧ್ಯಾಹ್ನ ೨ ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ.

ಕ್ರಿಕೆಟ್ ಪಂದ್ಯಾಟದಲ್ಲಿ ಜಿಲ್ಲೆಯ ಒಟ್ಟು ೧೦ ಕೊಡವ ಸಮಾಜಗಳು ಭಾಗವಹಿಸಲಿವೆ. ವಿಜೇತರಿಗೆ ಆಕರ್ಷಕ ಟ್ರೋಫಿ, ನಗದು ಹಾಗೂ ವೈಯಕ್ತಿಕ ಪಾರಿತೋಷಕಗಳನ್ನು ನೀಡಲಾಗುತ್ತದೆ ಎಂದು ಅಕಾಡೆಮಿ ಕಾರ್ಯದರ್ಶಿ ಕುಂಡ್ರAಡ ಬೋಪಣ್ಣ ಮಾಹಿತಿ ನೀಡಿದರು. ಹೆಚ್ಚಿನ ವಿವರಗಳಿಗಾಗಿ ೯೩೪೩೮೫೬೮೭೭, ೯೬೩೨೬೦೬೯೧೩ ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸುವAತೆ ಅಕಾಡೆಮಿ ಮನವಿ ಮಾಡಿದೆ.