ಮಡಿಕೇರಿ, ನ. ೭ : ಸಮಾಜದಲ್ಲಿ ಒಗ್ಗಟ್ಟು ಮೂಡಿಸಲು ಹಾಗೂ ಪರಸ್ಪರ ವಿಶ್ವಾಸ ಮೂಡಿಸಲು ಕ್ರೀಡಾಕೂಟ ಸಹಕಾರಿಯಾಗಲಿದೆ ಎಂದು ಶಕ್ತಿ ದಿನಪತ್ರಿಕೆ ಸಂಪಾದಕ ಜಿ. ಚಿದ್ವಿಲಾಸ್ ಅಭಿಪ್ರಾಯ ವ್ಯಕ್ತಪಡಿಸಿದರು.

ಓಣಾಘೋಷಂ-ಓಣA ಸದ್ಯ ಕಾರ್ಯಕ್ರಮದ ಪ್ರಯುಕ್ತ ಮಡಿಕೇರಿ ಹಿಂದೂ ಮಲಯಾಳಿ ಸಂಘದ ವತಿಯಿಂದ ಮಲಯಾಳಿ ಸಮುದಾಯ ಬಾಂಧವರಿಗಾಗಿ ಏರ್ಪಡಿಸಲಾಗಿದ್ದ ಕ್ರೀಡಾಕೂಟವನ್ನು ಉದ್ಘಾಟನೆ ಮಾಡಿ ಅವರು ಮಾತನಾಡಿದರು. ಕ್ರೀಡೆ ಆರೋಗ್ಯಕ್ಕೆ, ಮನೋರಂಜನೆಗೆ ಒಳ್ಳೆಯದೆಂದು ಹೇಳುತ್ತಾರೆ. ಆದರೆ, ಅದು ಮಾತ್ರವಲ್ಲ ಕ್ರೀಡೆ ಸಮಾಜಗಳನ್ನು ಒಂದುಗೂಡಿಸಲು, ಒಗ್ಗಟ್ಟು ಮೂಡಿಸಲು, ಪರಸ್ಪರ ಪ್ರೀತಿ ವಿಶ್ವಾಸ ಮೂಡಿಸಲು ಸಹಕಾರಿಯಾಗಿದೆ ಎಂದು ಹೇಳಿದರು. ಪ್ರಸ್ತುತ ಕೌಟುಂಬಿಕವಾಗಿ ಎಲ್ಲರೂ ಒತ್ತಡದಲ್ಲಿದ್ದಾರೆ. ಈ ಹಿಂದಿನAತೆ ಎಲ್ಲರೂ ಒಟ್ಟು ಸೇರಲು ಸಾಧ್ಯವಿಲ್ಲದ ಪರಿಸ್ಥಿತಿ ಇದೆ. ಅಂತಹ ಸನ್ನಿವೇಶದಲ್ಲಿ ಇಂತಹ ಕ್ರೀಡಾಕೂಟಗಳಿಂದ ಒಟ್ಟು ಸೇರಲು ಅವಕಾಶವಾಗುತ್ತಿದೆ ಎಂದು ಹೇಳಿದರು.

ಸಮಾಜದ ಅಧ್ಯಕ್ಷ ಕೆ.ಎಸ್. ರಮೇಶ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನ ಕಾರ್ಯದರ್ಶಿ ಧರ್ಮೇಂದ್ರ, ಖಜಾಂಚಿ ಪಿ.ಟಿ. ಉತ್ತಮನ್, ಜಂಟಿ ಕಾರ್ಯದರ್ಶಿ ಪ್ರಮೋದ್, ಮಹಿಳಾ ಘಟಕದ ಅಧ್ಯಕ್ಷೆ ಲತಾ ರಾಜನ್, ಯುವ ಘಟಕದ ಅಧ್ಯಕ್ಷ ಎಂ.ಎಸ್. ದಿನೇಶ್, ಸಂಘದ ನಿರ್ದೇಶಕರುಗಳಾದ ಗೋಪಿನಾಥ್, ಕೆ.ಕೆ. ಮೋಹನ್, ಸುಬ್ರಮಣಿ, ಸಿ.ಕೆ. ಪ್ರಭಾಕರ್ ಪದಾಧಿಕಾರಿಗಳಿದ್ದರು. ನಂತರ ವಿವಿಧ ಕ್ರೀಡಾಕೂಟಗಳು ನಡೆದವು.