ಮಡಿಕೇರಿ, ನ. ೭: ದೇವಣಗೇರಿ ಬಿ.ಸಿ. ಪ್ರೌಢಶಾಲೆ, ಈಶಾ ಆರೋಗ್ಯ ಅಲೆ, ಈಶಾ ಔಟ್ರೀಚ್, ವೀರಾಜಪೇಟೆ, ರೈತ ಉತ್ಪಾದಕ ಸಂಸ್ಥೆ ಹಾಗೂ ನಾರಾಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ, ಮೈಸೂರು, ರೋಟರಿ ಸಂಸ್ಥೆ ವೀರಾಜಪೇಟೆ ಇವರ ಸಂಯುಕ್ತ ಆಶ್ರಯದಲ್ಲಿ ಬಿ.ಸಿ. ಪ್ರೌಢಶಾಲೆಯಲ್ಲಿ ಉಚಿತ ಮಧುಮೇಹ ತಪಾಸಣೆ ಮತ್ತು ಇ.ಸಿ.ಜಿ. ಪರೀಕ್ಷಾ ಶಿಬಿರ ನಡೆಯಿತು. ಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷ ಮುಕ್ಕಾಟಿರ ಐ. ನಾಣಯ್ಯ ಅಧ್ಯಕ್ಷತೆ ವಹಿಸಿದ್ದರು.
ಶಾಲಾ ಆಡಳಿತ ಮಂಡಳಿಯ ಉಪಾಧ್ಯಕ್ಷ ಚೇಂದAಡ ಜಿ. ಪೊನ್ನಪ್ಪ, ಕಾರ್ಯನಿರ್ವಾಹಕರಾದ ಕರ್ನಂಡ ಎನ್. ಬೊಳ್ಳಮ್ಮ, ಸದಸ್ಯರುಗಳಾದ ಬೀನಂಡ ಎಸ್. ಪೂಣಚ್ಚ, ಚಾರಿಮಂಡ ಎಂ. ಮುತ್ತಪ್ಪ, ವೀರಾಜಪೇಟೆಯ ರೋಟರಿ ಸಂಸ್ಥೆಯ ಆದಿತ್ಯ, ನಾರಾಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯರಾದ ಡಾ. ಜನಾರ್ಧನ್ ರಾವ್, ಸಿಬ್ಬಂದಿಗಳಾದ ನೇತ್ರಾವತಿ, ನಿಷಾ, ಕ್ಷೇತ್ರ ಸಮನ್ವಯಾಧಿಕಾರಿ ಅನುಪ್, ವೀರಾಜಪೇಟೆ ರೈತ ಉತ್ಪಾದಕ ಸಂಸ್ಥೆ ಸಿಇಒ ವಿದ್ಯಾ, ಬಿ.ಸಿ. ಪ್ರೌಢಶಾಲೆಯ ಮುಖ್ಯ ಶಿಕ್ಷಕ ಹೆಚ್.ಡಿ. ಲೋಕೇಶ್, ಮತ್ತಿತರರು ಹಾಜರಿದ್ದರು. ವಿದ್ಯಾ ಸ್ವಾಗತಿಸಿ, ವಂದಿಸಿದರು.