ಕುಶಾಲನಗರ, ನ. ೭: ಕುಶಾಲನಗರ ಐತಿಹಾಸಿಕ ಗಣಪತಿ ದೇವಾಲಯದ ರಥೋತ್ಸವ ಡಿಸೆಂಬರ್ ೧ ರಂದು ನಡೆಯಲಿದೆ.

ಶ್ರೀ ಗಣಪತಿ ದೇವಾಲಯ ಸೇವಾ ಸಮಿತಿ ವಾರ್ಷಿಕ ಮಹಾ ಸಭೆಯಲ್ಲಿ ಈ ಬಗ್ಗೆ ದೇವಾಲಯ ಸಮಿತಿ ಅಧ್ಯಕ್ಷ ವಿ.ಎನ್. ವಸಂತ್ ಕುಮಾರ್ ತಿಳಿಸಿದ್ದಾರೆ.

ರಥೋತ್ಸವ ಅಂಗವಾಗಿ ತಾ.೨೭ ರಿಂದ ಜಾತ್ರಾ ಕಾರ್ಯಕ್ರಮ ಹಾಗೂ ದೇವಾಲಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ.

ರಥೋತ್ಸವ ಅಂಗವಾಗಿ ಜಾತ್ರಾ ಮೈದಾನದಲ್ಲಿ ರಾಸುಗಳ ಜಾತ್ರೆ, ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿ ಕೊಳ್ಳುವ ಬಗ್ಗೆ ಸಭೆಯಲ್ಲಿ ಚರ್ಚೆಗಳು ನಡೆದವು.

ಸಭೆಯಲ್ಲಿ ಮೃತಪಟ್ಟ ಸದಸ್ಯರಿಗೆ ಸಂತಾಪ ಸೂಚಿಸಿ, ಮಹಾಸಭೆಯ ವರದಿ ಮತ್ತು ಲೆಕ್ಕಪತ್ರ ಅಂಗೀಕರಿ ಸಲಾಯಿತು.

೨೦೨೩ರ ಜಾತ್ರೋತ್ಸವ ಪತ್ರಿಕೆ ಯನ್ನು ಪ್ರಧಾನ ಅರ್ಚಕರಾದ ಆರ್.ಕೆ. ನಾಗೇಂದ್ರ ಬಾಬು ಸಭೆಗೆ ಓದಿ ಹೇಳಿದರು. ಮುಂದಿನ ಸಾಲಿನ ಆಡಳಿತ ಮಂಡಳಿ ಆಯ್ಕೆ ಬಗ್ಗೆ ಚರ್ಚೆ ನಡೆದು ಕಳೆದ ನಾಲ್ಕು ದಶಕಗಳಿಂದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ವಿ.ಎನ್. ವಸಂತ್ ಕುಮಾರ್ ಅವರನ್ನೇ ಮುಂದು ವರೆಸುವಂತೆ ಸಭೆ ಸರ್ವಾನು ಮತದಿಂದ ಒಪ್ಪಿಗೆ ನೀಡಿತು.

ಸಭೆಯಲ್ಲಿ ಉಪಾಧ್ಯಕ್ಷರಾದ ಆರ್ ಬಾಬು, ಕಾರ್ಯದರ್ಶಿ ಬಿ.ಕೆ. ಮುತ್ತಣ್ಣ, ಖಜಾಂಚಿ ಎಂ.ಕೆ. ದಿನೇಶ್, ನಿರ್ದೇಶಕರಾದ ವಿ.ಡಿ. ಪುಂಡರಿಕಾಕ್ಷ, ಜಿ.ಎಲ್. ನಾಗರಾಜ್, ವಿ.ಪಿ. ಶಶಿಧರ್, ಎಂ.ವಿ. ನಾರಾಯಣ, ಖಾಯಂ ಆಹ್ವಾನಿತ ರಾದ ಟಿ.ಆರ್. ಶರವಣಕುಮಾರ್ ಮತ್ತು ವಿಶೇಷ ಆಹ್ವಾನಿತರು ಇದ್ದರು.